ಪಕ್ಷದ ಮುಖಂಡರ ಮನೆಗೆ ಎನ್‌ಐಎ ದಾಳಿ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ

0

ಎನ್‌ಐಎ, ಇಡಿ,ಸಿಬಿಐ ಬಿಜೆಪಿ ಪಂಜರದ ಗಿಣಿಗಳು-ಅಬ್ದುಲ್ ಲತೀಫ್

ಪುತ್ತೂರು: ಹಿಂದು ಮುಸ್ಲಿಂ ಗಲಾಟೆಯಲ್ಲಿ ಯಾರಾದರೂ ಮುಸಲ್ಮಾನ ಆರೋಪಿಗಳಿದ್ದರೆ ಅವರೆಲ್ಲರು ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕರ್ತರು ಮತ್ತು ಆರ್‌ಎಸ್‌ಎಸ್ ಹುಟ್ಟು ಹಾಕಿದ ರಾಷ್ಟ್ರೀಯ ಮುಸ್ಲಿಂ ಮಂಚ್ ಸಂಘಟನೆಯ ಕಾರ್ಯಕರ್ತರು ಎಂದು ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಕೆ.ಸಿ.ಅಶ್ರಫ್ ಅವರು ಆರೋಪಿಸಿದ್ದಾರೆ.
ಎಸ್.ಡಿ.ಪಿ.ಐ ಮುಖಂಡರ ಮನೆ ಮೇಲೆ ಎನ್‌ಐಎ ದಾಳಿ ನಡೆಸುತ್ತಿರುವುದು ಖಂಡನೀಯ ಎಂದು ಎಸ್ ಡಿ ಐ ವತಿಯಿಂದ ಪುತ್ತೂರು ಕಿಲ್ಲೆ ಮೈದಾನದ ಅಮರ್ ಜವಾನ್ ಸ್ಮಾರಕ ಜ್ಯೋತಿಯ ಬಳಿ ಸೆ.12ರಂದು ಸಂಜೆ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಜಿಲ್ಲೆಯಲ್ಲಿ ನಡೆದ ಮೂರು ಕೊಲೆಗಳು ಖಂಡನೀಯ. ಕೊಲೆಯಿಂದ ಯಾವುದೇ ರಾಜಕೀಯ ಪಕ್ಷ ಮತ್ತುಸಂಘಟನೆ, ಧರ್ಮ ಕಟ್ಟಲು ಸಾಧ್ಯವಿಲ್ಲ ಎಂದ ಅವರು ಮೋದಿ ಬಂದ ಬಳಿಕ ಪಾಕಿಸ್ತಾನ, ಚೈನಾದವರನ್ನು ಬಂಧಿಸಿಲ್ಲ. ಬದಲಾಗಿ ಸರಕಾರದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ 10,550 ಮಂದಿ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದ ಈ ದೇಶದ ಮಣ್ಣಿನ ಮಕ್ಕಳನ್ನು ಬಂದಿಸಿದ್ದಾರೆ. ಪ್ರಜಾಪ್ರಭುತ್ವವನ್ನು ನಾಶಗೊಳಿಸಲು ಹೊರಟಿರುವ ಸರಕಾರದ ವಿರುದ್ಧ ಧ್ವನಿ ಎತ್ತಲೇ ಬೇಕು. ಇದು ಒಂದು ಪಕ್ಷದ ಹೋರಾಟವಲ್ಲ. ಎಲ್ಲಾ ಪಕ್ಷಗಳು ಒಂದುಗೂಡಿ ಇದರ ವಿರುದ್ದ ಹೋರಾಟ ಮಾಡಲೇ ಬೇಕು. ಎನ್‌ಐಎ ರಿಯಾಝ್ ಪರಂಗಿಪೇಟೆ ಮನೆ ಮೇಲೆ ದಾಳಿ ನಡೆಸಿದಾಗ ಮೂರು ಮೊಬೈಲು, ಒಂದು ಬ್ರೋಷರು, ಸ್ಮರಣಿಕೆ ಮಾತ್ರ ಸಿಕ್ಕಿರುವುದು. ಅದೇ ಆರ್‌ಎಸ್‌ಎಸ್ ಕಚೇರಿ ಮೇಲೆ ದಾಳಿ ನಡೆಸಿದರೆ ಎಲ್ಲವು ಸಿಗಬಹುದು. ಇವತ್ತು ಕ್ರಿಮಿನಲ್ ಹತ್ಯೆಯಲ್ಲಿ ಕೆಲವೊಂದು ಮುಸಲ್ಮಾನರು ತೊಡಗಿಸಿಕೊಳ್ಳುತ್ತಾರೆ.
