ರೂ.15.54 ಲಕ್ಷ ನಿವ್ವಳ ಲಾಭ | ಶೇ.10.50 ಡಿವಿಡೆಂಡ್ | ಪ್ರೋತ್ಸಾಹಧನ ವಿತರಣೆ
ಪುತ್ತೂರು: ಕೋರ್ಟ್ರಸ್ತೆಯ ವಿಶ್ವ ಸಂಕೀರ್ಣದ ಪ್ರಥಮ ಮಹಡಿಯಲ್ಲಿ ಸಹೋದರತ್ವದ ಸ್ನೇಹಮಯ ಸೇವೆ ಎಂಬ ಧ್ಯೇಯವಾಕ್ಯದೊಂದಿಗೆ ವ್ಯವಹರಿಸುತ್ತಿರುವ ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ 22ನೇ ವಾರ್ಷಿಕ ಮಹಾಸಭೆಯು ಸೆ.11 ರಂದು ಬೆಳಿಗ್ಗೆ ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಸೊಸೈಟಿ ಅಧ್ಯಕ್ಷರಾದ ರಾಕೇಶ್ ಮಸ್ಕರೇನ್ಹಸ್ ಅಧ್ಯಕ್ಷತೆಯಲ್ಲಿ ಜರಗಿತು.
ಸದಸ್ಯತನ, ಪಾಲು ಬಂಡವಾಳ:
ವರದಿ ಸಾಲಿನ ಆರಂಭದಲ್ಲಿ 1232 ಸದಸ್ಯರು ಇದ್ದು 44 ಮಂದಿ ಹೊಸ ಸದಸ್ಯರು ಸೇರ್ಪಡೆಯಾಗಿ 20 ಮಂದಿ ಸದಸ್ಯತ್ವವನ್ನು ತ್ಯಜಿಸಿರುತ್ತಾರೆ. ಮಾರ್ಚ್ ವರ್ಷಾಂತ್ಯಕ್ಕೆ ಸಂಘದಲ್ಲಿ 1256 ಮಂದಿ ಸದಸ್ಯರು ಇದ್ದು, ರೂ.92,27,700 ಪಾಲು ಬಂಡವಾಳವಿರುತ್ತದೆ. ಸಂಘದ ಸಂಪನ್ಮೂಲವು ವಿವಿಧ ಠೇವಣಿಗಳಿಂದ ಕೂಡಿದ್ದು ಸಂಘದಲ್ಲಿ ಮಾರ್ಚ್ ವಷಾಂತ್ಯಕ್ಕೆ ಉಳಿತಾಯ ಖಾತೆ, ನಿರಖು ಠೇವಣಿ, ಮಾಸಿಕ ಠೇವಣಿ, ನಿರಖು ಠೇವಣಿ(ಸಿ) ಸೇರಿದಂತೆ ಒಟ್ಟು ರೂ.4,17,85,372.57 ಠೇವಣಿಯಿರುತ್ತದೆ. ಸಂಘದ ಮೇಲೆ ವಿಶ್ವಾಸವಿರಿಸಿ ಠೇವಣಿ ಹೂಡಿರುವ ಎಲ್ಲಾ ಠೇವಣಿದಾರರಿಗೆ ಅಧ್ಯಕ್ಷರಾದ ರಾಕೇಶ್ ಮಸ್ಕರೇನ್ಹಸ್‌ರವರು ಅಭಿನಂದನೆ ಸಲ್ಲಿಸುತ್ತಾ ಮುಂದಿನ ಆರ್ಥಿಕ ವರ್ಷದಲ್ಲಿ ಇನ್ನೂ ಹೆಚ್ಚಿನ ಠೇವಣಿಯನ್ನು ತೊಡಗಿಸುವಂತೆ ಸಹಕಾರವನ್ನು ಕೋರಿದರು.
