ಪುತ್ತೂರು: ಮಚ್ಚಿಮಲೆ-ಬಲ್ನಾಡು ಸಂಪರ್ಕ ರಸ್ತೆಗೆ ಧರೆ ಕುಸಿದು ವಾಹನ ಸಂಪರ್ಕ ಕಡಿತಗೊಂಡಿರುವುದನ್ನು ಆರ್ಯಾಪು ಗ್ರಾಮ ಪಂಚಾಯತ್ ವತಿಯಿಂದ ರಸ್ತೆಯಲ್ಲಿ ಬಿದ್ದ ಮಣ್ಣನ್ನು ತೆರವುಗೊಳಿಸಿ ಸಂಪರ್ಕ ಕಲ್ಪಿಸಿಕೊಡಲಾಗಿದೆ.
ಸಂಪರ್ಕ ರಸ್ತೆ ಅ.20ರಂದು ಸುರಿದ ಭಾರೀ ಮಳೆಗೆ ಧರೆ ಕುಸಿದು ಸಂಪರ್ಕ ಕಡಿತಗೊಂಡಿತ್ತು. ಜನತೆಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕೂಡಲೇ ಕಾರ್ಯಪ್ರವೃತ್ತರಾದ ಆರ್ಯಾಪು ಗ್ರಾಮ ಪಂಚಾಯತ್ ಜೆಸಿಬಿ ಮೂಲಕ ರಸ್ತೆಗೆ ಬಿದ್ದ ಮಣ್ಣನ್ನು ತೆರವುಗೊಳಿಸಿ ಸಂಪರ್ಕ ಕಲ್ಪಿಸಿಕೊಡಲಾಗಿದೆ. ಗ್ರಾ.ಪಂ ಅಧ್ಯಕ್ಷೆ ಗೀತಾ , ಸದಸ್ಯ ವಸಂತ ಶ್ರೀ ದುರ್ಗಾ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ವಿರೂಪಾಕ್ಷ ಭಟ್ ಮಚ್ಚಿಮಲೆ , ಎಂ.ಎಸ್ ಈಶ್ವರ , ಜಾನು ನಾಯ್ಕ , ಪ್ರಜ್ವಲ್ ಕೃಷ್ಣ, ಚಂದ್ರ ಶೇಖರ ಹಾಗೂ ಊರಿನವರು ಮಣ್ಣು ತೆರವುಗೊಳಿಸುವಲ್ಲಿ ಸಹಕರಿಸಿದರು.