ಐತ್ತೂರು: 20 ವರ್ಷದಿಂದ ಸೇತುವೆ ನಿರ್ಮಾಣಕ್ಕೆ ಬೇಡಿಕೆ, ಮನವಿ

0
  • ಮುಂದೆ ಚುನಾವಣೆ ಬಹಿಷ್ಕಾರಕ್ಕೆ ನಾಗರಿಕರ ನಿರ್ಧಾರ-ಕಡಬ ತಹಸೀಲ್ದಾರರಿಗೆ ಮನವಿ

ಕಡಬ: ಕಳೆದ ಸುಮಾರು ೨೦ ವರ್ಷಗಳಿಂದ ಬಜಕೆರೆ ಸಮೀಪ ಸೇತುವೆ ನಿರ್ಮಾಣಕ್ಕೆ ಸಚಿವರು, ಶಾಸಕರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದೆ ಸೇತುವೆ ನಿರ್ಮಾಣದ ಕನಸು ಕನಸಾಗಿಯೇ ಉಳಿದಿರುವ ಹಿನ್ನಲೆಯಲ್ಲಿ ಐತ್ತೂರು ಹಾಗೂ ೧೦೨ನೇ ನೆಕ್ಕಿಲಾಡಿ ಗ್ರಾಮ ವ್ಯಾಪ್ತಿಯಲ್ಲಿ ಬರುವ ಬೋಳಂತ್ತಡ್ಕ, ಬರೆಮೇಲು, ಐತ್ತೂರುಬೈಲು ಮತ್ತು ಎನ್ ಕೂಪ್ ಭಾಗದ ನಿವಾಸಿಗಳು ಮುಂದಿನ ಚುನಾವಣೆಯನ್ನು ಬಹಿಷ್ಕಾರ ಮಾಡುವ ನಿರ್ಧಾರಕ್ಕೆ ಬಂದಿದ್ದು, ಅವರು ಸೆ.೨೬ರಂದು ಕಡಬ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಆ ಭಾಗದ ಸುಮಾರು ೨೫ಕ್ಕೂ ಹೆಚ್ಚು ಮಂದಿ ಕಡಬ ತಹಸೀಲ್ದಾರ್ ರಮೇಶ್ ಬಾಬು ಅವರನ್ನು ಭೇಟಿ ಮಾಡಿ ಸೇತುವೆ ಸಂಪರ್ಕ ಇಲ್ಲದೆ ಆ ಭಾಗದ ಜನತೆಗೆ ಆಗಿರುವ ತೊಂದರೆಯನ್ನು ವಿವರಿಸಿದ್ದಾರೆ. ಬಜಕೆರೆಯಲ್ಲಿ ರೈಲ್ವೇ ಸೇತುವೆ ಇದ್ದರೂ ಅದು ಸಾರ್ವಜನಿಕರು, ಮಕ್ಕಳ ಸಂಚಾರಕ್ಕೆ ಅಪಾಯಕಾರಿಯಾಗಿದೆ, ಯಾವುದೇ ಸಮಯದಲ್ಲಿ ರೈಲು ಬರಬಹುದು ಆ ಸಂದರ್ಭದಲ್ಲಿ ಸೇತುವೆಯ ಮೆಲೆ ಸಂಚಾರ ಸಾದ್ಯವಿಲ್ಲ ಎಂದು ಭೀತಿ ವ್ಯಕ್ತಪಡಿಸಿರುವ ನಾಗರಿಕರು ಅಲ್ಲಿ ಸೇತುವೆ ನಿರ್ಮಾಣ ಮಾಡಿ ಕೊಡಲೇಬೇಕು ಎಂದು ಪಟ್ಟು ಹಿಡಿದ್ದಾರೆ. ಪ್ರತಿನಿತ್ಯ ಕರ್ಮಾಯಿ ಭಾಗಕ್ಕೆ ಶಾಲಾ ಮಕ್ಕಳಿಗೂ ಬರಲು ಅನಾನುಕೂಲವಾಗುತ್ತಿದೆ. ಈ ಹಿಂದೆ ಶಾಲಾ ಎಸ್.ಡಿ.ಎಂ.ಸಿ. ವತಿಯಿಂದಲೂ ಮನವಿ ಸಲ್ಲಿಸಲಾಗಿತ್ತು. ಈಗಾಗಲೇ ಸಚಿವರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳಿಗೆ ಪಂಚಾಯತ್ ಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಮನವಿ ನೀಡಿ ಸಾಕಾಗಿದೆ ಇನ್ನೂ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಅಲ್ಲಿಯ ನಾಗರಿಕರು ಕಡಬ ತಹಸೀಲ್ದಾರ್ ಅವರಿಗೆ ಮನವಿ ನೀಡಿ ತಿಳಿಸಿದ್ದಾರೆ. ಚುನಾವಣೆ ಬಹಿಷ್ಕಾರ ಹಾಗೂ ಉಗ್ರ ಹೋರಾಟ ಮಾಡುವುದಾಗಿಯೂ ಈ ಸಂದರ್ಭದಲ್ಲಿ ಅವರು ಎಚ್ಚರಿಕೆ ನೀಡಿದ್ದಾರೆ. ಮನವಿ೯ ನೀಡುವ ಸಂದರ್ಭದಲ್ಲಿ ಜಯರಾಮ ಕಡಮ್ಮಾಜೆ, ವೆಂಕಪ್ಪ ಗೌಡ ಕಡಮ್ಮಾಜೆ, ಸಿ.ಡಿ.ತೋಮಸ್, ಧರ್ಮಪಾಲ ಗೌಡ, ರಾಮಕೃಷ್ಣ ಕೆ. ವಾಸುದೇವ, ಚೈತ್ರಪ್ರಕಾಶ್, ಶೇಖರ ಪೂಜಾರಿ, ದಾಸಪ್ಪ ಪೂಜಾರಿ, ಎ.ನಾಗೇಶ, ನಾರಾಯಣ ಕೊಡೆಂಕಿರಿ, ಸುವರ್ಣ, ಜನಾರ್ದನ ಎ. ಶಶಿಕಲಾ ಬಿ.ಎಂ. ಹುಕ್ರಪ್ಪ ಪೂಜಾರಿ, ವಿಶ್ವನಾಥ ಬರಮೇಲು ಸೇರಿದಂತೆ ಇನ್ನಿತರ ಹಲವಾರು ಮಂದಿ ನಾಗರಿಕರು ಉಪಸ್ಥಿತರಿದ್ದರು. ಕಡಬ ತಹಸೀಲ್ದಾರ್ ರಮೇಶ್ ಬಾಬು ಮನವಿ ಸ್ವೀಕರಿಸಿದರು. ಉಪ ತಹಸೀಲ್ದಾರ್‌ಗಳಾದ ಗೋಪಾಲ, ಮನೋಹರ್ ಕೆ.ಟಿ. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here