- ಭಾಷೆಯು ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತದೆ: ರವೀಂದ್ರ ಡಿ.
ವಿಟ್ಲ:ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ‘ಹಿಂದಿ ದಿವಸ್’ ಕಾರ್ಯಕ್ರಮವನ್ನು ತುಳಸಿದಾಸರ ಭಾವಚಿತ್ರವನ್ನು ಅನಾವರಣ ಮಾಡುವ ಮೂಲಕ ಉದ್ಘಾಟಿಸಲಾಯಿತು. ಸಬೆಯ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತಾಧಿಕಾರಿ ರವೀಂದ್ರ ಡಿ.ರವರು ಮಾತನಾಡಿ ಭಾಷೆಯು ಏಕತೆಯನ್ನು ಸಾರುತ್ತದೆ.
ಪ್ರತಿಯೊಂದು ಭಾಷೆಯಲ್ಲಿ ಮೌಲ್ಯಗಳು ಇರುತ್ತದೆ ಹೀಗಾಗಿ ಎಲ್ಲಾ ಭಾಷೆಯ ಜ್ಞಾನವನ್ನು ಪಡೆಯುವುದರಿಂದ ಭಾರತೀಯ ಸಂಸ್ಕೃತಿಯನ್ನು ರೂಢಿಸಿಕೊಳ್ಳಬಹುದು ಎಂದರು. ಭಾಷೆಯಿಂದ ನಮ್ಮ ಭಾವನೆಗಳನ್ನು ಹಂಚಬಹುದು. ಹಿಂದಿ ಭಾಷೆಯನ್ನು ಕಲಿಯುವ ಸಂಕಲ್ಪಗೈಯೋಣ ಎಂದರು. ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ ವಿ. ಶೆಟ್ಟಿರವರು ಹಿಂದಿ ಭಾಷೆ ಹಾಗೂ ಹಿಂದಿ ದಿವಸದ ಮಹತ್ವದ ಕುರಿತು ತಿಳಿಸಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು .ವಿದ್ಯಾರ್ಥಿನಿ ನಿಧಿ ಎಸ್ ಸ್ವಾಗತಿಸಿದರು. ಮೊಹಮ್ಮದ್ ಇಸ್ಮಾಯಿಲ್ ಸಹಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು,ಭುವಿ ವಂದಿಸಿದರು. ಫಾದಿಲ್ ಉಮ್ಮರ್, ಆಕಾಶ್, ಸಮೀಕ್ಷಾ ಹಾಗೂ ತೃಪ್ತಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.