ಕಾವು:ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 39ನೇ ವರ್ಷದ ಗಣೇಶೋತ್ಸವ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವು ಪಂಚಲಿಗೇಶ್ವರ ದೇವಾಲಯದ ಸಭಾಭವನದಲ್ಲಿ ನಡೆಯಿತು.ಅರ್ಚಕರಾದ ಶಿವಪ್ರಸಾದ್ ಕಡಮಣ್ಣಾಯರವರ ಪೌರೋಹಿತ್ಯದಲ್ಲಿ ಗಣೇಶ ವಿಗ್ರಹ ಪ್ರತಿಷ್ಠೆ, ,ಗಣಹೋಮ, ಮಹಾಪೂಜೆ ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮ
ಆಧ್ಯಾತ್ಮಿಕ ಬದುಕು ನಡೆಸುವ ಮೂಲಕ ಹಿಂದೂ ಸಮಾಜದ ವಿಚಾರಗಳು ಜಗತ್ತಿಗೆ ಮಾರ್ಗದರ್ಶನವಾಗಬೇಕು -ಪ್ರವೀಣ್ ಸರಳಾಯ
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಮಾತನಾಡಿದ ಗೋಸೇವಾ ಗತಿವಿಧಿ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕರಾದ ಪ್ರವೀಣ್ ಸರಳಾ ಯ ಗಣೇಶೋತ್ಸವ ಆಚರಣೆ ಸಾಮಾಜಿಕ ಸಾಮರಸ್ಯದ ಸಂಕೇತವಾಗಿದ್ದು,ಹಿಂದೂ ಸಮಾಜದ ಒಟ್ಟುಗೂಡುವುದರ ಜೊತೆಗೆ ದೇಶ ಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು,ಆಧ್ಯಾತ್ಮಿಕ ಬದುಕು ನಡೆಸುವ ಮೂಲಕ ಹಿಂದೂ ಸಮಾಜದ ವಿಚಾರಗಳು ಜಗತ್ತಿಗೆ ಮಾರ್ಗದರ್ಶನವಾಗಬೇಕು ಎಂದರು.
ಸುಸಂಸ್ಕೃತ ಮಕ್ಕಳನ್ನಾಗಿ ಬೆಳೆಸುವ ಜವಾಬ್ದಾರಿ ನಮ್ಮದಾಗಬೇಕು-ಚಂದ್ರಶೇಖರ ನಿಧಿಮುಂಡ
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕಾವು ಶ್ರೀ ಪಂಚಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಹಾಗೂ ಕಾವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವ ಸಲಹೆಗಾರರಾದ ಚಂದ್ರಶೇಖರ ರಾವ್ ನಿಧಿಮುಂಡ ಸಂಸ್ಕಾರಯುತ ಜೀವನಕ್ಕೆ ಮುನ್ನುಡಿ ಬರೆಯಲು ಗಣೇಶೋತ್ಸವದಂತಹ ಸಂಸ್ಕಾರಯುತ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು, ಸನಾತನ ಸಂಸ್ಕೃತಿ ಸಂಸ್ಕಾರಗಳನ್ನು ಮಕ್ಕಳಿಗೆ ತಿಳಿಸಿ ಮೂಲಕ ಸುಸಂಸ್ಕೃತ ಮಕ್ಕಳನ್ನಾಗಿ ಬೆಳೆಸುವ ಜವಾಬ್ದಾರಿ ನಮ್ಮದಾಗಬೇಕು ಎಂದರು.
ದೇಶಭಕ್ತಿ ಹಾಗೂದ ಧಾರ್ಮಿಕ ಪ್ರಜ್ಞೆ ಮೂಡಿಸುವಲ್ಲಿ ಗಣೇಶೋತ್ಸವ ಸಹಕಾರಿ – ನನ್ಯ ಅಚ್ಚುತ ಮೂಡಿತ್ತಾಯ
ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಕಾವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ಗೌರವಾಧ್ಯಕ್ಷರಾದ ನನ್ಯ ಅಚ್ಚುತ ಮೂಡಿತ್ತಾಯ ಹಿಂದುತ್ವದ ರಕ್ಷಣೆಗೆ ಮತ್ತು ಜನರಲ್ಲಿ ದೇಶಭಕ್ತಿ,ಧಾರ್ಮಿಕ ಪ್ರಜ್ಞೆ ಯನ್ನು ಮೂಡಿಸುವಲ್ಲಿ ಗಣೇಶೋತ್ಸವವು ಸಹಕಾರಿಯಾಗಿದೆ, ಬಾಲಗಂಗಾಧರ ತಿಲಕರು ಆರಂಭಿಸಿದ ಗಣೇಶೋತ್ಸವವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಲೋಕೇಶ್ ಚಾಕೋಟೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಮಿತಿ ಅಧ್ಯಕ್ಷರಾದ ನವೀನ್ ನನ್ಯ ಪಟ್ಟಾಜೆ ವಂದಿಸಿದರು, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾವು ವಾರ್ಷಿಕ ವರದಿ ವಾಚಿಸಿದರು,ಸದಸ್ಯರಾದ ದಿವ್ಯಪ್ರಸಾದ್ ಎ ಎಂ ಕಾರ್ಯಕ್ರಮ ನಿರ್ವಹಿಸಿದರು.
