ಉಪ್ಪಿನಂಗಡಿ: ಬಿಜೆಪಿ ಕಾರ್ಯಕರ್ತ, ಹಿರೇಬಂಡಾಡಿ ಗ್ರಾ.ಪಂ. ಮಾಜಿ ಸದಸ್ಯ ಯಶವಂತ ಸರೋಳಿ (50) ಸೆ.6ರಂದು ರಾತ್ರಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಹಿರೇಬಂಡಾಡಿಯ ಸರೋಳಿ ನಿವಾಸಿಯಾದ ಇವರು ಅನಾರೋಗ್ಯದಿಂದಿದ್ದರು. ನಿನ್ನೆ ಅವರಿಗೆ ಅನಾರೋಗ್ಯ ಉಲ್ಭಣಗೊಂಡಿದ್ದು, ದೇರಳಕಟ್ಟೆಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮೃತರು ಪತ್ನಿ ಶೀಲಾವತಿ, ಪುತ್ರರಾದ ಯಶ್ವಿತ್, ಯಶ್ವಿನ್ರನ್ನು ಅಗಲಿದ್ದಾರೆ.