ಉಪ್ಪಿನಂಗಡಿ ಕಥೊಲಿಕ್ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ರೂ.16.66 ಲಕ್ಷ ನಿವ್ವಳ ಲಾಭ | ಶೇ 12% ಡಿವಿಡೆಂಡ್ | ಪ್ರೋತ್ಸಾಹಧನ, ಧನಸಹಾಯ ವಿತರಣೆ

0

ಪುತ್ತೂರು:ಉಪ್ಪಿನಂಗಡಿ ಕಾಮತ್ ಕಟ್ಟಡದ ಪಥಮ ಮಹಡಿಯಲ್ಲಿ ವ್ಯವಹರಿಸುತ್ತಿರುವ ಉಪ್ಪಿನಂಗಡಿ ಕಥೊಲಿಕ್ ವಿವಿದೋದ್ದೇಶ ಸಹಕಾರ ಸಂಘದ 13 ನೇ ವಾರ್ಷಿಕ ಮಹಾಸಭೆಯು ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಜೋಸೆಫ್ ವಿ ಎಂ ರವರ ಅದ್ಯಕ್ಷತೆಯಲ್ಲಿ ಜರುಗಿತು.


ಸದಸ್ಯತನ, ಪಾಲು ಬಂಡವಾಳ : ಮಾರ್ಚ್ ವರ್ಷಾಂತ್ಯಕ್ಕೆ ಸಂಘದಲ್ಲಿ ೫೬೦ ಮಂದಿ ಸದಸ್ಯರು ಇದ್ದು ರೂ. ೧೩ .೧೬ ಲಕ್ಷ ಪಾಲು ಬಂಡವಾಳ ವಿರುತ್ತದೆ. ಮಾರ್ಚ್ ವರ್ಷಾಂತ್ಯಕ್ಕೆ ಉಳಿತಾಯ ಖಾತೆ, ನಿರಖು ಠೇವಣಿ, ಆವರ್ತ ಠೇವಣಿ, ದೈನಿಕ ಠೇವಣಿ, ಸಂಚಯ ಠೇವಣಿ ಸೇರಿದಂತೆ ಒಟ್ಟು ರೂ .೪ ೭೩ ಕೋಟಿ ಠೇವಣಿಯಿರುತ್ತದೆ. ತಾವು ಸಂಘದ ಮೇಲೆ ವಿಸ್ವಾಸ ಇಟ್ಟು, ಠೇವಣಿಯಿರಿಸಿ ಅಭಿವೃದ್ಧಿಗೆ ಕಾರಣರಾದ ಎಲ್ಲಾ ಠೇವಣಿದಾರರಿಗೂ, ಗ್ರಾಹಕರಿಗೂ ಸಂಘದ ಅಧ್ಯಕ್ಷರಾದ ಜೋಸೆಫ್ ವಿ ಎಂರವರು ಅಭಿನಂದನೆ ಸಲ್ಲಿಸುತ್ತಾ ಮುಂದಿನ ಆರ್ಥಿಕ ವರ್ಷದಲ್ಲಿ ಇನ್ನು ಹೆಚ್ಚಿನ ವ್ಯವಹಾರವನ್ನು ನಡೆಸುವಂತೆ ಅವರು ಸಹಕಾರವನ್ನು ಕೋರಿದರು.