ಭಜನಾ ಸೇವಾ ಕಾರ್ಯಕ್ರಮ
ವಿಗ್ರಹ ಪ್ರತಿಷ್ಠೆ,ಗಣಹೋಮದ ಬಳಿಕ ತುಡರ್ ಭಜನಾ ಸಂಘ ನನ್ಯ ಕಾವು,ದುರ್ಗಾವಾಹಿನಿ ಭಜನಾ ಮಂಡಳಿ ಮಾಣಿಯಡ್ಕ, ಮುತ್ತು ಮಾರಿಯಮ್ಮ ಭಜನಾ ಮಂಡಳಿ ಹಾಗೂ ರಾಮಕೃಷ್ಣ ಭಜನಾ ಮಂಡಳಿ ಕೌಡಿಚ್ಚಾರು ಇವರ ವತಿಯಿಂದ ಭಜನಾ ಸೇವಾ ಕಾರ್ಯಕ್ರಮ ನಡೆಯಿತು.
ಬಹುಮಾನ ವಿತರಣೆ, ಗೌರವಾರ್ಪಣೆ
ಶ್ರೀಕ್ರಷ್ಣ ಜನ್ಮಾಷ್ಟಮಿ ದಿನದಂದು ಸಮಿತಿಯ ವತಿಯಿಂದ ಪುರುಷರು,ಮಹಿಳೆಯರು,ಪ್ರಾಥಮಿಕ ಹಂತ, ಪ್ರೌಢ ಹಂತ ,ಪಿ ಯು ಸಿ ವಿಭಾಗ ಹಾಗೂ ಅಂಗನವಾಡಿ ಪುಟಾಣಿಗಳಿಗೆ ಆಯೋಜಿಸಿದ ಕ್ರೀಡಾಕೂಟದ ಬಹುಮಾನ ವಿತರಣೆ ಸಭಾ ಕಾರ್ಯಕ್ರಮದಲ್ಲಿ ನಡೆಯಿತು.
ಕ್ರೀಡಾಕೂಟದಲ್ಲಿ ತೀರ್ಪುಗಾರರಾಗಿ ಸಹಕರಿಸಿದ ಪ್ರಮೋದ್ ಶಾಖಾಮಲೆ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹಾಗೂ ಗಣೇಶೋತ್ಸವಕ್ಕೆ ವಿಗ್ರಹ ದಾನಿಗಳಾಗಿ ಸಹಕರಿಸಿದ ಕಾವು ಶ್ರೀ ಪಂಚಲಿಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಭಾಸ್ಕರ ಬಲ್ಯಾಯ ಕಾವು ಇವರಿಗೆ ಶಾಲು ಹಾಕಿ ,ಶ್ರೀ ದೇವರ ಪ್ರಸಾದ ನೀಡಿ ಗೌರವಿಸಲಾಯಿತು.
ಭಕ್ತಿ ರಸಮಂಜರಿ ಕಾರ್ಯಕ್ರಮ
ಧಾರ್ಮಿಕ ಸಭಾ ಕಾರ್ಯಕ್ರಮದ ಬಳಿಕ ಚಿಂತನಾ ಸೌಂಡ್ಸ್ ಇದರ ಮಾಲಕರಾದ ಯೋಗೀಶ್ ಕಾವು ಇವರ ಪ್ರಾಯೋಜಕತ್ವದಲ್ಲಿ ಭಕ್ತಿರಸಮಂಜರಿ ಕಾರ್ಯಕ್ರಮ ನಡೆಯಿತು.
ಶ್ರೀ ವಿನಾಯಕನ ಆಕರ್ಷಕ ಶೋಭಾಯಾತ್ರೆ
ಕಾವು ಶ್ರೀ ಪಂಚಲಿಗೇಶ್ವರ ದೇವಾಲಯದಲ್ಲಿ ಪೂಜಿಸಲ್ಪಟ್ಟ ಗಣೇಶ ವಿಗ್ರಹವನ್ನು ಸಂಜೆ ಆಕರ್ಷಕ ಶೋಭಾಯಾತ್ರೆಯ ಮೂಲಕ ಕಾವು ಪಂಚವಟಿ ನಗರ ,ಕಾವು ಶಿವಪೇಟೆ ಯ ಮೂಲಕ ಸಾಗಿ ಆಮ್ಚಿನಡ್ಕ ಸೀರೆ ಹೊಳೆಯಲ್ಲಿ ಜಲಸ್ಥಂಭನಗೊಳಿಸಲಾಯಿತು.