ಪುತ್ತೂರು: ಓಶ್ಯನ್ ಹೆಲ್ತ್ ಕೇರ್ ಪಾಲಿ ಕ್ಲಿನಿಕ್ ಈಶ್ವರಮಂಗಲ ಹಿರಾ ಟವರ್ನಲ್ಲಿ ಸೆ.21ರಂದು ಶುಭಾರಂಭಗೊಂಡಿತು. ಡಾ.ಉದನೇಶ್ವರ ಭಟ್ ಕ್ಲಿನಿಕ್ನ್ನು ಉದ್ಘಾಟಿಸಿ ಶುಭ ಹಾರೈಸಿದರು.
ತುಳುನಾಡ ಸಾಹಿತ್ಯ ಅಕಾಡೆಮಿ ಸದಸ್ಯ ರವೀಂದ್ರ ರೈ ಮಲ್ಲಾವರ ಮಾತನಾಡಿ ಅಭಿವೃದ್ಧಿ ಹೊಂದುತ್ತಿರುವ ಈಶ್ವರಮಂಗಲಕ್ಕೆ ಇಂತಹ ಹೆಲ್ತ್ ಕೇರ್ ಸೆಂಟರ್ಗಳು ಅತ್ಯವಶ್ಯಕ ಎಂದು ಹೇಳಿ ಶುಭ ಹಾರೈಸಿದರು.
ಡಾ. ಶ್ರೀಕುಮಾರ್, ಡಾ.ವೀಣಾ ಸುಳ್ಯ, ಡಾ.ಮೋಹನ್ದಾಸ್ ರೈ, ಡಾ.ವಿದ್ಯಾ ಮೋಹನ್ದಾಸ್ ರೈ, ಮೇನಾಲ ಮಧುರಾ ಇಂಟರ್ನ್ಯಾನಶಲ್ ಸ್ಕೂಲ್ನ ನಿರ್ದೇಶಕ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ನೆ.ಮುಡ್ನೂರು ಗ್ರಾ.ಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ, ಸದಸ್ಯ ರಿಯಾಝ್, ಹಿರಾ ಟವರ್ನ ಮಾಲಕ ಅಬ್ದುಲ್ ಖಾದರ್ ಹಾಜಿ, ರಾಮ್ಪ್ರಸಾದ್ ಆಳ್ವ ಮತ್ತಿತರ ಹಲವರು ಆಗಮಿಸಿ ಶುಭ ಹಾರೈಸಿದರು. ಸಂಸ್ಥೆಯ ಪಾಲುದಾರರಾದ ಶ್ರೀಕಾಂತ್ ರೈ, ಅಹ್ಮದ್ ಅನಸ್ ಹಾಗೂ ಶ್ಯಾಮ್ ರಾಜ್ ಟಿ.ಕೆ ಅತಿಥಿಗಳನ್ನು ಸ್ವಾಗತಿಸಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಲಭ್ಯವಿರುವ ಸೇವೆಗಳು:
ಕ್ಲಿನಿಕ್, ಲ್ಯಾಬೊರೇಟರಿ, ಔಷಧಾಲಯ, ಇಸಿಜಿ, ಆಕ್ಸಿಜನ್, ಒಬ್ಸರ್ವೇಶನ್, ಡ್ರೆಸ್ಸಿಂಗ್, ನೆಬುಲೈಸೇಶನ್ ಸೇವೆಗಳು ಲಭ್ಯವಿದೆ.
ಲಭ್ಯವಿರುವ ವೈದ್ಯರು:
ಡಾ. ದೀಪಾಲಕ್ಷ್ಮೀ, ಎಂ.ಬಿ.ಬಿ.ಎಸ್, ಡಾ. ವಾಸ್ತವಿ ಎಚ್ ಶೆಟ್ಟಿ, ಎಂ.ಬಿ.ಬಿ.ಎಸ್, ಡಾ. ಶಿಜಿತ್ ಆದೂರು, ಎಂ.ಬಿ.ಬಿ.ಎಸ್, ಡಾ. ಅಖಿಲ್ ಸಿ.ಎಚ್, ಎಂ.ಬಿ.ಬಿ.ಎಸ್ ಲಭ್ಯರಿರಲಿದ್ದಾರೆ.
ಸಂದರ್ಶಕ ವೈದ್ಯರು:
ಖ್ಯಾತ ವೈದ್ಯರಾರ ಡಾ.ವೀಣಾ ಎನ್, ಎಂ.ಬಿ.ಬಿ.ಎಸ್, ಡಿಜಿಒ(ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ), ಡಾ.ಜೋಸೆಫ್ ಶಿಬು, ಎಂ.ಬಿ.ಬಿ.ಎಸ್, ಎಂ.ಡಿ(ಜನರಲ್ ಮೆಡಿಸಿನ್ ಕನ್ಸಲ್ಟಂಟ್ ಫಿಸಿಶಿಯನ್) ಹಾಗೂ ಡಾ.ಶ್ರೀಷ್ಮಾ(ಡೆರ್ಮೆಟೊಲೋಜಿ, ಸ್ಕಿನ್) ಓಶ್ಯನ್ ಹೆಲ್ತ್ ಕೇರ್ ಪಾಲಿ ಕ್ಲಿನಿಕ್ಗೆ ಭೇಟಿ ನೀಡಿಲಿದ್ದಾರೆ ಎಂದು ಕ್ಲಿನಿಕ್ನ ಮುಖ್ಯಸ್ಥರು ತಿಳಿಸಿದ್ದಾರೆ.