ಎಮ್.ಆರ್.ಎಂ.(ರಾಷ್ಟ್ರೀಯ ಮುಸ್ಲಿಂ ಮಂಚ್) ಏಜೆಂಟ್, ಮತ್ತುಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕರ್ತರು ಪ್ರಮುಖರು. ಪ್ರವೀಣ್ ಹತ್ಯೆ ಮಾಡಿದವರು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಕಯಾಕರ್ತರು. ಪರೇಸ್ ಮೇಸ್ತಾ ಸಾವಿನಲ್ಲಿ ಆರೋಪಿಯಾಗಿ ಜೈಲಿಗೆ ಹೋಗಿ ಬಂದ ವ್ಯಕ್ತಿಗೆ ಬಿಜೆಪಿ ವಕ್ಫ್ ಬೋರ್ಡ್ನಲ್ಲಿ ಸ್ಥಾನ ಕೊಟ್ಟಿದೆ. ಹುಬ್ಬಳಿಯಲ್ಲಿ ಪೊಲೀಸ್ ಸ್ಟೇಷನ್‌ಗೆ ಕಲ್ಲು ಹೊಡೆದದವರಲ್ಲಿ ಹೆಚ್ಚಿನವರು ಮುಸ್ಲಿಂ ಬಿಜೆಪಿ ಕಾರ್ಯಕರ್ತರು. ಬಿಜೆಪಿಯವರ ರಾಜಕೀಯ ಲಾಭಕ್ಕಾಗಿ ನಾಮಧಾರಿ ಮುಸಲ್ಮಾನರನ್ನು ಬಳಸಿಕೊಳ್ಳುತ್ತಿದಾರೆ. ಎನ್‌ಐಎ ತನಿಖೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚದವರ ಮನೆಯಲ್ಲೂ ಮಾಡಲಿ. ಆಗ ಯಾರು ದುಷ್ಕೃತ್ಯಕ್ಕೆ ಬಳಸಿಕೊಂಡಿದ್ದಾರೆ ಎಂಬ ಮಾಹಿತಿ ಹೊರ ಬರುತ್ತದೆ. ಹಿಂದು ಮುಸ್ಲಿಂ ಗಲಾಟೆಯಲ್ಲ ಯರಾದರೂ ಮುಸಲ್ಮಾನ ಆರೋಪಿಗಳಿದ್ದರೆ ಅವರೆಲ್ಲರು ಬಿಜೆಪಿಯ ಅಲ್ಪಸಂಖ್ಯತ ಮೋರ್ಚಾದ ಕಾರ್ಯಕರ್ತರು ಮತ್ತು ಎಮ್.ಆರ್.ಎಮ್ ಕಾರ್ಯಕರ್ತರು. ಮುಸಲ್ಮನಾರ ಹೆಸರು ಹಾಳು ಮಾಡಲು ಮತ್ತು ಮುಸಲ್ಮಾನರು ಮಧ್ಯೆ ಒಡಕನ್ನು ಹುಟ್ಟಿ ಹಾಕಲು ಈ ಸಂಘಟನೆಯ ಕೃತ್ಯ. ನಾಮಧಾರಿ ಮುಸ್ಲಿಂರಿAದಾಗಿ ಇಡಿ ಮುಸ್ಲಿಂ ಸಮಾಜದ ಪರಿಣಾಮ ಎದುರಿಸುವ ಸ್ಥಿತಿಯುಂಟಾಗಿದೆ ಎಂದರು.
