ಪುತ್ತೂರು: ಮುಂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ವೆ ಗ್ರಾಮದ ೩ನೇ ವಾರ್ಡ್ ನೇರೊಳ್ತಡ್ಕ ವ್ಯಾಪ್ತಿಯ ಹಲವಾರು ವರ್ಷಗಳ ಬೇಡಿಕೆಯಾಗಿದ್ದ ಬೀದಿ ದೀಪದ ವ್ಯವಸ್ಥೆಯನ್ನು ಗ್ರಾ.ಪಂ.ನ ೧೫ನೇ ಹಣಕಾಸು ಯೋಜನೆಯಡಿ ಸುಮಾರು ರೂ.೧ ಲಕ್ಷ ವೆಚ್ಚದಲ್ಲಿ ಮಾಡಲಾಯಿತು. ಅನುದಾನ ಮೊತ್ತ ಸಾಕಾಗದ ಹಿನ್ನೆಲೆಯಲ್ಲಿ ಸ್ಥಳೀಯರಿಂದ ನೆರವು ಪಡೆದುಕೊಳ್ಳಲಾಯಿತು. ತಾಜು ನೇರೋಳ್ತಡ್ಕ ೩, ಅದ್ರಾಮ ನೇರೋಳ್ತಡ್ಕ ೧ ಹಾಗೂ ಗ್ರಾ.ಪಂ ಮಾಜಿ ಸದಸ್ಯ ಗಣೇಶ್ ನೇರೋಳ್ತಡ್ಕ ೧ ಬೀದಿದೀಪ ಕೊಡುಗೆಯಾಗಿ ನೀಡಿದರು. ಗ್ರಾ.ಪಂ ಸದಸ್ಯರುಗಳಾದ ಕರುಣಾಕರ ಗೌಡ ಎಲಿಯ, ಮಹಮ್ಮದ್ ಆಲಿ ನೇರೋಳ್ತಡ್ಕ, ಕಮಲ ನೇರೋಳ್ತಡ್ಕ ಮುಂತಾದವರ ನೇತೃತ್ವದಲ್ಲಿ ಬೀದಿ ದೀಪವನ್ನು ಉದ್ಘಾಟನೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ ಮಾಜಿ ಸದಸ್ಯರುಗಳಾದ ಗಣೇಶ್ ನೇರೋಳ್ತಡ್ಕ, ಉದಯ್ ಕುಮಾರ್ ರೈ ಬಾಕುಡ, ಧರ್ಮಸ್ಥಳ ಗ್ರಾ.ಯೋ.ಸರ್ವೆ ಎ ಒಕ್ಕೂಟದ ಅಧ್ಯಕ್ಷ ಸುಂದರ ಬಲ್ಯಾಯ ನೆಕ್ಕಿಲು, ಸ್ಥಳೀಯರಾದ ಅದ್ರಾಮ ನೇರೋಳ್ತಡ್ಕ, ಹಮೀದ್ ನೇರೋಳ್ತಡ್ಕ, ಮಹಮ್ಮದ್ ತಾಜ್, ಅಶ್ವತ್ ನೇರೋಳ್ತಡ್ಕ, ಶಬೀರ್ ನೇರೋಳ್ತಡ್ಕ, ಲಿಂಗಪ್ಪ ನೇರೋಳ್ತಡ್ಕ, ರಾಜೇಶ್ ನೇರೋಳ್ತಡ್ಕ ಹಾಗೂ ಊರಿನ ಹಲವಾರು ಮಂದಿ ಉಪಸ್ಥಿತರಿದ್ದರು.