ಸದಸ್ಯರಿಗೆ ಶೇಕಡಾ 20 ಡಿವಿಡೆಂಟ್, ಶೇಕಡಾ 65 ಬೋನಸ್
ಉಪ್ಪಿನಂಗಡಿ: ಇಳಂತಿಲ ಹಾಲು ಉತ್ಪಾದಕರ ಸಹಕಾರ ಸಂಘದ 2021-22ನೇ ಸಾಲಿನಲ್ಲಿ ಮಹಾಸಭೆ ಸಂಘದ ಅಧ್ಯಕ್ಷ ಸಭಾಂಗಣದಲ್ಲಿ ಈಚೆಗೆ ಜರಗಿತು.
ಸಂಘದ ವಿಜಯ ಕುಮಾರ್ ಕಲ್ಲಳಿಕೆ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಸದಸ್ಯರಿಗೆ ಶೇಕಡಾ 20 ಡಿವಿಡೆಂಡ್ ನೀಡಲು ಹಾಗೂ ಶೇಕಡಾ 65 ಬೋನಸ್ ಪಾವತಿಸಲು
ತೀರ್ಮಾನಿಸಿದೆ ಎಂದು ಘೋಷಿಸಿದರು. ಬಳಿಕ ಮಾತನಾಡಿದ ಅವರು ಗ್ರಾಮೀಣ ಭಾಗದ ಕೃಷಿಕರು ಹೈನುಗಾರಿಕೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ತಮ್ಮ ಆರ್ಥಿಕ ಬಲವನ್ನು ಹೆಚ್ಚಿಸಿಕೊಳ್ಳಬೇಕು, ಸದಸ್ಯರು ಉತ್ತಮ ಗುಣಮಟ್ಟದ ಹಾಲು ಸಂಘಕ್ಕೆ ಪೂರೈಸಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಸಂಘಕ್ಕೆ 180 ದಿನ ಹಾಲು ಪೂರೈಸಿದ ಸದಸ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಪ್ರೋತ್ಸಾಹ ಬಹುಮಾನ ನೀಡಲಾಯಿತು. ಒಕ್ಕೂಟದ ವಿಸ್ತರಣಾಧಿಕಾರಿ ರಾಜೇಶ್ ಪ್ರಸಾದ್ ನಾಯಕ್ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಸಂಘದ ಉಪಾಧ್ಯಕ್ಷ ಕುನ್ಹ ಎಂ.ಎನ್., ನಿರ್ದೇಶಕರಾದ ಕೆ. ವೆಂಕಟರಮಣ ಭಟ್, ಯುಮುನಾ ಕೋಡಿಯಡ್ಕ, ಬಾಬು ಪೂಜಾರಿ, ದೇವಣ್ಣ ನಾಯ್ಕ, ಗಣೇಶ ನೀನಿ, ನಾರಾಯಣ ಗೌಡ, ತುಕ್ರಪ್ಪ ಗೌಡ, ಜಯಂತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ನಿರ್ದೇಶಕ ಶಂಕರ ಭಟ್ ನಿಡ್ಡಾಜೆ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲ ಶೆಟ್ಟಿ ಲೆಕ್ಕಪತ್ರ ಮಂಡಿಸಿದರು. ವಿನ್ಸೆಂಟ್ ಬ್ರಾಗ್ಸ್ ವಂದಿಸಿದರು. ಸಿಬ್ಬಂದಿಗಳಾದ ಜನಾರ್ದನ ಗೌಡ, ನಾರ್ಣಪ್ಪ ಎಂ.ಎನ್., ಕೇಶವ, ಐವನ್ ಡಿ’ಸೋಜಾ, ಸತ್ಯನಾರಾಯಣ, ಉಮಾವತಿ ವಿವಿಧ ಕಾರ‍್ಯಕ್ರಮ ನಿರ್ವಹಿಸಿದರು.