- ರೈಲು ನಿಲ್ದಾಣದಲ್ಲಿ ಜಮಾಯಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು – ನಗರ ಠಾಣಾ ಪೊಲೀಸರಿಂದ ವಿಚಾರಣೆ
ಪುತ್ತೂರು: ಹಿಂದು ಯುವತಿಯರು ಮತ್ತು ಮುಸ್ಲಿಂ ಯುವಕರು ರೈಲಿನಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿರುವುದಾಗಿ ಮಾಹಿತಿ ಪಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು ಪುತ್ತೂರು ರೈಲು ನಿಲ್ದಾಣದಲ್ಲಿ ಜಮಾಯಿಸಿದ ಘಟನೆ ಸೆ.16ರಂದು ನಡೆದಿದೆ.
ಮಧ್ಯಾಹ್ನ ಸುಬ್ರಹ್ಮಣ್ಯದಿಂದ ಮಂಗಳೂರಿಗೆ ತೆರಳುವ ರೈಲಿನ ಒಂದೇ ಬೋಗಿಯಲ್ಲಿ ಹಿಂದೂ ಯುವತಿಯರು ಮತ್ತು ಮುಸ್ಲಿಂ ಯುವಕರು ಪ್ರಯಾಣಿಸುತ್ತಿದ್ದ ಮಾಹಿತಿ ಪಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು ರೈಲು ನಿಲ್ದಾಣದಲ್ಲಿ ಜಮಾಯಿಸಿದ್ದರು. ಘಟನೆಯ ಬಗ್ಗೆ ಮಾಹಿತಿ ಪಡೆದ ನಗರ ಠಾಣಾ ಪೊಲೀಸರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿಸಿದ್ದಾರೆ. ಈ ಮಧ್ಯೆ ಯುವಕರೊಂದಿಗೆ ಪಯಣಿಸುತ್ತಿದ್ದ ಯುವತಿಯರು ಕಾಣಿಯೂರಿನಲ್ಲಿ ರೈಲಿನಿಂದ ಇಳಿದು ಹೋಗಿರುವುದಾಗಿ ತಿಳಿದು ಬಂದಿದೆ.