ಸೆ.18: ಕೂಟೇಲು ಸೇತುವೆ ಲೋಕಾರ್ಪಣೆ

0

ಹಲವು ವರ್ಷಗಳ ಬೇಡಿಕೆ ಈಡೇರಿಕೆ, ರಸ್ತೆಯೂ ಮೇಲ್ದರ್ಜೆಗೆ

ಪುತ್ತೂರು: ಬೆಟ್ಟಂಪಾಡಿಯಿಂದ ಸುಳ್ಯಪದವುಗೆ ತೆರಳುವ ರಸ್ತೆಯ ಕೂಟೇಲು ಎಂಬಲ್ಲಿ ನೂತನವಾಗಿ ನಿರ್ಮಾಣವಾದ ಸೇತುವೆಯ ಲೋಕಾರ್ಪಣೆ ಕಾರ್ಯಕ್ರಮವು ಸೆ. ೧೮ ರಂದು ಭಾನುವಾರ ಬೆಳಿಗ್ಗೆ ನಡೆಯಲಿದೆ. ಪುತ್ತೂರು ಶಾಸಕರಾದ ಎಂ ಸಂಜೀವ ಮಠಂದೂರು ರವರು ಸೇತುವೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಸುಮಾರು 2.52 ಕೋಟಿ ರೂ ಶಾಸಕರ ಅನುದಾನದಲ್ಲಿ ಲೋಕೋಪೊಯೋಗಿ ಇಲಾಖೆಯು ಈ ಸೇತುವೆಯ ನಿರ್ಮಾಣವನ್ನು ಮಾಡಿದೆ. ಅಗಲ ಕರಿದಾಗಿರುವ ಈ ರಸ್ತೆಯಲ್ಲಿ ಕೋಟೇಲು ಎಂಬಲ್ಲಿ ಅಗಲ ಕಿರಿದಾದ ಅತ್ಯಂತ ಹಳೆಯ ಸೇತುವೆಯಿಂಧಾಗಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಇಲ್ಲಿ ಹೊಸ ಸೇತುವೆಯ ನಿರ್ಮಾಣ ಮಾಡುವಂತೆ ಚುನಾವಣೆಯ ಸಂದರ್ಬದಲ್ಲಿ ಈ ಭಗದ ಜನರು ಬೇಡಿಕೆಯನ್ನು ಇಟ್ಟಿದ್ದರು. ಗ್ರಾಮಸ್ಥರ ಬೇಡಿಕೆಯಂತೆ ಹೊಸ ಸೇತುವೆಯ ನಿರ್ಮಾಣ ಕಾರ್ಯ ನಡೆದಿದೆ. ಇದೇ ರಸ್ತೆಯನ್ನು ಪಿಡಬ್ಲ್ಯುಡಿ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದ್ದು ರಸ್ತೆಯ ಅಗಲಿಕರಣ ಕಾಮಗಾರಿಯೂ ನಡೆಯಲಿದೆ. ಸೇತುವೆಯ ಕಾಮಗಾರಿ ಪೂರ್ಣಗೊಂಡಿದ್ದು ರಸ್ತೆ ಕಾಮಗಾರಿ ಮತ್ತು ಸೇತುವೆಯ ಸಂಪರ್ಕ ಕಾಮಗಾರಿ ಇನ್ನು ಆಗಬೇಕಿದೆ. ವಾಹನ ಸಂಚಾರಕ್ಕೆ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ತುರ್ತಾಗಿ ಸೇತುವೆಯ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದ್ದು ಉಳಿದ ಕಾಮಗಾರಿ ಸಮರೋಪಾದಿಯಲ್ಲಿ ನಡೆಯಲಿದೆ.

ಈ ಭಗದ ಜನರ ಹಲವು ವರ್ಷಗಳ ಬೇಡಿಕೆಯಾಗಿತ್ತು ಸೇತುವೆಯ ನಿರ್ಮಾಣ. ಕೊಟ್ಟ ಭರವಸೆಯನ್ನು ಈಡೇರಿಸಿದ್ದೇನೆ. ಮಳೆಯ ಕಾರಣಕ್ಕೆ ಕಾಮಗಾರಿಯಲ್ಲಿ ಸ್ವಲ್ಪ ವಿಳಂಬವಾಗಿದೆ. ಆಧುನಿಕ ಟಚಪ್‌ನೊಂದಿಗೆ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಈ ರಸ್ತೆಯನ್ನು ಮೇಲ್ದರ್ಜೆಗೇರಿಸಲಾಗಿದ್ದು ಮುಂದಿನ ದಿನಗಳಲ್ಲಿ ರಸ್ತೆಯ ಅಗಲೀಕರಣ ಸೇರಿದಂತೆ ಇನ್ನಿತರ ಕಾಮಗಾರಿಯೂ ನಡೆಯಲಿದೆ. ಸಹಕರಿಸಿದ ಎಲ್ಲಾ ಗ್ರಾಮಸ್ಥರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ – ಸಂಜೀವ ಮಠಂದೂರು, ಶಾಸಕರು, ಪುತ್ತೂರು

LEAVE A REPLY

Please enter your comment!
Please enter your name here