ಕೊಯಿಲ: ಕಾರ್ಮಿಕ ಇಲಾಖೆಯಿಂದ ಸಿಗುವ ಸವಲತ್ತುಗಳು ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡುವಲ್ಲಿ ಭಾರತೀಯ ಮಜ್ದೂರ್ ಸಂಘವು ಅದ್ಯತೆ ನೀಡುತ್ತದೆ. ಯಾವುದೇ ಭ್ರಷ್ಟಚಾರಕ್ಕೆ ಎಡೆಮಾಡಿಕೊಡದೆ ಕಾರ್ಮಿಕರ ಕಲ್ಯಾಣಕ್ಕಾಗಿ ಸಂಘವು ಶ್ರಮಿಸುತ್ತಿದೆ ಎಂದು ಬಿಎಂಎಸ್ ಕಡಬ ತಾಲೂಕು ಪ್ರಭಾರಿ ಕುಮಾರನಾಥ್ ಶೆಟ್ಟಿ ಬೆಳ್ತಂಗಡಿ ಎಂದು ಹೇಳಿದರು.
ಅವರು ಸೆ.12ರಂದು ಕೊಯಿಲ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಭಾರತೀಯ ಮಜ್ದೂರ್ ಸಂಘ ಕಡಬ ತಾಲೂಕು ವತಿಯಿಂದ ಆಯೋಜಿಸಿದ ಕೊಯಿಲ, ರಾಮಕುಂಜ, ಹಳೆನೇರೆಂಕಿ ಗ್ರಾಮಗಳ ಕಟ್ಟಡ ಕಾರ್ಮಿಕ ಫಲಾನುಭವಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸಂಘದ ಕಡಬ ತಾಲೂಕು ಅಧ್ಯಕ್ಷ ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು. ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರ್ಷಿತ್ ಕುಮಾರ್, ಸಂಘದ ಕಡಬ ತಾಲೂಕು ಕಾರ್ಯದರ್ಶಿ ಜನಾರ್ದನ ಬಲ್ಯ ಸಂದರ್ಭೋಚಿತವಾಗಿ ಮಾತನಾಡಿದರು. ಸಂಘದ ಕೊಯಿಲ ಗ್ರಾಮ ಘಟಕದ ಕಾರ್ಯದರ್ಶಿ ವಿನೋದ್ ಪಲ್ಲಡ್ಕ ಉಪಸ್ಥಿತರಿದ್ದರು. ಸಂಘದ ಕೊಯಿಲ ಗ್ರಾಮ ಘಟಕದ ಅಧ್ಯಕ್ಷ ಚಿದಾನಂದ ಪಾನ್ಯಾಲು ಸ್ವಾಗತಿಸಿದರು. ಗ್ರಾಮ ಸಂಚಾಲಕ ಉಮೇಶ್ ಸಂಕೇಶ ವಂದಿಸಿದರು. ಆತೂರು ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿ ನಿರೂಪಿಸಿದರು.