ಉಪ್ಪಿನಂಗಡಿ: ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈಯವರಿಗೆ ಹುಟ್ಟೂರು ಪೆರ್ನೆಯಲ್ಲಿ ಅಭಿಮಾನಿ ಬಳಗದಿಂದ ಅವರ ೭೦ನೇ ಹುಟ್ಟು ಹಬ್ಬದ ಆಚರಣೆ ನಡೆಸುವ ಸಲುವಾಗಿ ಪೂರ್ವಭಾವಿ ಸಭೆಯು ಸೆ. ೭ರಂದು ಪೆರ್ನೆ ಎ.ಎಂ. ಸಭಾಂಗಣದಲ್ಲಿ ಜರಗಿತು.
ಸಭೆಯಲ್ಲಿ ಅಭಿಮಾನಿಗಳಿಂದ ರಕ್ತದಾನ ಸಂಕಲ್ಪದ ಬಗ್ಗೆ ಮತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸುವ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಬೆಳ್ಳಿಪ್ಪಾಡಿ ರಮಾನಾಥ ರೈ ಹುಟ್ಟುಹಬ್ಬ ಅಭಿನಂದನಾ ಸಮಿತಿಯ ಗೌರವ ಸಲಹೆಗಾರ, ಪೆರ್ನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ತೋಯಜಾಕ್ಷ ಶೆಟ್ಟಿ, ಗೌರವಾಧ್ಯಕ್ಷ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಂ ಕೆ.ಬಿ., ಅಭಿನಂದನಾ ಸಮಿತಿ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಪ್ರಧಾನ ಕಾರ್‍ಯದರ್ಶಿ
ಉಮಾನಾಥ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಫಾರೂಕ್ ಪೆರ್ನೆ ಮಾತನಾಡಿ ಕಾರ್‍ಯಕ್ರಮದ ಸಿದ್ಧತೆ ಬಗ್ಗೆ ಸಲಹೆ ಸೂಚನೆ ನೀಡಿದರು.ಸಭೆಯಲ್ಲಿ ಪೆರ್ನೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನಿಲ್ ನೆಲ್ಸನ್ ಪಿಂಟೋ, ಉಪಾಧ್ಯಕ್ಷೆ ವನಿತಾ, ಸದಸ್ಯರಾದ ತನಿಯಪ್ಪ ಪೂಜಾರಿ, ಭಾರತಿ, ಪೆರ್ನೆ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ವಿಶ್ವನಾಥ ಶೆಟ್ಟಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಅಬ್ದುಲ್ ರಜಾಕ್, ಸುಂದರ, ರಾಜೀವ ಶೆಟ್ಟಿ, ಪೆರ್ನೆ ಬೂತ್ ಅಧ್ಯಕ್ಷರಾದ ಮಿತ್ರದಾಸ್ ರೈ, ಮ್ಯಾಕ್ಸಿಂ ಲೋಬೋ, ಸ್ಥಳೀಯ ಪ್ರಮುಖರಾದ ಪುಷ್ಕರ ಪೂಜಾರಿ, ಧನಂಜಯ, ಗಿರಿಧರ ರೈ, ಶೇಖರ ಶೆಟ್ಟಿ, ರಾಮಣ್ಣ ಪೂಜಾರಿ, ಅಶ್ರಫ್, ಲತೀಫ್, ಇಸ್ಮಾಯಿಲ್, ಅಶ್ರಫ್ ಬಿಳಿಯೂರು, ಪ್ರಹ್ಲಾದ್, ಅಶೃಫ್ ಕರ್‍ವೇಲ್, ವಿಶ್ವನಾಥ ಶೆಟ್ಟಿ, ಸತ್ತಾರ್, ಅಬೂಬಕ್ಕರ್, ಸಮೀರ್, ಅಶ್ರಫ್ ಕರ್‍ವೇಲ್, ನವಾಝ್, ಉಮೇಶ್, ಚೆನ್ನಕೇಶವ ಮತ್ತಿತರರು ಉಪಸ್ಥಿತರಿದ್ದರು.