ಸಂಸದರ ಮೇಲೆ ಸಂಶಯ:
ಪ್ರವೀಣ್, ಫಾಝೀಲ್ ಮತ್ತು ಮಸೂದ್ ಕೊಲೆಯಲ್ಲಿ ಒಂದೇ ಒಂದು ಕೊಲೆಯನ್ನು ಎನ್‌ಐಎಗೆ ಕೊಡುವ ವಿಚಾರ ಯಾಕೆ ಎಂದು ಪ್ರಶ್ನೆ ಮಾಡಬೇಕಾಗಿದೆ ಎಂದ ಅವರು ಇವತ್ತಿಗೂ
ಪ್ರವೀಣ್ ನೆಟ್ಟಾರು ಕೊಲೆಯಲ್ಲಿ ಬಿಜೆಪಿಯ ಉನ್ನತ ವ್ಯಕ್ತಿಯ ಕೈವಾಡ ಇದೆ ಎಂದು ಗೊತ್ತಿದೆ. ಪ್ರವೀಣ್ ಪೇಸ್ ಬುಕ್ ಪೋಸ್ಟರ್‌ನಲ್ಲಿ ಇಲ್ಲಿನ ಸಂಸದ ವಿರುದ್ಧ ಹಾಕಿದ ಪೋಸ್ಟಾರ್ ಇದೆ.
ಡಿವಿ ಸದಾನಂದ ಗೌಡರ ಜಾತಿ ರಾಜಕಾರಣದ ವಿರುದ್ಧ ಹಾಕಿದ ಪೋಸ್ಟ್ ಇದೆ. ಇದನ್ನು ಯಾಕೆ ತನಿಕೆ ಮಡಲು ಆಗುತ್ತಿಲ್ಲ. ಪೊಲೀಸರು ತನಿಖೆ ಮಡುತ್ತಿದ್ದ ವೇಳೆ ಅದನ್ನು ಏಕಾ ಏಕಿ ಎನ್‌ಐಎಗೆ ಕೊಡುವ ಉದ್ದೇಶವೇನು ಎಂದು ಕೆ.ಸಿ.ಅಶ್ರಫ್ ಪ್ರಶ್ನಿಸಿದರು.
ಎನ್‌ಐಎ, ಇಡಿ, ಸಿಬಿಐ ಬಿಜೆಪಿ ಪಂಜರದ ಗಿಣಿ:
ಎಸ್‌ಡಿಪಿಐ ಪಕ್ಷದ ರಾಜ್ಯಪ್ರಧಾನ ಕಾರ್ಯದರ್ಶಿ ಎಲ್.ಕೆ ಅಬ್ದುಲ್ ಲತೀಫ್ ಅವರು ಮಾತನಾಡಿ ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಪರಂಗಿಪೇಟೆ ಅವರ ಮನೆಗೆ ನಡೆದ ಎನ್‌ಐಎ ದಾಳಿಯನ್ನು ಖಂಡಿಸಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಸಂಘಟನೆ, ವ್ಯಕ್ತಿಗಳನ್ನು ಪತ್ತೆ ಹಚ್ಚಲು ಇರುವ ಎನ್‌ಐಎ ರಿಯಾಜ್ ಪರಂಗಿ ಪೇಟೆ ಅವರ ಮನೆಗೆ ದಾಳಿ ನಡೆಸಿದಾಗ ಕೆಲವು ಮಿಂಡ್ರಿ ಮೀಡಿಯಾಗಳು ಹೆಡ್‌ಲೈನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹತ್ಯೆ ಸಂಚಿನಲ್ಲಿ ಭಾಗಿಯಾಗಿರುವ ಸುಳ್ಳು ವರದಿ ಮಾಡುತ್ತಾರೆ. ನಿಜವಾಗಿಯಾದರೂ ರಿಯಾಜ್ ಪರಂಗಿಪೇಟೆ ಮನೆಯಲ್ಲಿ ಎನ್‌ಐಎ ತನಿಖೆ ಮಾಡಿದಾಗ ಬಾಂಬ್‌ಗಳು ಸಿಕ್ಕಿಲ್ಲ. ಸಿಕ್ಕಿದ್ದು ಪಕ್ಷದ ಬ್ಯಾಡ್ಜ್ ಮತ್ತು ಅವರ ಸಹೋದರ, ಪತ್ನಿ, ಅವರ ಮೂರು ಮೊಬೈಲ್‌ಗಳು ಮಾತ್ರ. ಇದನ್ನು ಪತ್ತೆ ಮಾಡಲು ಬಂಟ್ವಾಳದ ಸಾಧ ಪೋಲೀಸ್ ಬಂದರೂ ನಾವು ಅದನ್ನು ಕೊಡುತ್ತಿದ್ದೆವು ಎಂದ ಅವರು ಎನ್.ಐ.