ಪುತ್ತೂರು:ಸಾಮೆತ್ತಡ್ಕ ಹಿ.ಪ್ರಾ ಶಾಲೆಯಲ್ಲಿ ಸೆ.10ರಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ ನೂತನ ಸಮಿತಿಯನ್ನು ರಚನೆ ಮಾಡಲಾಯಿತು.
ಇಲಾಖಾ ನಿಯಮಾವಳಿಯಂತೆ ಪೋಷಕರ ಪಟ್ಟಿ ತಯಾರಿಸಿಕೊಂಡು ಪೋಷಕರಸಭೆಯನ್ನು ಕರೆದು ನೂತನ ಸಮಿತಿಯನ್ನು ರಚನೆ ಮಾಡಲಾಯಿತು. ಪೋಷಕರ ಪೈಕಿ 18 ಮಂದಿ ಪೋಷಕರನ್ನು ಆಯ್ಕೆ ಮಾಡಿ ಅವರಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು . ಜೊತೆಗೆ ಪದನಿಮಿತ್ತ ಮತ್ತು ನಾಮನಿರ್ದೇಶಿತ ಸದಸ್ಯರನ್ನು ಕೂಡ ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಪ್ರಸಾದ್ ಮತ್ತು ಉಪಾಧ್ಯಕ್ಷೆಯಾಗಿ ಪವಿತ್ರ ಆಯ್ಕೆಯಾದರು. ಟ್ರಸ್ಟ್ ಅಧ್ಯಕ್ಷ ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್, ಟ್ರಸ್ಟ್ ಕಾರ್ಯದರ್ಶಿ ಇಂದಿವರ್ ಭಟ್, ನೂತನ ಕಾರ್ಯದರ್ಶಿ ದಿನೇಶ್ ಕಾಮತ್, ಹಿರಿಯ ವಿದ್ಯಾರ್ಥಿ ಫಾಯಿಜ್, ಯುವಕ ಮಂಡಲದ ಪ್ರತಿನಿಧಿ ಸಿರಾಜ್, ಶಬ್ಬೀರ್ ಹಾಗೂ ಪೋಷಕರು ಉಪಸ್ಥಿತರಿದ್ದರು. ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಪಂಚಾಕ್ಷರಿಯವರನ್ನು ಸನ್ಮಾನಿಸಲಾಯಿತು.
ಮುಖ್ಯ ಗುರು ಮೀನಾಕುಮಾರಿ ಸ್ವಾಗತಿಸಿದರು. ಶಿಕ್ಷಣ ಇಲಾಖೆಯ ಪುತ್ತೂರು ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಶಶಿಕಲಾರವರು ಎಸ್‌ಡಿಎಂಸಿ ಸಮಿತಿಯ ಬಗ್ಗೆ ಮಾಹಿತಿ ನೀಡಿದರು. ಸಹ ಶಿಕ್ಷಕಿ ಮರಿಯಾ ಎಂ.ಎ ಕಾರ್ಯಕ್ರಮ ನಿರೂಪಿಸಿದರು.