ಪುತ್ತೂರು: ನೆಹರೂನಗರ ಕಲ್ಲೇಗ ಬಳಿಯ ಸಾವಿತ್ರಿ ಕಾಂಪ್ಲೆಕ್ಸ್ ನಲ್ಲಿ ಐಸ್ ಕ್ರೀಂ ಪಾರ್ಲರ್ ನೊಂದಿಗೆ ಸೌತ್ ಇಂಡಿಯನ್ ಕಿಚನ್ಸ್ ದ ಪರ್ಲ್ ಸಿಟಿ ಕೆಫೆ ನವೀಕೃತಗೊಂಡು ಸೆ.3ರಂದು ಶುಭಾರಂಭಗೊಂಡಿತು. ಪುರೋಹಿತರಾದ ಗಣೇಶ್ ಭಟ್ ಪೂಜಾ ವಿಧಿವಿಧಾನ ನೆರವೇರಿಸಿದರು. ದೊಡ್ಡಡ್ಕ ಷಣ್ಮುಖ ಜ್ಯೋತಿಷ್ಯಾಲಯದ ಜ್ಯೋತಿಷ್ಯರಾದ ಸುಬ್ರಹ್ಮಣ್ಯ ಬಲ್ಯಾಯರವರು ಆಗಮಿಸಿ ಸಂಸ್ಥೆಗೆ ಶುಭಹಾರೈಸಿದರು.
ಸಂಪೂರ್ಣ ಸಸ್ಯಹಾರಿ ಹೊಟೇಲ್ ಇದಾಗಿದ್ದು, ನಮ್ಮಲ್ಲಿ ಕ್ರಿಸ್ಪಿ ಆಫ್ ಸ್ಪೆಷಲ್ ದೋಸೆಗಳು, ಟೀ, ಕಾಫಿ, ಚಾಟ್ಸ್, ಐಸ್ ಕ್ರೀಂ, ಚೈನೀಸ್ ಐಟಂಗಳು ಲಭ್ಯವಿದೆ. ಹವಾನಿಯಂತ್ರಿತ ಹಾಗೂ ಫ್ಯಾಮಿಲಿಗಳು ಪ್ರತ್ಯೇಕವಾಗಿ ಕುಳಿತುಕೊಳ್ಳಬಹುದಾದ ಕ್ಯಾಬಿನ್ ಗಳನ್ನು ಜೋಡಣೆ ಮಾಡಲಾಗಿದ್ದು, ಸಂಸ್ಥೆಯ ಮುಂಭಾಗದಲ್ಲಿ ವಿಸ್ತಾರವಾದ ಪಾರ್ಕಿಂಗ್ ಸೌಲಭ್ಯವಿದೆ. ಸಂಸ್ಥೆಯಲ್ಲಿ ಪಾರ್ಸಲ್ ವ್ಯವಸ್ಥೆಯೂ ಲಭ್ಯವಿದ್ದು, FAGO ಯ್ಯಾಪ್ ಮೂಲಕ ಬುಕ್ಕಿಂಗ್ ಮಾಡಿದಲ್ಲಿ ಡೋರ್ ಡೆಲಿವರಿ ಸೌಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ 9036776034 ಸಂಪರ್ಕಿಸಬಹುದು. ಹಿಂದಿನಿಂದಲೂ ಸಂಸ್ಥೆಗೆ ಗ್ರಾಹಕರಿಂದ ಉತ್ತಮ ಸಹಕಾರ ಲಭಿಸಿದ್ದು, ಇದೀಗ ಗ್ರಾಹಕರ ಅಪೇಕ್ಷೆ ಮೇರೆಗೆ ಹೊಸದಾಗಿ ದೋಸೆ ಸೆಕ್ಷನ್ ಅನ್ನು ತೆರೆಯಲಾಗಿದೆ. ಗ್ರಾಹಕರು ಎಂದಿನಂತೆ ಸಹಕರಿಸುವಂತೆ ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.