ನಿವ್ವಳ ಲಾಭ ರೂ.೧೬ .೬೬ ಲಕ್ಷ, ಶೇ ೧೨% ಡಿವಿಡೆಂಡ್ :
ಸಂಘವು ಸದಸ್ಯರ ಆರ್ಥಿಕ ಅಭಿವೃದ್ಧಿಗಾಗಿ ವಿವಿಧ ಸಾಲಗಳನ್ನು ನೀಡಿದ್ದು ಈ ಪೈಕಿ ಮಾರ್ಚ್ ವರ್ಷಾಂತ್ಯಕ್ಕೆ ಜಾಮೀನು ಸಾಲ, ಅಸ್ತಿ ಅಡವು ಸಾಲ, ವ್ಯಾಪಾರ ಸಾಲ, ತುರ್ತು ಸಾಲ/ವಾಹನ ಈಡಿನ ಸಾಲ,ಚಿನ್ನಾಭರಣ ಸಾಲ, ಠೇವಣಾತಿ ಸಾಲ ಸೇರಿದಂತೆ ರೂ. ೪.೨೫ ಕೋಟಿ ಹೊರ ಬಾಕಿ ಇರುತ್ತದೆ. ಸಂಘದ ೨೦೨೧ – ೨೦೨೨ ನೇ ಸಾಲಿನಲ್ಲಿ ಲೆಕ್ಕ ಪರಿಶೋದನೆಯನ್ನು ಲೆಕ್ಕ ಪರಿಶೋಧಕರು ನಡೆಸಿದ್ದು ಸಂಘವು ರೂ.೧೬ ೬೬ ಲಕ್ಷ ಲಾಭ ಗಳಿಸಿರುತ್ತದೆ. ಈ ಬಾರಿ ಸಂಘದ ಸದಸ್ಯರಿಗೆ ಶೇ. ೧೨ % ಡಿವಿಡೆಂಡ್ ನೀಡಲಾಗುವುದು ಎಂದು ಅಧ್ಯಕ್ಷರಾದ ಜೋಸೆಫ್ ವಿ. ಎಂ ರವರು ಸಭೆಯಲ್ಲಿ ಘೋಷಿಸಿದರು. ಪ್ರೋತ್ಸಹ ಧನ /ಧನಸಹಾಯ ವಿತರಣೆ:
ನಮ್ಮ ಸಂಘದ ಪ್ರಧಾನ ಶಾಖೆ ಹಾಗೂ ನೆಲ್ಯಾಡಿ ಶಾಖೆಯಲ್ಲಿರುವ ಪಿಗ್ಮಿ ಸಂಗ್ರಹಕಾರರಿಗೆ ಸಂಘದ ವತಿಯಿಂದ ಸಂಘದ ಅಧ್ಯಕ್ಷರು ಪ್ರೋತ್ಸಾಹಧನವನ್ನು ವಿತರಿಸಿದರು. ಸಂಘದ ಉಪಾಧ್ಯಕ್ಷರಾದ ಜಾನ್ ಫೆರ್ನಾಂಡಿಸ್ ರವರು ವೈದಕೀಯ ಸಹಾಯವನ್ನು ವಿತರಿಸಿದರು. ಸಂಘದ ಕಾರ್ಯದರ್ಶಿ ಲ್ಯಾನ್ಸಿ ಡಿ’ ಸೋಜಾರವರು ಹಿಂದಿನ ಸಾಲಿನ ವಾರ್ಷಿಕ ವರದಿಯನ್ನು ,ನೆಲ್ಯಾಡಿ ಶಾಖೆಯ ಲೆಕ್ಕಿಗಾರದ ಅವಿನಾಶ್ ಡಿ ‘ ಸೋಜಾ ರವರು ಜಮಾ ಮತ್ತು ಖರ್ಚಿನ ತಕ್ಕೆ, ಲಾಭ, ನಷ್ಟದ ತಕ್ಕೆ, ಪ್ರಧಾನ ಶಾಖೆಯ ಲೆಕ್ಕಿಗರಾದ ಕುಮಾರಿ ಸಪ್ನಾ ರೋಜ್ ಮಿನೇಜಸ್ ರವರು ಅಸ್ತಿ, ಜವಾಬ್ದಾರಿಯ ತಕ್ಕೆ ಹಾಗೂ ಅಂದಾಜು ಆಯ-ವ್ಯಯ ಪಟ್ಟಿಯನ್ನು ಓದಿದರು.

ಸಂಘದ ನಿರ್ದೇಶಕಿ ಶ್ರೀಮತಿ ಶಾಲೆಟ್ ವಾಸ್ ಹಾಗೂ ಪ್ರಧಾನ ಶಾಖೆಯ ಲೆಕ್ಕಿಗರಾದ ಕುಮಾರಿ ಸಪ್ನಾ ರೋಜ್ ಮೆನೆಜಸ್, ಸಂಘದ ಹಿರಿಯ ಸದಸ್ಯರಾದ ಡೆನ್ನಿಸ್ ಪಿಂಟೋರವರು ಮಾತನಾಡಿ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಹಾಗೂ ಶ್ರಮಿಸುತ್ತಿರುವ ಆಡಳಿತ ಮಂಡಳಿ ಹಾಗೂ ಸಿಬಂದಿ ವರ್ಗಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಇನ್ನು ಹೆಚ್ಚಿನ ವ್ಯವಹಾರವನ್ನು ನಡೆಸಿ ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು.

