ಪುತ್ತೂರು: ನೆಹರು ನಗರದ ಶಿವನಗರ ಶಿವಮಣಿ ಕಲಾ ಸಂಘದ 5ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರಥಮ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಲಿಂಗನಗುಡ್ಡೆ ಶ್ರೀಸೋಮಲಿಂಗೇಶ್ವರ ಮಂದಿರದ ವಠಾರದಲ್ಲಿ ಆ.28 ರಂದು ಜರುಗಿತು.
ನಗರಸಭಾ ಸದಸ್ಯ ಶಿವರಾಮ ಸಪಲ್ಯ ದೀಪ ಬೆಳಗಿಸಿ ಶುಭ ಹಾರೈಕೆಗಳೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಟ್ಲ ಸ್ಪೋರ್ಟ್ಸ್ ನೆಹರು ನಗರ ಮಾಲಕ ಧನಂಜಯ್ ಪಟ್ಲರವರು ಮುಖ್ಯ ಅಥಿತಿಗಳಾಗಿ ಪಾಲ್ಗೊಂಡು ಶುಭ ಹಾರೈಸಿದರು.
ವೇದಿಕೆಯಲ್ಲಿ ಸಂಜೀವ ಸಪಲ್ಯ, ಚಂದ್ರಾವತಿ ಶೇವಿರೆ ಹಾಗೂ ದೇವಸ್ಥಾನದ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ಕಸಾಪ ಪುತ್ತೂರು ಅಧ್ಯಕ್ಷ ಉಮೇಶ್ ನಾಯಕ್ ಪುತ್ತೂರು, ಹಾಗೂ ಶಿವಮಣಿ ಸಾಂಸ್ಕೃತಿಕ ಕಲಾಸಂಘದ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ಬಳಿಕ ಅರು ತಿಂಗಳ ಶಿಶು ವಯೋಮಾನದಿಂದ 5 ವರ್ಷದ ವರೆಗಿಗ ಮಕ್ಕಳ ಕೃಷ್ಣ ವೇಷ ಸ್ಪರ್ಧೆ ಹಾಗೂ ವಿವಿಧ ಕೃಷ್ಣ ವೇಷ ಪ್ರದರ್ಶನ ನಡೆಯಿತು. ಒಟ್ಟು 24 ಕಂದಮ್ಮಗಳು ಕೃಷ್ಣ ವೇಷ ಸ್ಪರ್ದೆಯಲ್ಲಿ ಪಾಲ್ಗೊಂಡಿದ್ದರು. ಆಟೋಟ ಸ್ಪರ್ದೆಯಲ್ಲಿ ಪುಟ್ಟ ಮಕ್ಕಳಿಗೆ ಬಾಲ್ ಪಾಸಿಂಗ್, ಬಕೆಟ್ಟಿಗೆ ಬಾಲ್ ಎಸೆತ, ಬಾಲಕ,ಬಾಲಕಿಯರಿಗೆ ಸಂಗೀತ ಕುರ್ಚಿ,ವಯಸ್ಕ ಮಹಿಳೆ ಯರಿಗೆ ನಿಂಬೆ ಚಮಚ ಓಟ, ಹಗ್ಗ ಜಗ್ಗಾಟ, ಸಂಗೀತ ಕುರ್ಚಿ ಆಟ, ಪುರುಷರಿಗೆ ಹಗ್ಗ ಜಗ್ಗಾಟ, ಸಂಗೀತ ಕುರ್ಚಿ ಸ್ಪರ್ದೆ ಏರ್ಪಡಿಸಲಾಯಿತು.
ಮದ್ಯಾಹ್ನ ಸಿಂಪಲ್ ಮೆಲೊಡಿಸ್ ತಂಡ ಪಡ್ಡಾಯೂರು ಬಳಗದ ಆಹ್ವಾನಿತ ಕಲಾವಿದರಿಂದ ಸುಗಮ ಸಂಗೀತ, ಭಕ್ತಿ ಗೀತೆ, ನೃತ್ಯಗೀತೆ ರಸಮಂಜರಿ ನಡೆಯಿತು. ದಾನಿಗಳ ಸಹಕಾರದಲ್ಲಿ ಮದ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ 300 ಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದರು. ಸಂಜೆ ನಡೆದ ಸಭಾ ಕಾರ್ಯಕ್ರಮ, ಪ್ರಶಸ್ತಿ ಪ್ರಧಾನ ಕಾರ್ಯಕ್ರಮ,ಅಟೋಟ ಸ್ಪರ್ದೆಗಳ ಬಹುಮಾನ ವಿತರಣೆಯಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ನಗರಸಭೆ ಅದ್ಯಕ್ಷ ಜೀವಂಧರ್ ಜೈನ್ ಅನುಪಸ್ಥಿತಿಯಲ್ಲಿ ಸ್ಥಳೀಯ ಕೌನ್ಸಿಲರ್ ಶಿವರಾಮ ಸಪಲ್ಯ ಅಲಂಕರಿಸಿದರು.
