ಪುತ್ತೂರು: ಕಂಬಳಬೆಟ್ಟು ಧರ್ಮನಗರದ 51ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸುವರ್ಣ ಸಂಭ್ರಮದ ಅಂಗವಾಗಿ ಆಹ್ವಾನಿತ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆಯು ಆ.31 ರಂದು ಜರಗಿದ್ದು, ಇದರಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಫಿಲೋನಗರದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ರನ್ನರ್ಸ್ ಟ್ರೋಫಿಯೊಂದಿಗೆ ಹಾಗೂ ರೂ.10 ಸಾವಿರ ನಗದನ್ನು ಗಳಿಸಿಕೊಂಡಿದೆ.
ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ದೇಶಭಕ್ತಿ ಗೀತೆ, ಜಾಗೃತಿ ಗೀತೆ, ಜಾನಪದ ಗೀತೆ, ಭಾವಗೀತೆ, ಭರತನಾಟ್ಯ, ಯಕ್ಷಗಾನ, ಸಂಗೀತ, ಯೋಗ, ಕರಾಟೆ, ಸ್ಯಾಕ್ಸೋಫೋನ್, ವಯಲಿನ್ ವಾದನ, ಕೊಳಲು ವಾದನ, ಜನಪದ ನೃತ್ಯ, ಸಾಮಾಜಿಕ ಕಳಕಳಿಯಿರುವ ಪ್ರಹಸನ, ಹಾಸ್ಯ ಪ್ರಹಸನ ಇತ್ಯಾದಿ ಒಳಗೊಂಡಿದ್ದು ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ದ್ವಿತೀಯ ವಿಜ್ಞಾನ ವಿಭಾಗದ ಅಶ್ವಿಜ, ಸಮೃದ್ಧಿ, ವಿಭಾಶ್ರೀ, ಸಾನ್ವಿಕ ಕೆ.ಎಸ್, ಸಂಜನಾ ಕೆ, ಮನ್ವಿತ್, ಜೀವಿತ್, ಅಂಜು ತೋಮಸ್, ಪ್ರಥಮ ವಿಜ್ಞಾನ ವಿಭಾಗದ ಶಾಂಭವಿ, ವಿಂಧ್ಯಾಶ್ರೀ ರೈ, ಕೃಷ್ಣಪ್ರಿಯ, ತೃಪ್ತಿ, ಮಾನಸ, ದ್ವಿತೀಯ ವಾಣಿಜ್ಯ ವಿಭಾಗದ ಕೀರ್ತನ್, ಪ್ರಥಮ ವಾಣಿಜ್ಯ ವಿಭಾಗದ ನಂದನ್ರವರು ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾರವರ ಮಾರ್ಗದರ್ಶನದಲ್ಲಿ ಕನ್ನಡ ವಿಭಾಗದ ಉಪನ್ಯಾಸಕಿ ಸುಮನಾ ಪ್ರಶಾಂತ್ರವರು ವಿದ್ಯಾರ್ಥಿಗಳನ್ನು ತಯಾರುಗೊಳಿಸಿದ್ದರು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.