ಸಂಘದ ಸದಸ್ಯರುಗಳ ಸಹಕಾರದಿಂದ ಸಂಘವು ಅಭಿವೃದ್ಧಿ…
ಸಂಘದ ಮೇಲೆ ವಿಶ್ವಾಸ ಇಟ್ಟು ಠೇವಣಿಯಿರಿಸಿ ಅಭಿವೃದ್ಧಿಗೆ ಕಾರಣರಾದ ಎಲ್ಲಾ ಠೇವಣಿದಾರರಿಗೂ, ಗ್ರಾಹಕರಿಗೂ,ಅಲ್ಲದೆ ಸೂಕ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡಿ ಸಹಕರಿಸಿದ ಸದಸ್ಯರೆಲ್ಲರಿಗೂ, ನಮ್ಮ ಸಂಘದ ಕಾರ್ಯಕಲಾಪಗಳಿಗೆ ಸದಾ ಮಾರ್ಗದರ್ಶನ ನೀಡುತ್ತಿರುವ ಸಹಕಾರ ಇಲಾಖೆಗೆ, ಎಸ್.ಸಿ.ಡಿ.ಸಿ.ಸಿ . ಬ್ಯಾಂಕಿನ ಉಪ್ಪಿನಂಗಡಿ ಶಾಖೆಯ ಪ್ರಬಂಧಕರಿಗೆ,ನಮ್ಮ ಸಂಘದ ಅಧ್ಯಕ್ಷರಿಗೆ, ನಿರ್ದೇಶಕರಿಗೆ ಹಾಗೂ ಸಿಬಂದಿ ವರ್ಗಕ್ಕೆ ವರದಿ ಸಾಲಿನಲ್ಲಿ ಲೆಕ್ಕಪರಿಶೋದನೆಯನ್ನು ಮಾಡಿದ ಸಿಎ ಸುಜಯ ಡಿ.ಆಳ್ವ ಮಂಗಳೂರು ಇವರಿಗೂ, ಕಾನೂನು ಸಲಹೆಗಾರರಾದ ಮಹೇಶ್ ಕಜೆ, ಮನೋಹರ್ ಹಾಗೂ ರಾಕೇಶ್ ಮಸ್ಕರೇನಸ್ ರವರಿಗೂ ನಮ್ಮ ಸಂಘದ ಪರವಾಗಿ ಕೃತಜತೆಗಳು. ಸದಸ್ಯರುಗಳ ಸಹಕಾರವೇ ನಮ್ಮ ಸಂಘದ ವ್ಯವಹಾರ ವೃದ್ಧಿಯಾಗಲು ಕಾರಣವಾಗಿದೆ.ಇದೆ ರೀತಿ ನಿಮ್ಮೆಲ್ಲರ ನಂಬಿಕೆ, ಉತ್ತೇಜನ ಹಾಗೂ ಪ್ರೋತ್ಸಾಹದಿಂದ ಈ ಸಹಕಾರ ಸಂಘವು ಮುಂದೆ ಅಭಿವೃದ್ಧಿ ಸಾಧಿಸಬೇಕಾಗಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವೆ ಸಲ್ಲಿಸಲು ಈ ಸಹಕಾರ ಸಂಘವು ಸದಾ ಸಿದ್ಧವಿದೆ-ಜೋಸೆಫ್ ವಿ.ಎಂ. ಅಧ್ಯಕ್ಷರು, ಉಪ್ಪಿನಂಗಡಿ ಕಥೊಲಿಕ್ ವಿವಿದೋದ್ದೇಶ ಸಹಕಾರ ಸಂಘ ನಿ.

LEAVE A REPLY

Please enter your comment!
Please enter your name here