ಪುತ್ತೂರು, ಕಡಬ, ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಪ್ರಪ್ರಥಮ
೦ ಅಪಾಯ ಇಲ್ಲದ, ಮಾಲಿನ್ಯ ರಹಿತ, ಹೆಚ್ಚಿನ ಲಾಭಾಂಶದ ಗೈಲ್ ಗ್ಯಾಸ್‌ನಿಂದ ಆರ್ಥಿಕ ಅಭಿವೃದ್ಧಿ-ನವೀನ್ ಕುಮಾರ್.
೦ ರಿಕ್ಷಾದವರ ಬಹುಕಾಲದ ಬೇಡಿಕೆ ಈಡೇರಿದೆ-ಚಂದಪ್ಪ ಮೂಲ್ಯ.
ಉಪ್ಪಿನಂಗಡಿ: ಪುತ್ತೂರು, ಕಡಬ, ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಪ್ರಪ್ರಥಮ ಸಿ.ಎನ್.ಜಿ. ಘಟಕ ಸೆ. ೫ರಂದು ಉಪ್ಪಿನಂಗಡಿ ಸಮೀಪದಲ್ಲಿ ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಪಂಜಾಳದಲ್ಲಿರುವ ಶಾಲಿವಾಹನ ಫ್ಯೂಯೆಲ್ಸ್ (ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿ., ಮಾಲಿಕತ್ವದ ಪೆಟ್ರೋಲ್ ಪಂಪ್)ನಲ್ಲಿ ಉದ್ಘಾಟನೆಗೊಂಡಿತು.
ನೂತನ ಘಟಕವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.
ಹೆಚ್.ಪಿ.ಸಿ.ಎಲ್. ಸಂಸ್ಥೆಯ ಡಿಜಿ.ಎಂ. ನವೀನ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಗೈಲ್ ಗ್ಯಾಸ್ ಅಪಾಯಕಾರಿ ಅಲ್ಲದ, ಮಾಲಿನ್ಯ ರಹಿತವಾದ ಮತ್ತು ವಾಹನ ಚಾಲಕ, ಮಾಲಕರಿಗೆ ಹೆಚ್ಚು ಲಾಭಾಂಶವನ್ನು ನೀಡುತ್ತಿದ್ದು, ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರಿ ಆಗಿದೆ ಎಂದ ಅವರು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಪೂರ್ಣಗೊಂಡ ಬಳಿಕ ಪೈಪ್ ಲೈನ್ ಮೂಲಕ ಸರಬರಾಜು ವ್ಯವಸ್ಥೆ ಆಗಲಿದೆ. ತನ್ಮೂಲಕ ಈ ಸೇವೆ ಇನ್ನಷ್ಟು ಪ್ರಯೋಜನಕಾರಿ ಆಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿ ಉಪ್ಪಿನಂಗಡಿ ಅಮೂಲ್ಯ ಗ್ಯಾಸ್ ಏಜೆನ್ಸಿ ಮಾಲಕ ಚಂದಪ್ಪ ಮೂಲ್ಯ ಮಾತನಾಡಿ ಕಳೆದ 2 ವರ್ಷಗಳಿಂದ ಪೆಟ್ರೋಲ್ ಬಂಕ್ ನಡೆಸುತ್ತಿರುವ ಶಾಲಿವಾಹನ ಫ್ಯೂಯೆಲ್ಸ್‌ನವರು ತಾವು ನೀಡುತ್ತಿರುವ ಉತ್ತಮ ಸೇವೆಯ ಮೂಲಕ ಜನಪ್ರಿಯತೆಯನ್ನು ಗಳಿಸಿದ್ದಾರೆ, ಅದಾಗ್ಯೂ ಈ ಭಾಗದ ರಿಕ್ಷಾದವರ ಬಹುಕಾಲದ ಬೇಡಿಕೆಯನ್ನು ಈಡೇರಿಸುವ ಮೂಲಕ ಈ ಸಂಸ್ಥೆ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿದ್ದು, ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದರು.