ಮುಖ್ಯ ಅತಿಥಿಗಳಾಗಿ ಅಶೋಕ್ ಕುಮಾರ್ ರೈ ಅರ್ಪಿಣಿ ಗುತ್ತು, ಸಹಜ್ ರೈ ಬಳಜ್ಜ, ಜಿ. ಜಗದೀಶ್ ನಾಯಕ್ ಉಪ್ಪಿನಂಗಡಿ, ಪುತ್ತೂರು ತಾಲೂಕು ಕ್ರೀಡಾಧಿಕಾರಿ ಶ್ರೀಕಾಂತ್ ಪೂಜಾರಿ ಬಿರಾವು, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ ನಾಯಕ್, ಕೆ.ಬಿ. ಜನಾರ್ಧನ್ ಗೌಡ, ಶಿವರಾಮ ಸಪಲ್ಯ ಮತ್ತು ಶಿವಮಣಿ ಕಲಾ ಸಂಘದ ಅಧ್ಯಕ್ಷರಾದ ದೀಪಕ್ ಪೈ ಉಪ್ಪಿನಂಗಡಿ ಹಾಗೂ ಸಾಂಸ್ಕೃತಿಕ ಸಲಹಾ ಸಮಿತಿಯ ಅಧ್ಯಕ್ಷರಾದ ಸಂತೋಷ್ ಜೆ.ಪಿ. ಮುರ, ಸಂಚಾಲಕರಾದ ಮನುಕುಮಾರ್ ಶಿವನಗರ ಉಪಸ್ಥಿತರಿದ್ದರು.
ಅರುಣಾ ಆಚಾರ್ಯ ಪ್ರಾರ್ಥನೆ ಹಾಡಿದರು. ಶ್ರೀಮಾನ್ ಸ್ವಾಗತಿಸಿ ಸಂಘದ ಉಪಾಧ್ಯಕ್ಷ ಶ್ರೀ ಸುದರ್ಶನ್ ರವರು ಪ್ರಾಸ್ತಾವಿಕ ಭಾಷಣ ಮಾಡಿದರು.
ಸಭಾ ಕಾರ್ಯಕ್ರಮದಲ್ಲಿ ಕಲಾವಿದರು ಮತ್ತು ಕಲಾ ಪೋಷಕ 17 ಸಾಧಕರಿಗೆ ಬಿರುದು, ಪ್ರಶಸ್ತಿ ಹಾಗೂ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಉಪ್ಪಿನಂಗಡಿಯ ಗಂಗಾಧರ್ ಟೈಲರ್ ಕೋಟೆ ಇವರಿಗೆ ಕಲಾ ಕೌಸ್ತುಭ, ರಾಜಶೇಖರ್ ಶಾಂತಿನಗರ ಇವರಿಗೆ ಹಾಸ್ಯ ಸಿಂಧೂರ , ಅಶೋಕ್ ಬನ್ನೂರುರವರಿಗೆ ಕಲಾ ಚತುರ, ದೀಪಕ್ ಯು. ಪೈ ಯವರಿಗೆ ಸವ್ಯಸಾಚಿ, ಪುತ್ತೂರು ತಾಲೂಕು ಕ್ರೀಡಾಧಿಕಾರಿ ಶ್ರೀಕಾಂತ್ ಬಿರಾವು ರವರಿಗೆ ಪ್ರತಿಭಾ ರತ್ನ ಬಿರುದು, ಶಿವಮಣಿ ಕಲಾ ಸಂಘದ ನವೀನ್ ಸೀಟಿ ಗುಡ್ಡೆ ಇವರಿಗೆ ಸೌಖ್ಯ ಸಂಧಾನಕಾರ ಬಿರುದು, ಸುದರ್ಶನ್ ಪುತ್ತೂರು, ಕಲಾವಿಧ ಕೃಷ್ಣಪ್ಪ ಶಿವನಗರ, ಸಂತೋಷ್ ಜೆ.ಪಿ. ಮುರ, ಶ್ರಿಧರ್ ಯು.ಕೆ. ಕುಂಜಾರು, ಅರುಣಾ ಆಚಾರ್ಯ, ನಿರ್ಮಲಾ ದೇವಾಡಿಗ, ನಳಿನಿ ಪಡ್ಡಾಯೂರುಗಳವರಿಗೆ ಸೇವಾ ರತ್ನ ಪ್ರಶಸ್ತಿ, ಬಾಲ ಕಲಾವಿಧರಾದ ನಿಹಾರಿಕಾ ಕಾಟುಕುಕ್ಕೆ, ಮೋನಿಕ ಬಿ.ವಿ. ಹಾಗೂ ಮನಸ್ವೀ ಪಿ. ಇವರಿಗೆ ಸ್ಟಾರ್ ಅಪ್ ದಿ ಶಿವಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಂಚಾಲಕ ಮನುಕುಮಾರ್ ರವರಿಗೆ ಸಂಘಟನಾ ಸಾರಥಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಅನ್ನಪೂರ್ಣ ಧನ್ಯವಾದ ಸಮರ್ಪಿಸಿದರು. ವಿನೋದ್ ಪಿ. ಕಲ್ಲೇಗ ಕಾರ್ಯಕ್ರಮದ ನಿರೂಪಣೆ ಗೈದರು.