ಎಸ್ಸೆಸ್ಸೆಫ್ ಕುಂಬ್ರ ಸೆಕ್ಟರ್‌ನಿಂದ ರಕ್ತದಾನ ಶಿಬಿರ, ಸನ್ಮಾನ ಕಾರ್ಯಕ್ರಮ

0

ಪುತ್ತೂರು: ಎಸ್ಸೆಸ್ಸೆಫ್ ಕುಂಬ್ರ ಸೆಕ್ಟರ್ ಕ್ಯಾಂಪಸ್ ವತಿಯಿಂದ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಎಸ್ಸೆಸ್ಸೆಫ್ ಬ್ಲಡ್ ಸೈಬೋ ಕರ್ನಾಟಕ ಇದರ 282ನೇ ರಕ್ತದಾನ ಶಿಬಿರ ಕುಂಬ್ರ ಜಂಕ್ಷನ್‌ನಲ್ಲಿ ನಡೆಯಿತು.

ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಪುತ್ತೂರು ಡಿವಿಶನ್ ಅಧ್ಯಕ್ಷ ರಫೀಕ್ ಬಾಹಸನಿ ಪ್ರಾರ್ಥನೆಗೆ ನೇತೃತ್ವ ನೀಡಿದರು.

ಪ್ರಸ್ತಾವನೆಗೈದ ಯುವ ವಾಗ್ಮಿ ಅಮ್ಮರ್ ನೀರಕಟ್ಟೆ ಮಾತನಾಡಿ ರಕ್ತದಾನ ಇನ್ನೊಬ್ಬರ ಜೀವವುಳಿಸುವ ಮಹತ್ವದ ದಾನವಾಗಿದ್ದು ಇದಕ್ಕೆ ಜಾತಿ, ಧರ್ಮದ ವ್ಯತ್ಯಾಸವಿಲ್ಲ. ಪ್ರತಿಫಲಾಪೇಕ್ಷೆಯಿಲ್ಲದೇ ನೀಡುವ ರಕ್ತದಾನವು ಸೌಹಾರ್ದತೆಯ ಸಂದೇಶವಾಗಿದ್ದು ಎಸ್ಸೆಸ್ಸೆಫ್ ಸಂಘಟನೆಯು ರಕ್ತದಾನ ಸೇರಿದಂತೆ ವಿವಿಧ ಸಮಾಜಮುಖಿಯಾದ ಕಾರ್ಯಕ್ರಮಗಳ ಮೂಲಕ ನಿರಂತರ ಜನಸೇವೆಯನ್ನು ಮಾಡುತ್ತಿದೆ ಎಂದು ಹೇಳಿದರು.

ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ್ ಶೆಟ್ಟಿ, ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಕೆಯ್ಯೂರು ಗ್ರಾ.ಪಂ ಸದಸ್ಯ ಅಬ್ದುಲ್ ಖಾದರ್ ಮೇರ್ಲ, ಬಶೀರ್ ಮಾಸ್ಟರ್ ಮಾಡಾವು, ಆಶಿಕುದ್ದೀನ್ ಅಖ್ತರ್, ಕರೀಂ ಕಾವೇರಿ, ದುರ್ಗಾಪ್ರಸಾದ್ ರೈ ಕುಂಬ್ರ, ಒಳಮೊಗ್ರು ಗ್ರಾ.ಪಂ ಸದಸ್ಯರುಗಳಾದ ಅಶ್ರಫ್ ಉಜ್ರೋಡಿ, ವಿನೋದ್ ಕುಂಬ್ರ, ಶೀನಪ್ಪ ನಾಯ್ಕ, ಲತೀಫ್ ಕುಂಬ್ರ ಎಸ್‌ವೈಎಸ್ ಕುಂಬ್ರ ಸೆಂಟರ್ ಅಧ್ಯಕ್ಷ ಉಸ್ಮಾನ್ ಮುಸ್ಲಿಯಾರ್, ಪ್ರ.ಕಾರ್ಯದರ್ಶಿ ಮಹಮ್ಮದ್ ಬಾಯಂಬಾಡಿ, ಶಾಫಿ ಮದನಿ ಮಾಡಾವು, ಕುಂಬ್ರ ವರ್ತಕರ ಸಂಘದ ಸ್ಥಾಪಕಾಧ್ಯಕ್ಷ ಶ್ಯಾಮ್ ಸುಂದರ್ ರೈ ಕೊಪ್ಪಳ, ಕುಂಬ್ರ ವರ್ತಕ ಸಂಘದ ಮುಖಂಡ ಸಂಶುದ್ದೀನ್ ಎ.ಆರ್, ಬರಹಗಾರ ಎಸ್.ಪಿ ಬಶೀರ್ ಶೇಖಮಲೆ, ಮುಖ್ತಾರ್ ಕುಂಬ್ರ, ಯೂಸುಫ್ ಹಾಜಿ ಅರಿಕ್ಕಿಲ, ಎಸ್ಸೆಸ್ಸೆಫ್ ಬ್ಲಡ್ ಸೈಬೋ ಈಸ್ಟ್ ಜಿಲ್ಲಾ ಉಸ್ತುವಾರಿ ಸಿದ್ಧೀಕ್ ಗೂನಡ್ಕ, ಕನ್ವೀನರ್ ಜಹಾಝ್ ಅಳಿಕೆ, ಕರೀಂ ಬಾಅಸನಿ ರೆಂಜ, ಶಶಿಕಿರಣ್ ರೈ, ಸವಾದ್ ಕುಂಬ್ರ, ಕೆ.ಹೆಚ್ ಜಲೀಲ್ ಹಾಜಿ ಕುಂಬ್ರ, ಹೋಟೆಲ್ ರೋಯಲ್ ದರ್ಬಾರ್ ಮಾಲಕ ಹಮೀದ್, ಮಹಮ್ಮದ್ ಉಜ್ರೋಡಿ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು. ರಕ್ತದಾನ ಶಿಬಿರದಲ್ಲಿ ೬೧ ಯುನಿಟ್ ರಕ್ತ ಸಂಗ್ರಹಿಸಲಾಯಿತು.

ಸನ್ಮಾನ ಕಾರ್ಯಕ್ರಮ:
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಎಂ ಇಬ್ರಾಹಿಂ ಕೆಯ್ಯೂರು, ಪತ್ರಕರ್ತ ಯೂಸುಫ್ ರೆಂಜಲಾಡಿ, 40 ಬಾರಿ ರಕ್ತದಾನ ಮಾಡಿದ ಶಶಿಕಿರಣ್ ರೈ, 25 ಬಾರಿ ರಕ್ತದಾನ ಮಾಡಿದ ಹನೀಫ್ ಕೂಡುರಸ್ತೆಯವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಉಮ್ರಾ ಯಾತ್ರೆ ಕೈಗೊಂಡ ಕರೀಂ ಸಖಾಫಿ ಕಟ್ಟತ್ತಾರ್‌ರವರನ್ನು ಬೀಳ್ಕೊಡಲಾಯಿತು

LEAVE A REPLY

Please enter your comment!
Please enter your name here