ನಿವ್ವಳ ಲಾಭ ರೂ.15.54 ಲಕ್ಷ, ಶೇ.10.50 ಡಿವಿಡೆಂಡ್:
ಸಂಘವು ಸದಸ್ಯರ ಆರ್ಥಿಕ ಅಭಿವೃದ್ಧಿಗಾಗಿ ಹಲವಾರು ವಿಧದ ಸಾಲಗಳನ್ನು ನೀಡಿದ್ದು, ಈ ಪೈಕಿ ಮಾರ್ಚ್ ವರ್ಷಾಂತ್ಯಕ್ಕೆ ಜಾಮಿನು ಸಾಲ, ತುರ್ತು ಸಾಲ, ವಾಹನ ಈಡಿನ ಸಾಲ, ಆಸ್ತಿ ಅಡವು ಸಾಲ, ಠೇವಣಾತಿ ಸಾಲ ಸೇರಿದಂತೆ ರೂ.3,63,56,012 ಹೊರ ಬಾಕಿ ಇರುತ್ತದೆ. ಸಂಘದ 2021-22ನೇ ಸಾಲಿನಲ್ಲಿ ಲೆಕ್ಕಪರಿಶೋಧನೆಯನ್ನು ಲೆಕ್ಕ ಪರಿಶೋಧಕರು ನಡೆಸಿದ್ದು ಸಂಘವು ರೂ.15,54,018 ಲಕ್ಷ ನಿವ್ವಳ ಲಾಭ ಗಳಿಸಿರುತ್ತದೆ. ಈ ಬಾರಿ ಸಂಘದ ಸದಸ್ಯರಿಗೆ ಶೇ.10.50 ಡಿವಿಡೆಂಡ್ ನೀಡಲಾಗುವುದು ಎಂದು ಅಧ್ಯಕ್ಷರಾದ ರಾಕೇಶ್ ಮಸ್ಕರೇನ್ಹಸ್‌ರವರು ಘೋಷಿಸಿದರು.
ಶ್ರದ್ಧಾಂಜಲಿ:
ಸಂಘದ ಸದಸ್ಯರಾಗಿದ್ದು ಅಗಲಿದ ಮೌರಿಸ್ ಡಿ’ಸೋಜ, ಎವರೆಸ್ಟ್ ಮಸ್ಕರೇನ್ಹಸ್, ಎಲಿಜ್ ಪಿಂಟೊ, ಲೂಸಿ ಡಿ’ಸೋಜ, ಎಝಿಲ್ ಡಿ’ಸೋಜ, ಸೆಬಾಸ್ಟಿಯನ್ ಪಿಂಟೊ, ಸಿ.ಎಲ್ ಮಸ್ಕರೇನ್ಹಸ್, ತೋಮಸ್ ಕುಟಿನ್ಹಾ, ಜೋಸೆಫ್ ಅಲಿಸ್ಟರ್ ಗೊನ್ಸಾಲ್ವಿಸ್‌ರವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ಕರುಣಿಸಲಿ ಎಂದು ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಸದಸ್ಯರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಸದಸ್ಯರ ಹತ್ತು ಮಂದಿ ಫಲಾನುಭವಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ಸೊಸೈಟಿ ಕಾರ್ಯದರ್ಶಿ ಮೇಬಲ್ ಗ್ರೇಸಿ ಮಾಡ್ತಾರವರು ಜಮಾ ಖರ್ಚಿನ ತಖ್ತೆ, ಲಾಭ ನಷ್ಟದ ತಖ್ತೆ, ಲೆಕ್ಕಿಗ ಒಲಿವಿಯಾ ಪ್ರಶಾಂತಿ ರೆಬೆಲ್ಲೋರವರು ಆಸ್ತಿ ಜವಾಬ್ದಾರಿ ತಖ್ತೆ, ಅಂದಾಜು ಆಯ-ವ್ಯಯ ಪಟ್ಟಿ, ಸೊಸೈಟಿಯ ಅಭಿವೃದ್ಧಿ ತಖ್ತೆಯನ್ನು ಓದಿದರು. ನಿರ್ದೇಶಕಿ ಅನಿತಾ ಜ್ಯೋತಿ ಡಿ’ಸೋಜ ಪ್ರಾರ್ಥಿಸಿದರು. ಸೊಸೈಟಿ ಅಧ್ಯಕ್ಷ ರಾಕೇಶ್ ಮಸ್ಕರೇನ್ಹಸ್ ಸ್ವಾಗತಿಸಿ, ನಿರ್ದೇಶಕ ಪವನ್ ಜೋನ್ ಮಸ್ಕರೇನ್ಹಸ್ ವಂದಿಸಿದರು. ಉಪಾಧ್ಯಕ್ಷ ನೋಯಲ್ ಡಿ’ಸೋಜ, ನಿರ್ದೇಶಕರಾದ ರೋಯ್‌ಸ್ಟನ್ ಡಾಯಸ್, ಲ್ಯಾನ್ಸಿ ಮಸ್ಕರೇನ್ಹಸ್, ಗಿಲ್ಬರ್ಟ್ ರೊಡ್ರಿಗಸ್, ಸಿಸಿಲಿಯಾ ರೆಬೆಲ್ಲೋ, ಪ್ರಕಾಶ್ ಸಿಕ್ವೇರಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯರಾದ ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಲ್ಯಾನ್ಸಿ ಮಸ್ಕರೇನ್ಹಸ್(ಪ್ರೀತಂ), ವಿಲ್‌ಫ್ರೆಡ್ ಪಿಂಟೊ, ವಿನ್ಸೆಂಟ್ ತಾವ್ರೋ(ರುತು), ಚಾರ್ಲ್ಸ್ ಫುಡ್ತಾದೊರವರು ಸಂಘದ ಬೆಳವಣಿಗೆಗೆ ಅಗತ್ಯ ಸೂಚನೆಗಳನ್ನು ನೀಡಿದರು.
