ಕಾರ್ಪಾಡಿ ದೇವಳದಲ್ಲಿ ಅಷ್ಟಮಂಗಲ ಪ್ರಶ್ನೆಯ ಪರಿಹಾರ ಕಾರ್ಯ

0

ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೆ. 3ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ತಿಲಹೋಮ, ಪವಮಾನ ಹೋಮ, ವಿಷ್ಣು ಸಹಸ್ರನಾಮ ಪಾರಾಯಣ, ಬ್ರಾಹ್ಮಣ ಆರಾಧನೆ, ಸಾಯುಜ್ಯ ಪೂಜೆ ಜರಗಿತು.
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆದು, ಸಂಜೆ ಸ್ವಸ್ತಿ ಪುಣ್ಯಾಹ ವಾಚನ, ಪ್ರಾಸಾದ ಶುದ್ದಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ಮಹಾಪೂಜೆ, ಪ್ರಸಾದ ವಿತರಣೆ ಜರಗಿತು.
ಇಂದು ದ್ರವ್ಯಕಲಶ ಪೂಜೆ:
ಇಂದು ಬೆಳಿಗ್ಗೆ 7ಕ್ಕೆ ಮಹಾಗಣಪತಿ ಹೋಮ, ಬಿಂಬ ಶುದ್ಧಿ ಕಲಶ ಪೂಜೆ, ನವೀಕರಣ ಪ್ರಾಯಶ್ಚಿತ ಹೋಮ, ಮಧ್ಯಾಹ್ನ 12ಕ್ಕೆ ಬಿಂಬ ಶುದ್ಧಿ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 5ರಿಂದ ಮಂಟಪ ಶುದ್ಧಿ, ಕುಂಭೇಶ ಕರ್ಕರೀ ಪೂಜೆ, ಪರಿಕಲಶ ಪೂಜೆ, ದ್ರವ್ಯಕಲಶ ಪೂಜೆ, ಅಧಿವಾಸ ಹೋಮ, ಕಲಶಾಧಿವಾಸ, ಮಹಾಪೂಜೆ, ಪ್ರಸಾದ ವಿತರಣೆ ಜರಗಲಿದೆ.

ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೆ. 2ರಂದು ರಾತ್ರಿ ಮಹಾಸುದರ್ಶನ ಹೋಮ ಜರಗಿತು.

ಮಹಾಸುದರ್ಶನ ಹೋಮದ ಬಳಿಕ ಆವಾಹನೆ, ಬಾಧಾಕರ್ಷಣೆ, ಉಚ್ಚಾಟನೆ ನಡೆಯಿತು.

LEAVE A REPLY

Please enter your comment!
Please enter your name here