ಕಾವು : ನನ್ಯ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ

0

ಕಾವು: ಮಾಡ್ನೂರು ಗ್ರಾಮದ ಕಾವು ನನ್ಯ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ ಕಾರ್ಯಕ್ರಮ ನ 14 ರಂದು ನಡೆಯಿತು.

ಕಾರ್ಯಕ್ರಮವನ್ನು ಪುಟಾಣಿ ಚಿತೇಶ್ ಉದ್ಘಾಟಿಸಿದರು.ಬಳಿಕ ಪುಟಾಣಿಗಳು ನೆಹರು ಕುರಿತು ಮಾತನಾಡಿದರು.ನಂತರ ಪುಟಾಣಿಗಳಿಂದ ನ್ರತ್ಯ, ಕಥೆ, ಅಭಿನಯ ಗೀತೆ ವಾರದ ವಿಷಯದ ಬಗ್ಗೆ ಪರಿಚಯ ಮಾಡಿ ಮನರಂಜಿಸಿದರು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇಂಚರಾ ಸಮಲೋಚನಾ ಕೇಂದ್ರದ ಆಪ್ತ ಸಮಾಲೋಚಕಿ ಸೌಮ್ಯ ಮಕ್ಕಳ ದಿನಾಚರಣೆಯ ಮಹತ್ವದ ಬಗ್ಗೆ ಹಾಗೂ ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಜಾಗೃತಿ ಮೂಡಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ,ಹಾಗೂ ಮಕ್ಕಳ ಮಾನಸಿಕ ಆರೋಗ್ಯ ಕಾಪಾಡಲು ಸಲಹೆಗಳನ್ನು ನೀಡಿದರು.

ನನ್ಯ ಶಾಲಾ ಮುಖ್ಯಗುರು ರಾಜೇಶ್ ಶಾಲೆಯ ಕಲಿಕೆಯ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ಆಶಾ ಕಾರ್ಯಕರ್ತೆ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.ಸಮನ್ವಯ ಸಮಿತಿ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಕ್ಕಳಿಗೆ ಹಾಗೂ ಪೋಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಚಂದ್ರಶೇಖರ ಬಲ್ಯಾಯ ಬಹುಮಾನದ ಪ್ರಯೋಜಕತ್ವ ನೀಡಿದ್ದರು.

ಊಟದ ಪ್ರಯೋಜಕತ್ವವನ್ನು ಶಾಲಾ ಮುಖ್ಯಗುರು, ಪೋಷಕರು,ಸ್ತ್ರೀಶಕ್ತಿ ಸದಸ್ಯರು ಮಾಡಿದ್ದರು . ಪುಟಾಣಿ ಮಕ್ಕಳಾದ , ಪರೀಕ್ಷಿತ್, ಚಿತೇಶ್, ನಿವೇದ್,ಐರಾ, ಯಕ್ಷಿತ್ ಪ್ರಾರ್ಥಿಸಿದರು. ಐರ ಸ್ವಾಗತಿಸಿ, ವಂದಿಸಿದರು, ಪರೀಕ್ಷಿತ್ ಕಾರ್ಯಕ್ರಮ ನಿರೂಪಿಸಿದರು.ಅಂಗನವಾಡಿ ಕಾರ್ಯಕರ್ತೆ ಸೀತಾರತ್ನ, ಸಹಾಯಕಿ ಶಾರದಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here