ಆಲಂಕಾರು: ಆಲಂಕಾರು ಗ್ರಾಮ ಪಂಚಾಯತ್ ನಲ್ಲಿ ಮಹಿಳಾ ಗ್ರಾಮಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸದಾನಂದ ಆಚಾರ್ಯರವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಕಡಬ ಆರಕ್ಷಕ ಠಾಣೆ ಉಪನೀರಿಕ್ಷಕರಾದ ಅಂಜನೇಯ ರೆಡ್ಡಿಯವರು ಮಹಿಳಾ ಗ್ರಾಮ ಸಭೆಯಲ್ಲಿ ಮಾತನಾಡಿ ಗ್ರಾಮಸ್ಥರು ಸಾಮಾಜಿಕ ಜಾಲತಾಣದ ಬಗ್ಗೆ ಎಚ್ಚರಿಕೆ ವಹಿಸಬೇಕು ವಾಟ್ಸಪ್,ಫೇಸ್ ಬುಕ್,ಟ್ಟಿಟ್ಟರ್,ಇನ್ ಸ್ಟಾಗ್ರಾಮ್ ನಲ್ಲಿ ಸಂದೇಶ ವನ್ನು ವಿನಿಮಯ ಮಾಡುವಾಗ ಎಚ್ಚರಿಕೆ ವಹಿಸಬೇಕು ಇಲ್ಲದಿದ್ದರೆ ಅನಾವಶ್ಯಕವಾಗಿ ಜೈಲುಪಾಲಗುವ ಸಂಭವ ವಿರುತ್ತದೆ. ಅಹಿತಕರ ಘಟನೆಗಳು ನಡೆದಾಗ 112 ಕ್ಕೆ ಕರೆಮಾಡಿ ಎಂದು ತಿಳಿಸಿ ನಮ್ಮ ಮನೆಯನ್ನು ಅರಮನೆ ಮಾಡಿಕೊಳ್ಳುವುದು ಹಾಗು ಸೆರೆಮನೆ ಮಾಡಿಕೊಳ್ಳವುದು ನಮ್ಮಕೈಯಲ್ಲಿದೆ ಅದ್ದರಿಂದ ಮನೆಯಲ್ಲಿ ಉತ್ತಮ ಸಂಸ್ಕಾರವನ್ನು ಬೆಳೆಸಬೇಕು. ನಾವೆಲ್ಲರೂ ಸತ್ಯದ ಕಡೆ ನ್ಯಾಯದ ಕಡೆಗೆ ಇರಬೇಕು .ನೈತಿಕ ಮೌಲ್ಯವನ್ನು ತಾಯಂದಿರುವ ಮನೆಯಲ್ಲಿ ಎಲ್ಲಾರಿಗೂ ತಿಳಸಬೇಕು ಆವಗ ಸುಂದರ ಸಮಾಜ ನಿರ್ಮಾಣವಾಗುತ್ತದೆ. ನಾವು ಮನೆಯಲ್ಲಿ ಸಾಮಾಜಿಕ ಜಾಲತಾಣ,ದಾರವಾಹಿಗೆ ಹಾಗು ಇನ್ನಿತರ ದುಶ್ಚಟಗಳಿಗೆ ಮಾರುಹೋಗದೇ ಉತ್ತಮ ಸಂಸ್ಕಾರ ನಮ್ಮ ಮಕ್ಕಳಿಗೆ ಹಾಗು ಹಿರಿಯರಿಗೆ ತಿಳಿಸಬೇಕೆಂದು ತಿಳಿಸಿ ನಮ್ಮ ನಮ್ಮ ಮನೆಯಲ್ಲಿ ಉತ್ತಮ ಸಂಸ್ಕಾರ ನೀಡುವ ಪವಿತ್ರ ಗ್ರಂಥಗಳ ಬಗ್ಗೆ ಅಧ್ಯಯನ ಮಾಡಿ ಉತ್ತಮ ಸಂಸ್ಕಾರವನ್ನು ನಾವು ರೂಡಿಸಿಕೊಳ್ಳಬೇಕೆಂದರು.