ಎ, ಇಡಿ, ಸಿಬಿಐ ಇರಬಹುದು ಇವೆಲ್ಲ ಬಿಜೆಪಿ ಪಂಜರದ ಗಿಣಿ ಅನ್ನುವುದು ಬಹಳ ಸ್ಪಷ್ಟವಾಗಿ ನಮಗೆ ಗೊತ್ತಿದೆ. ಬಿಜೆಪಿ ಸರಕಾಋ ತನ್ನ ವಿರೋಧಿಗಳನ್ನು ಮಟ್ಟ ಹಾಕಲು ಈ ಪಂಜರದ ಗಿಣಿಗಳನ್ನು ಉಪಯಗಿಸುತ್ತಿದೆ ಎಂದ ಅವರು ಇವತ್ತು ನಾವು ಪ್ರತಿಜ್ಞೆ ಮಾಡಬೇಕಾಗಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ಮಾಡಿದ ಬಹುದ್ದೂರು ಜಾಫರ್‌ರವರ ಸ್ವಾತಂತ್ರ್ಯದ ಸಂಗ್ರಾಮದ ಕನಸನ್ನು ಮತ್ತೊಮ್ಮೆ ನನಸು ಮಾಡೋಣ ಎಂದರು.
ವಿಮೆನ್ಸ್ ಇಂಡಿಯಾ ಮೂಮೆಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಶ್ರೀಯಾ ಬೆಳ್ಳಾರೆ ಅವರು ಮಾತನಾಡಿ ಸ್ವಾತಂತ್ರ್ಯ ಹೋರಾಟಕ್ಕೆ ಹಿಂದೆ ನಮ್ಮ ಹಿರಿಯರು ಹೇಗೆ ತಮ್ಮ ಮನೆ ಮಂದಿಯನ್ನು ಅರ್ಪಣೆ ಮಾಡಿದ್ದಾರೋ ಅದೇ ರೀತಿ ಇವತ್ತು ನಮ್ಮ ಪತಿ, ಮಕ್ಕಳನ್ನು ದೇಶಕ್ಕಾಗಿ ಸಮರ್ಪಣೆ ಮಾಡುವ ಕಾಲ ಬಂದಿದೆ ಎಂದು ಹೇಳಿದರು. ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಇಬ್ರಾಹಿಂ ಸಾಗರ್ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಅಶ್ರಫ್ ಬಾವು, ನಗರ ಅಧ್ಯಕ್ಷ ಸಿರಾಜ್ ಕೂರ್ನಡ್ಕ, ನಗರಸಭಾ ಸದಸ್ಯೆ ಪಾತಿಮಾತ್ ಝೊರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ ಸ್ವಾಗತಿಸಿದರು. ಸದಸ್ಯ ಅಬ್ದುಲ್ ರಹಿಮ್ ವಿಟ್ಲ ವಂದಿಸಿದರು. ಪಕ್ಷದ ರಾಜ್ಯ ಸಮತಿ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಟನೆಯಲ್ಲಿ ಯಯ್ಯಾ ಕೂರ್ನಡ್ಕ, ಕಬಕ ಗ್ರಾ.ಪಂ ಸದಸ್ಯ ಫಾರೂಕ್, ನಗರಸಭಾ ಸದಸ್ಯೆ ಫಾತಿಮಾತ್ ಝೋರಾ, ನಗರಸ ಸಮಿತಿ ಅಧ್ಯಕ್ಷ ಸಿದ್ದಿಕ್ ಕೂರ್ನಡ್ಕ, ವಿಧಾನ ಸಭಾ ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಅನ್ವರ್ ಪೆರುವಾಯಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here