ಪುತ್ತೂರು: ಪುತ್ತೂರು ನಲಿಕೆಯವರ ಸಮಾಜ ಸೇವಾ ಸಂಘ ಇದರ ಸಹಯೋಗದಲ್ಲಿ ಪೆರ್ಲಂಪಾಡಿ ವಲಯದ ಸಭೆಯು ತಾಲೂಕು ಉಪಾಧ್ಯಕ್ಷ ಶ್ರೀಧರ್ ಪೆರ್ಲಂಪಾಡಿ ನೇತೃತ್ವದಲ್ಲಿ ಚಿದಾನಂದ ಪೆರ್ಲಂಪಾಡಿ ಇವರ ಅಧ್ಯಕ್ಷತೆಯಲ್ಲಿ ಸೆ.03 ಎಂದು ಪೆರ್ಲಂಪಾಡಿಯ ಅಂಬೇಡ್ಕರ್ ಭವನದಲ್ಲಿ ಜರಗಿತು. ಹಿರಿಯರಾದ ಬಾಬು ನಲಿಕೆ ಸಿದ್ಧಮೂಲೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿ, ದಶ್ಚಚಗಳನ್ನು ದೂರ ಮಾಡಿದಾಗ ಸಮಾಜ ನಮ್ಮನ್ನು ಗುರುತಿಸುವಂತಾಗುತ್ತದೆ ಎಂದು ಹೇಳಿ ಶುಭ ಹಾರೈಸಿದರು. ಸ್ಥಾಪಕಾಧ್ಯಕ್ಷ ಚಂದ್ರ ಇದ್ಪಾಡಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರೂ ಪರಸ್ಪರ ಹೊಂದಾಣಿಯಿಂದ, ಸಹಕಾರದೊಂದಿಗೆ ಇದ್ದಾಗ ಸಂಘಟನೆ ಬಲವಾಗುದೆಂದು ಸಲಹೆ ನೀಡಿದರು. ತಾಲೂಕು ಸಂಘದ ಜತೆ ಕಾರ್ಯದರ್ಶಿ ಅರ್ಪಣಾ ಈಶ್ವರಮಂಗಲ, ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಮಾಜಿ ಅಧ್ಯಕ್ಷ ಡೊಂಬಯ್ಯ ಕಾಪೆಜಾಲು ಹಾಗೂ ರಾಜ್ಯಾಧ್ಯಕ್ಷ ಸುಬ್ರಾಯ ಕಲ್ಮಂಜ ಇವರು ಮಾತನಾಡಿ, ಧೈವಾರಾಧನೆಯಲ್ಲಿ ಆಡಂಬರ ಇರದೆ ಹಿರಿಯರನ್ನು ಸೇರಿಸಿಕೊಂಡು ಹಿಂದಿನ ಸಂಪ್ರದಾಯದಂತೆ ಕಾರ್ಯ ನಡೆಸಿಕೊಂಡು ಬರಬೇಕು ಎಂದರು. ಹಿರಿಯರಾದ ಚೆನ್ನಮ್ಮ ಸೇಡಿಯಾಪು, ಕೆಯ್ಯೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕಿಟ್ಟ ಅಜಲ ಮಾಡಾವು, ರಾಜ್ಯ ಕಾರ್ಯದರ್ಶಿ ದೇವಿದಾಸ್ ಕುರಿಯ, ತಾಲೂಕು ಪ್ರಧಾನ ಕಾರ್ಯದರ್ಶಿ ಕೃಷ್ಣ ಬುಳೇರಿಕಟ್ಟೆ , ತಾಲೂಕು ಅಧ್ಯಕ್ಷ ರವಿ ಎಂಡಸಾಗುರವರು ಮಾತನಾಡಿ, ಸಂಘಕ್ಕೆ ಜಾಗ ಮತ್ತು ಸಭಾಂಗಣದಲ್ಲಿ ಭವನಕ್ಕಾಗಿ ನಾನು ಪಯತ್ನಿಸುತ್ತೇನೆ ಎಂದು ತಿಳಿಸಿದರು. ತಾಲೂಕು ಸಂಘದ ಲೆಕ್ಕ ಪತ್ರವನ್ನು ಕಾರ್ಯದರ್ಶಿ ಕೃಷ್ಣ ಬುಳೇರಿಕಟ್ಟೆ ಓದಿದರು. ಉಮಾವತಿ ಮತ್ತು ಕಾವ್ಯ ಪ್ರಾರ್ಥಿಸಿದರು. ಶ್ರೀಧರ್ ಪೆರ್ಲಂಪಾಡಿ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು. ಮೋಹನ್ ನಿಡ್ಪಳ್ಳಿ ವಂದಿಸಿದರು.
ಸಮಿತಿ ರಚನೆ
ಪೆರ್ಲಂಪಾಡಿ ವಲಯಕ್ಕೆ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಲವ ಕುಮಾರ್, ಉಪಾಧ್ಯಕ್ಷರಾಗಿ ರಮೇಶ್, ಕಾರ್ಯದರ್ಶಿಯಾಗಿ ಉಮಾವತಿ, ಜತೆ ಕಾರ್ಯದರ್ಶಿಯಾಗಿ ಅಶೋಕ್, ಕೋಶಾಧಿಕಾರಿಯಾಗಿ ಶೀನ, ಗೌರವಾಧ್ಯಕ್ಷರಾಗಿ ಬಾಬು, ಸ್ಥಾಪಕಾಧ್ಯಕ್ಷರಾಗಿ ಚಿದಾನಂದ ಇವರನ್ನು ಆಯ್ಕೆ ಮಾಡಲಾಯಿತು. ಸದಸ್ಯರುಗಳಾಗಿ ವಿನೋದ, ನಯನ, ಶಾಂತಾ, ಮಮತಾ, ಉಷಾ, ಬಬಿತಾ, ಲತಾ, ಉಮೇಶ್, ದಯಾನಂದ, ಇವರುಗಳನ್ನು ಆಯ್ಕೆ ಮಾಡಲಾಯಿತು.