ಬ್ರಹ್ಮಶ್ರೀ ನಾರಾಯಣ ಗುರುಗಳ 168 ಜನ್ಮದಿನಾಚರಣೆ; ಸೆ.8 ರಂದು ಬಿಲ್ಲವ ಸಂಘದಿಂದ ಬೃಹತ್ ವಾಹನ ಜಾಥಾ

0

ಪುತ್ತೂರು: `ಒಂದೇ ಜಾತಿ, ಒಂದೇ ಮತ, ಒಂದೇ ದೇವರು’ ಎಂಬ ಅತ್ಯಪೂರ್ವ ಸಂದೇಶವನ್ನು ಮನುಕುಲಕ್ಕೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ, ಬ್ರಹ್ಮಶ್ರೀನಾರಾಯಣ ಗುರುಸ್ವಾಮಿ ಮಂದಿರ ಪುತ್ತೂರು ಇದರ ವತಿಯಿಂದ ಸೆ.10 ರಂದು ನಡೆಯಲಿರುವ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಯವರ 168ನೇ ಜನ್ಮ ದಿನಾಚರಣೆಯು ಅಂಗವಾಗಿ ಸೆ.8ರಂದು ಅಪರಾಹ್ನ 3ಗಂಟೆಗೆ ಬೃಹತ್ ವಾಹನ ಜಾಥಾವು ನಡೆಯಲಿದೆ.

ದರ್ಬೆ ಬೈಪಾಸ್ ಅಶ್ವಿನಿ ವೃತ್ತದ ಬಳಿಯಿಂದ ವಾಹನ ಜಾಥಾ ನಡೆಯಲಿದೆ. ಜಾಥಾವು ದರ್ಬೆ ಬೈಪಾಸ್ ಬಳಿಯಿಂದ ಹೊರಟು ಮುಖ್ಯ ರಸ್ತೆಯ ಮೂಲಕ ಸಾಗಿ ಶ್ರೀಧರ ಭಟ್ ಅಂಗಡಿ ಬಳಿಯಿಂದ ಮಾರ್ಕೆಟ್ ರಸ್ತೆ ತಾಲೂಕು ಆಡಳಿತ ಸೌಧದ ಬಳಿಯಿಂದಾಗಿ ಬಿಲ್ಲವ ಸಂಘದ ಸಭಾ ಭವನದ ಬಳಿ ಸಮಾಪನಗೊಳ್ಳಿದೆ. ಸುಮಾರು 300ಕ್ಕೂ ಅಧಿಕ ವಾಹನಗಳು ಜಾಥದಲ್ಲಿ ಭಾಗವಹಿಸಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here