ಅಂಗನವಾಡಿ ಮೇಲ್ವಿಚಾರಕಿ ಊಮಾವತಿಯವರು ಮಹಿಳೆಯರಿಗೆ ಉತ್ತಮ ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ನೀಡಿ ಮಹಿಳೆಯರ ಜಾಗೃತಿಯ ಬಗ್ಗೆ ತಿಳಿಸಿದರು.ಕಿರಿಯ ಅರೋಗ್ಯ ಸಹಾಯಕಿ ಸರೋಜಿನಿಯವರು ಮಳೆಗಾಲದಲ್ಲಿ ಡೆಂಗ್ಯೂ,ಮಲೇರಿಯಾ ಹಾಗು ಇನ್ನಿತರ ಜ್ವರಗಳ ಬಗ್ಗೆ ಮಾಹಿತಿ ನೀಡಿ ನಮ್ಮ ಸುತ್ತ ಮುತ್ತ ಸ್ವಚ್ಚತೆಗೆ ಅದ್ಯತೆ ನೀಡುವಂತೆ ತಿಳಿಸಿದರು. ಸಮುದಾಯ ಅರೋಗ್ಯ ಅಧಿಕಾರಿ ಯಶ್ಮೀತಾ ರವರು ವ್ಯಾಕ್ಸಿನೇಷನ್ ಹಾಗು ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ ಅಂದರೆ ಅಭಾ ಕಾಡ್೯ ನ ಬಗ್ಗೆ ಮಾಹಿತಿ ನೀಡಿದರು.
ಮಹಾತ್ಮಗಾಂಧಿ ಉದ್ಯೋಗಖಾತರಿ ಯೋಜನೆಯ ಸಂಪನ್ಮೂಲ ವ್ಯಕ್ತಿ ಭರತ್ ರವರು ನಮ್ಮ ನಮ್ಮ ಜಾಗದಲ್ಲಿ ಕೇಂದ್ರಸರಕಾರದ ಮಹತ್ವಕಾಂಕ್ಷೇಯೋಜನೆ ಯಲ್ಲಿ ಒಂದಾದ ಉದ್ಯೋಗ ಖಾತರಿಯೋಜನೆಯನ್ನು ಹೇಗೆ ಅನುಷ್ಠಾನಗೊಳಿಸಬಹುದು ಎನ್ನುವುದರ ಬಗ್ಗೆ ತಿಳಿಸಿದರು. ಇದೇ ಸಂಧರ್ಭದಲ್ಲಿ ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಇದರಡಿ ಸ್ವಚ್ಛತಾ ಹಿ ಸೇವಾ ಆಂದೋಲನಕ್ಕೆ ಚಾಲನೆ ನೀಡಲಾಯಿತು.
ಈ ಕುರಿತು ವಿಶೇಷ ಗ್ರಾಮ ಸಭೆ ನಡೆಸಿ ಗ್ರಾಮಸ್ಥರಿಗೆ ಸ್ವಚ್ಛತೆ, ನೈರ್ಮಲ್ಯದ ಕುರಿತು ಮಾಹಿತಿ ಹಾಗೂ ಸ್ವಚ್ಛತಾ ಹಿ ಸೇವಾ ಪ್ರತಿಜ್ಞೆಯನ್ನು ಮಾಡಲಾಯಿತು. ಸಭಾಧ್ಯಕ್ಷತೆ ವಹಿಸಿದ ಗ್ರಾಪಂ ಅಧ್ಯಕ್ಷರಾದ ಸದಾನಂದ ಆಚಾರ್ಯ ಮಾತನಾಡಿ ಮಹಿಳಾ ಗ್ರಾಮಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಅಗಮಿಸಿ ಉತ್ತಮ ಮಾಹಿತಿಯನ್ನು ನೀಡಿದ್ದಾರೆ ಅವರಿಗೆ ಕೃತಜ್ಞತೆ ಸಲ್ಲಿಸಿ ಮಹಿಳಾ ಗ್ರಾಮಸಭೆಯನ್ನು ಎಲ್ಲಾ ಮಹಿಳೆಯರು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಗನ್ನಾಥ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪಂಚಾಯತ್ ಕಾರ್ಯದರ್ಶಿ ವಸಂತಶೆಟ್ಟಿ ಧನ್ಯವಾದ ಸಮರ್ಪಿಸಿದರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷರಾದ ರೂಪಾಶ್ರೀ ಪಟ್ಟೆ, ಗ್ರಾ.ಪಂ ಸದಸ್ಯರಾದ ರವಿ ಕುಂಞಲಡ್ಡ, ಚಂದ್ರಶೇಖರ ಗೌಡತ್ತಿಗೆ, ಸುಶೀಲಾ, ವಾರಿಜಾ, ಆಲಂಕಾರು ಬೀಟ್ ಪೋಲಿಸ್ ಭಾಗ್ಯಮ್ಮ ಉಪಸ್ಥಿತರಿದ್ದರು. ಸಭೆಯಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮಹಿಳೆಯರು ಉಪಸ್ಥಿತರಿದ್ದರು.