ಪುತ್ತೂರು: ಬನ್ನೂರು ಗ್ರಾಮ ಪಂಚಾಯತ್, ಅಂಗನವಾಡಿ ಗ್ರಾಮ ವಿಕಾಸ ಕೇಂದ್ರ ಬೀರಿಗ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜನಶಿಕ್ಷಣ ಟ್ರಸ್ಟ್, ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ಸಾಂತ್ವನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸಾಕ್ಷರತಾ ದಿನಾಚರಣೆ ಮತ್ತು ಪೌಷ್ಠಿಕ ಆಹಾರ ಸಪ್ತಾಹ ಹಾಗು ಸಮುದಾಯದತ್ತ ಸಾಂತ್ವನ ಕಾರ್ಯಕ್ರಮ ಬೀರಿಗ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯ ದೀಪ ಬೆಳಗಿಸಿ ಉದ್ಘಾಟಿಸಿದರು. ಸಾಕ್ಷರತಾ ಚಟುವಟಿಕೆಯಿಂದ ಮಹಿಳೆಯರಲ್ಲಿ ಸ್ವಾವಲಂಬನೆ ಹಾಗೂ ಮಹಿಳಾ ಸಬಲೀಕರಣ ಆಗಿದೆ ಎಂದು ಅವರು ಹೇಳಿದರು. ನಿವೃತ್ತ ಸಿ.ಡಿ.ಪಿ.ಒ. ಶಾಂತಿ.ಟಿ. ಹೆಗಡೆ ಮಾತನಾಡಿ ಸಾಕ್ಷರತೆಯಿಂದ ಬೀರಿಗ ಮಾದರಿ ಗ್ರಾಮ ನಿರ್ಮಾಣವಾಗಿದೆ. ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಗೆ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ ಎಂದು ಶ್ಘಾಘಿಸಿದರು.
ಬನ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀನಿವಾಸ ಪೆರ್ವೋಡಿ ಮತ್ತು ಶೀನಪ್ಪ ಕುಲಾಲ್ ಶುಭಹಾರೈಸಿದರು. ಜಿಲ್ಲಾ ಸ್ವಚ್ಛತಾ ರಾಯಬಾರಿ ಶೀನಪ್ಪ ಶೆಟ್ಟಿ ಸಾಕ್ಷರತೆ, ಸ್ವಚ್ಛತೆ ಮತ್ತು ಸಮುದಾಯದತ್ತ ಸಾಂತ್ವನದ ಕುರಿತು ಸಂವಾದ ನಡೆಸಿ ಕೊಟ್ಟರು. ಪುತ್ತೂರು ತಾಲೂಕು ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ನಿಶಾಪ್ರಿಯ ಮತ್ತು ಬಂಟ್ವಾಳದ ಗೀತಾಶ್ರೀ ಅವರು ಸಾಂತ್ವನ ಕೇಂದ್ರದಿಂದ ಮಹಿಳೆಯರಿಗೆ ಆಗುವ ಪ್ರಯೋಜನ, ಸಮುದಾಯದ ಭಾಗವಹಿಸುವಿಕೆಯ ಬಗ್ಗೆ ಅನಿಸಿಕೆ ತಿಳಿಸಿದರು. ಮನವಳಿಕೆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಯಶೋದ ಅನುಭವ ಹಂಚಿಕೊಂಡರು. ಪೌಷ್ಠಕ ಆಹಾರ ಸಪ್ತಾಹದ ಅಂಗವಾಗಿ ಮಹಿಳೆಯರು ತಯಾರಿಸಿದ ಪೌಷ್ಠಿಕ ಆಹಾರದ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ಆಶಾ ಮೇಲ್ವಿಚಾರಕಿ ಹರಿಣಿ ಮತ್ತು ಆರೋಗ್ಯಾಧಿಕಾರಿ ಬಿ.ಎಚ್.ಒ ಸುಷ್ಮಾ ಪೌಷ್ಠಿಕ ಆಹಾರದ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಮಕ್ಕಳಿಂದ ಹಾಗೂ ಸ್ವಸಹಾಯ ಸಂಘದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.
ಅಂಗನವಾಡಿ ಪುಟಾಣಿಗಳಾದ ಮನ್ವಿತಾ, ರಶಿಕಾ, ತ್ರುಶ್ಮೇಶ ನವಸಾಕ್ಷರರರಾದ ಸೇಸಮ್ಮ, ಗಿರಿಜ, ನಾರಾಯಣ ಸುಳ್ಯ ಪ್ರಾರ್ಥಿಸಿದರು. ಬಾಲವಿಕಾಸ ಸಮಿತಿಯ ಅಧ್ಯಕ್ಷೆ ವಿದ್ಯಾ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಬನ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ತಿಮ್ಮಣ್ಣ ಪೂಜಾರಿ ರಾಘವೇಂದ್ರ, ಜನ ಶಿಕ್ಷಣ ಟ್ರಸ್ಟ್ನ ನಿರ್ದೇಶಕ ಕೃಷ್ಣಮೂಲ್ಯ, ಸಾಂತ್ವನದ ಅಶ್ವಿನಿ, ದೀಪ, ಆಶಾ ಕಾರ್ಯಕರ್ತೆಯರಾದ ಸಂಧ್ಯಾ, ಚಂದ್ರಾವತಿ, ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ ಅನಿತಾ, ಸಂಪನ್ಮೂಲ ವ್ಯಕ್ತಿ ಧನಲಕ್ಷ್ಮಿ, ಆಶಾ ಕಾರ್ಯಕರ್ತೆ ಪದ್ಮಾವತಿ, ಮೋಹಿನಿ ಬೆಳ್ಳಿಪ್ಪಾಡಿ, ಶಾಲಾಭಿವೃಧ್ಧಿ ಸಮಿತಿ ಅಧ್ಯಕ್ಷೆ ನಳಿನಿ, ರಮ್ಯ ಗೌಡ, ಸ್ವಸಹಾಯ ಸಂಘದವರು ತಾಯಂದಿರು, ನವಸಾಕ್ಷರರು ಅಂಗನವಾಡಿ ಮಕ್ಕಳು ಭಾಗವಹಿಸಿದರು. ಸ್ವಸಹಾಯ ಸಂಘದ ಸದಸ್ಯೆ ಗೀತಾ ಸ್ವಾಗತಿಸಿ ಗೀತಾ ವಂದಿಸಿದರು. ಅಂಗನವಾಡಿ ಕಾರ್ಯಕರ್ತೆ ಅರುಣಾ ಡಿ. ಕಾರ್ಯಕ್ರಮ ನಿರೂಪಿಸಿದರು. ಸಹಾಯಕಿ ಸಂಧ್ಯಾ ವಂದಿಸಿದರು.