ರಾಮಕುಂಜ: ಕೊಯಿಲ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಸೆ.13ರಂದು ನಡೆದ ರಾಮಕುಂಜ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯ ಕಿರಿಯ ಹಾಗೂ ಹಿರಿಯ ವಿಭಾಗದಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ಕಿರಿಯ ಪ್ರಾಥಮಿಕ ವಿಭಾಗ:
ನಾಲ್ಕನೇ ತರಗತಿಯ ಆರಾಧ್ಯ ಒ.ಆರ್. ಭಕ್ತಿಗೀತೆ ಪ್ರಥಮ, ಆಶ್ಲೇಷ್ ಬಿ., ಛದ್ಮವೇಷ ಪ್ರಥಮ, ಧೃತಿ ಕೆ.ಎ. ಅಭಿನಯ ಗೀತೆ ಪ್ರಥಮ, ಮೊಹಮ್ಮದ್ ತ್ವಾಹಾ ಅರೇಬಿಕ್ ಧಾರ್ಮಿಕ ಪಠಣ ತೃತೀಯ, ಕೆ.ವಿ ಪೃಥ್ವಿ ಚಿತ್ರಕಲೆ ತೃತೀಯ, ಸಾನ್ವಿ ಕಥೆ ಹೇಳುವುದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಹಿರಿಯ ಪ್ರಾಥಮಿಕ ವಿಭಾಗ:
7ನೇ ತರಗತಿಯ ಆದಿತ್ಯ ಎ.ಆರ್.ಭಟ್ ಶಾಸ್ತ್ರೀಯ ಸಂಗೀತ ಪ್ರಥಮ, ಭೌತಿಕ್ ಭಕ್ತಿಗೀತೆ ದ್ವಿತೀಯ, ದುಶ್ಯಾಂತ್ ಗೌಡ ಜೆ.ಎಲ್. ಹಿಂದಿ ಕಂಠಪಾಠ ದ್ವಿತೀಯ, ಪಾವನ ಕಥೆ ಹೇಳುವುದು ದ್ವಿತೀಯ, ಅನಘಾ ರೈ ಎಂ. ೬ನೇ ತರಗತಿಯ ಕೆ.ಎಲ್ ಪ್ರಥಮ್ ರೈ ಛದ್ಮವೇಷ ತೃತೀಯ, ಮಿಲನ್ ಪೂಜಾರಿ ಕಾಮಿಡಿ ದ್ವಿತೀಯ, 7ನೇ ತರಗತಿಯ ರಾಹುಲ್ ಹೆಚ್.ಆರ್. ಚಿತ್ರಕಲೆ ತೃತೀಯ, ಮನೀತ್ ಸಿ.ಯು. ಇಂಗ್ಲಿಷ್ ಕಂಠಪಾಠ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರ ಮಾರ್ಗದರ್ಶನದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.