ಬೇಡಗುಡ್ಡೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ವಿಟ್ಲ ,ಕೇಪು ವಲಯದ ಬೇಡಗುಡ್ಡೆ ಒಕ್ಕೂಟದ ತ್ರೈಮಾಸಿಕ ಸಭೆ ಸೆ11ರಂದು ಬೇಡಗುಡ್ಡೆ ನವೋದಯ(ರೇಷ್ಮೆ ಕಟ್ಟಡ) ಕೇಂದ್ರದಲ್ಲಿ ಅಧ್ಯಕ್ಷ ದೇವಕಿ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯನ್ನು ನಿಕಟಪೂರ್ವ ಅಧ್ಯಕ್ಷ ನಾರಾಯಣ ನಾಯ್ಕ ದೀಪ ಬೆಳಗಿಸಿ ಉದ್ಘಾಟಿಸಿದರು.
ವಲಯ ಮೇಲ್ವಿಚಾರಕ ರಾದ ಜಗದೀಶ್ ಮಾತನಾಡಿ ಯೋಜನೆಯ ಪ್ರತಿಯಯೊಂದು ಕಾರ್ಯಕ್ರಮ ದಿಲ್ಲಿ ಸದಸ್ಯರು ಭಾಗವಹಿಸಿ ಗ್ರಾಮಾಭಿವೃದ್ದಿ ಯೋಜನೆಯನ್ನು ಬಲಿಷ್ಠವಾಗಿ ಮಾಡುವ ಅವಶ್ಯಕತೆ ಇದೆ.ಯೋಜನೆಯ ನಿಮ್ಮ ಮತ್ತು ಹೊಸ ಕಾರ್ಯಕ್ರಮಗಳು,ಸ್ವ ಉದ್ಯೋಗ ಮಾಡಲು ಕಡಿಮೆ ಬಡ್ಡಿಯ ಸಾಲ ಪಡೆದು ಅದರ ಸದುಪಯೋಗಪಡಿಸಿಕೊಳ್ಳಿ ಎಂದು ಮಾಹಿತಿ ನೀಡಿದರು.
ಸೇವಾಪ್ರತಿನಿಧಿ ಶೋಭಾ ಅವರು ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು. ಜವಾಬ್ದಾರಿ ತಂಡ ಮಂಜುಶ್ರೀ,ತಂಡದ ಸದಸ್ಯ ಜನಾರ್ಧನ ನಾಯ್ಕ,ನೇತ್ರಾವತಿ ತಂಡದ ಸದಸ್ಯೆ ಪವಿತ್ರ ,ತಂಡದ ವರದಿ ವಾಚಿಸಿದರು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶ್ರಮದಾನ ಹಾಗೂ ವಸ್ತು ರೂಪದಲ್ಲಿ ನೀಡುವ ಬಗ್ಗೆ ಚರ್ಚಿಸಲಾಯಿತು.
ವೇದಿಕೆ ಯಲ್ಲಿ ಒಕ್ಕೂಟದ ಕೋಶಾಧಿಕಾರಿ ಶ ದೇವಕಿ (ಸಿರಿ ಉತ್ಪನ್ನ) ಉಪಸ್ಥಿತರಿದ್ದರು. ಮಂಜುಶ್ರೀ ತಂಡದ ಸದಸ್ಯ ಮೋಹನ್ ನಾಯ್ಕ ಪೆರ್ನಮುಗೆರು ಸ್ವಾಗತಿಸಿದರು. ಒಕ್ಕೂಟದ ಕಾರ್ಯದರ್ಶಿ ಮಹಾಬಲ ನಾಯ್ಕ , ಒಕ್ಕೂಟದ ವರದಿ ವಚಿಸಿ, ಕಾರ್ಯಕ್ರಮ ನಿರೂಪಿಸಿದರು.