ಬಾಕ್ಸ್
ಸದಸ್ಯರುಗಳ ಸಹಕಾರ, ವಿಶ್ವಾಸವೇ ಸಂಘವು ಅಭಿವೃದ್ಧಿ…
ಸೊಸೈಟಿಯಲ್ಲಿನ ಸದಸ್ಯರುಗಳ ಸಹಕಾರವೇ ಸಂಘದ ವ್ಯವಹಾರ ವೃದ್ಧಿಯಾಗಲು ಪ್ರಮುಖ ಕಾರಣವಾಗಿದೆ. ಸಂಘದ ಮೇಲೆ ವಿಶ್ವಾಸವಿಟ್ಟು ಠೇವಣಿ ಇರಿಸಿ ಅಭಿವೃದ್ಧಿಗೆ ಕಾರಣರಾದ ಎಲ್ಲಾ ಠೇವಣಿದಾರರಿಗೂ, ಗ್ರಾಹಕರಿಗೂ ಅಲ್ಲದೆ ಸೂಕ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡಿ ಸಹಕರಿಸಿದ ಸದಸ್ಯರೆಲ್ಲರಿಗೂ ಕೃತಜ್ಞತೆಗಳು. ಸಂಘದ ಕಾರ್ಯಕಲಾಪಗಳಿಗೆ ಸದಾ ಮಾರ್ಗದರ್ಶನ ನೀಡುತ್ತಿರುವ ಸಹಕಾರ ಇಲಾಖೆಗೆ, ಎಸ್‌ಡಿಸಿಸಿ ಬ್ಯಾಂಕ್, ಎಂಸಿಸಿ ಬ್ಯಾಂಕ್ ಪುತ್ತೂರು ಇವುಗಳ ಪ್ರಬಂಧಕರಿಗೆ ಮತ್ತು ಸಿಬ್ಬಂದಿಗಳಿಗೆ, ವರದಿ ಸಾಲಿನಲ್ಲಿ ಲೆಕ್ಕಪರಿಶೋಧನೆಯನ್ನು ಮಾಡಿದ ಲೆಕ್ಕ ಪರಿಶೋಧಕರಿಗೂ ಕೃತಜ್ಞತೆಗಳು. ಇದೇ ರೀತಿ ನಿಮ್ಮೆಲ್ಲರ ನಂಬಿಕೆ, ಉತ್ತೇಜನ ಹಾಗೂ ಪ್ರೋತ್ಸಾಹದಿಂದ ಈ ಸಹಕಾರ ಸಂಘವು ಅಭಿವೃದ್ಧಿ ಸಾಧಿಸಬೇಕಾಗಿದೆ ಮಾತ್ರವಲ್ಲದೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವೆ ಸಲ್ಲಿಸಲು ಈ ಸಹಕಾರಿ ಸಂಘವು ಸದಾ ಸಿದ್ಧವಿದೆ.
-ರಾಕೇಶ್ ಮಸ್ಕರೇನ್ಹಸ್, ಅಧ್ಯಕ್ಷರು, ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