ಉಪ್ಪಿನಂಗಡಿ: ಜೇಸಿಐ ಉಪ್ಪಿನಂಗಡಿ ಘಟಕದ 44ನೇ ಜೇಸಿ ಸಪ್ತಾಹ ಸ್ಪಂದನದ ಅಂಗವಾಗಿ ಇಲ್ಲಿನ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.
ಜೇಸಿಐ ಉಪ್ಪಿನಂಗಡಿ ಘಟಕದ ಪೂರ್ವಾಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಕಾರ್ಯಕ್ರಮ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿ ಪ್ರಮಿತ ಚಂದ್ರಹಾಸ್ ಪುತ್ತೂರು ಅವರು ಮಕ್ಕಳ ರಕ್ಷಣೆಯ ಬಗ್ಗೆ ಕಾನೂನು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಹನುಮಂತಯ್ಯ, ಜೇಸಿಐ ಪೂರ್ವಾಧ್ಯಕ್ಷರಾದ ವಿಜಯಕುಮಾರ್ ಕಲ್ಲಳಿಕೆ, ಉಪ್ಪಿನಂಗಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಸಹಶಿಕ್ಷಕ ಶ್ರೀಮತಿ ಕೃಷ್ಣವೇಣಿ, ಜೇಸಿಐ ಪೂರ್ವಾಧ್ಯಕ್ಷ ವಿಶ್ವನಾಥ ಕುಲಾಲ್, ಮಕ್ಕಳ ಹಕ್ಕುಗಳ ಕ್ಲಬ್ನ ಮಾರ್ಗದರ್ಶಿ ಶಿಕ್ಷಕಿ ದೇಜಮ್ಮ, ಮಕ್ಕಳ ಹಕ್ಕುಗಳ ಕ್ಲಬ್ನ ಅಧ್ಯಕ್ಷೆ ಅಲೀಮಾ ಫಲೀಲತ್ ಮತ್ತಿತರರು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಉಪ್ಪಿನಂಗಡಿ ಜೇಸಿಐ ಘಟಕದ ಉಪಾಧ್ಯಕ್ಷ ಕುಶಾಲಪ್ಪ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಜೇಸಿ ಮಹೇಶ್ ವಂದಿಸಿದರು. ಜೇಸಿ ಸುರೇಶ್ ಸಹಕರಿಸಿದರು.