ಅಂತರ್‌ರಾಜ್ಯ ಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ಗೆ ದ.ಕ.ದಿಂದ ಪುತ್ತೂರಿನ ಮಹಮ್ಮದ್ ಅಬುನಾಝ್, ಮುಹಮ್ಮದ್ ಶಹಬಾಝ್ ಆಯ್ಕೆ

0

ಪುತ್ತೂರು: ಗುಜರಾತ್ ಕ್ರಿಕೆಟ್ ಮಂಡಳಿ ಮತ್ತು DCCN ನವಸಾರಿ ಆಯೋಜನೆಯಲ್ಲಿ ಡಿ.18ರಿಂದ 21ರವರೆಗೆ ಗುಜರಾತ್ ನವಸಾರಿ, ಕೊಥಂಬ್ಡಿ ಶುಕ್ರ ಸಿಂಧೋರ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಲೀಗ್ ಮಾದರಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅಖಿಲ ಭಾರತ 19 ವರ್ಷದೊಳಗಿನ ಅಂತರ್ ರಾಜ್ಯ ಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ರಾಜ್ಯ ತಂಡಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಪುತ್ತೂರಿನ ಇಬ್ಬರು ವಿದ್ಯಾರ್ಥಿಗಳಾದ ಮಹಮ್ಮದ್ ಅಬುನಾಝ್ ಮತ್ತು ಮುಹಮ್ಮದ್ ಶಹಬಾಝ್‌ರವರು ಆಯ್ಕೆಯಾಗಿರುತ್ತಾರೆ. ಇವರು ಮೂರು ದಿವಸ ನಡೆಯುವ ಲೀಗ್ ಮಾದರಿ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ.


ಮಹಮ್ಮದ್ ಅಬುನಾಝ್‌ರವರು ಒಂದನೇ ತರಗತಿಯಿಂದ ಎಂಟನೇ ತರಗತಿ ತನಕ ಹಾರಾಡಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಪ್ರಸ್ತುತ ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದಾರೆ. ಇವರಿಗೆ ಕಿರಣ್ ಕುಮಾರ್ ಮಂಗಳೂರ್ ಮತ್ತು ಸುದಾನ ಶಾಲೆಯ ನವೀನ್ ಕಡಬರವರು ತರಬೇತಿ ನೀಡಿರುತ್ತಾರೆ. ಇವರು ಪುತ್ತೂರು ಸ್ನೇಹ ಸಂಗಮ ಆಟೋ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷರಾದ ಇಸ್ಮಾಯಿಲ್ ಬೊಳುವಾರುರವರ ಪುತ್ರ.

ಮುಹಮ್ಮದ್ ಶಹಬಾಝ್‌ರವರು ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿಯಾಗಿದ್ದು ಕೊಡಿಪ್ಪಾಡಿ ರಹೀಮ್‌ರವರ ಪುತ್ರರಾಗಿದ್ದಾರೆ. ಇವರಿಗೆ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಎಲಿಯಾಸ್ ಪಿಂಟೋರವರು ತರೇತಿ ನೀಡಿರುತ್ತಾರೆ.

LEAVE A REPLY

Please enter your comment!
Please enter your name here