ಸವಣೂರು ಗ್ರಾಮದ 2 ರಸ್ತೆಗಳಿಗೆ ತಲಾ 25 ಲಕ್ಷ ರೂ ಅನುದಾನ ಬಿಡುಗಡೆ

0

ಸವಣೂರು : ಸವಣೂರು ಗ್ರಾಮದ 2 ರಸ್ತೆಗಳಿಗೆ ಒಟ್ಟು 50 ಲಕ್ಷ ರೂ ಅನುದಾನ ಮಂಜೂರಾಗಿದ್ದು,ಮಳೆ ಕಡಿಮೆಯಾದ ಕೂಡಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಸುಳ್ಯ ಶಾಸಕರೂ ಆಗಿರುವ ಸಚಿವ ಎಸ್.ಅಂಗಾರ ಅವರ ಕಛೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಸವಣೂರು ಗ್ರಾಮದ ಪಣೆಮಜಲು -ಇಡ್ಯಾಡಿ ರಸ್ತೆಯ ಅಭಿವೃದ್ಧಿಗೆ 25 ಲಕ್ಷ ರೂ., ಸವಣೂರು-ಮುಗೇರು ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನ ಸಂಪರ್ಕ ರಸ್ತೆಗೆ 25 ಲಕ್ಷ ರೂ ಅನುದಾನವನ್ನು ಸಚಿವ ಎಸ್.ಅಂಗಾರ ಅವರು ಬಿಡುಗಡೆಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here