ಗೈಲ್ ಗ್ಯಾಸ್ ಚೀಫ್ ಮ್ಯಾನೇಜರ್ ಮಂಗೇಶ್ ರಾಮ್‌ಟೇಕ್ ಮಾತನಾಡಿ ಈ ಭಾಗದ ಪ್ರಥಮ ಘಟಕ ಇದಾಗಿದ್ದು, ಮುಂದಿನ ದಿನಗಳಲ್ಲಿ ಪುತ್ತೂರುನಲ್ಲಿಯೂ ಸ್ಥಾಪನೆ ಮಾಡುವ ಯೋಜನೆ ಇದೆ ಎಂದ ಅವರು ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದರು.
ಶಾಲಿವಾಹನ ಫ್ಯೂಯೆಲ್ಸ್ ಸಂಸ್ಥೆಯ ಮಾಲಕ ಚಂದ್ರಶೇಖರ್ ತಾಳ್ತಜೆ ಮಾತನಾಡಿ ಕಳೆದ ಎರಡೂವರೆ ವರ್ಷದ ಹಿಂದೆ ಪ್ರಾರಂಭಿಸಿದ ಪೆಟ್ರೋಲ್ ಬಂಕ್ ಜನರ ಸಹಕಾರೊಂದಿಗೆ ಉತ್ತಮವಾಗಿ ಸಾಗಿ ಬಂದಿದೆ, ಈದೀಗ ಪ್ರಾಂಭಿಸಿರುವ ಪುತ್ತೂರು, ಕಡಬ, ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಪ್ರಪ್ರಥಮ ಸಿ.ಎನ್.ಜಿ. ಘಟಕ ಇದಾಗಿದ್ದು, ಗ್ರಾಹಕರಿಗೆ ತೃಪ್ತಿದಾಯಕ ಸೇವೆ ಒದಗಿಸಲು ಸಂಸ್ಥೆ ಬದ್ಧವಾಗಿದೆ ಎಂದರು.
ಗೈಲ್ ಗ್ಯಾಸ್ ಸಂಸ್ಥೆಯ ಜನರಲ್ ಮ್ಯಾನೇಜರ್ ಯು.ಸಿ. ಸಿಂಗ್, ಡಿ.ಜಿ.ಯಂ. ಪಿ.ಜಿ. ಜೋಯ್, ಹೆಚ್.ಪಿ.ಸಿ.ಎಲ್. ಸಂಸ್ಥೆಯ ಮ್ಯಾನೇಜರ್ ಉದಯಶಂಕರ ಶೆಟ್ಟಿ ಕೆ., ವಸಂತ ಶೆಟ್ಟಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯ ಜಯಂತ ಪೊರೋಳಿ, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ. ವಿ. ಪ್ರಸಾದ್ ಕಾಯರ್ಪಾಡಿ, ಉಪಾಧ್ಯಕ್ಷ ಸುನಿಲ್ ಕುಮಾರ್ ದಡ್ಡು, ಮಾಜಿ ಅಧ್ಯಕ್ಷ ವೆಂಕಟರಮಣ ಭಟ್ ಪೆಲಪ್ಪಾರು, ಪೆಟ್ರೋಲ್ ಬಂಕ್ ಉದ್ಯಮಿಗಳಾದ ನಾರಾಯಣ ಗೌಡ ಕೊಕ್ಕಡ, ಸುರೇಶ್ ಭಟ್ ಕಲ್ಲೇರಿ, ಬಜತ್ತೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗಣೇಶ್ ಕುಲಾಲ್, ಉದ್ಯಮಿಗಳಾದ ಶರತ್, ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಸಾಹಿತಿ ಡಾ. ತಾಳ್ತಜೆ ವಸಂತ ಕುಮಾರ್ ಅತಿಥಿಗಳನ್ನು ಬರಮಾಡಿಕೊಂಡು ಸ್ವಾಗತಿಸಿದರು. ಶಾಲಿವಾಹನ ಫ್ಯೂಯೆಲ್ಸ್ ಸಂಸ್ಥೆಯ ಅಥುಲ್ ಕಶ್ಯಪ್, ಅಕ್ಷರ ಕಶ್ಯಪ್,
ಸವಿತಾ ಭಟ್ ವಿವಿಧ ಕಾರ್‍ಯಕ್ರಮ ನಿರ್ವಹಿಸಿದರು. ಶ್ರೀಮತಿ ಗೀತಾ ಚಂದ್ರಶೇಖರ್ ತಾಳ್ತಜೆ ಕಾರ್‍ಯಕ್ರಮ ನಿರೂಪಿಸಿದರು.