ಪುತ್ತೂರು: ಡಾ|ಶಿವರಾಮ ಕಾರಂತರು 1931ರಲ್ಲಿ ಪ್ರಾರಂಭಿಸಿದ್ದ ಸಾಂಸ್ಕೃತಿಕ ಉತ್ಸವ ‘ಪುತ್ತೂರು ದಸರಾ ನಾಡಹಬ್ಬ’ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಸೆ.26ರಂದು ಆರಂಭಗೊಂಡಿದೆ.ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಡಾ|ಶಿವರಾಮ ಕಾರಂತರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ, ದೀಪ ಪ್ರಜ್ವಲಿಸಿ ಪುತ್ತೂರು ದಸರಾ ನಾಡಹಬ್ಬಕ್ಕೆ ಚಾಲನೆ ನೀಡಿ, ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ, ನಾಡಿನ ಹಬ್ಬಕ್ಕೆ ವ್ಯವಸ್ಥಾಪನಾ ಸಮಿತಿಯಿಂದ ಎಷ್ಟು ಸಾಧ್ಯವೋ ಅಷ್ಟು ಸಹಕಾರ ನೀಡುವುದು ನಮ್ಮ ಕರ್ತವ್ಯ ಎಂದು ಸಹಕಾರ ನೀಡುತ್ತಿದ್ದೇವೆ. ಇವತ್ತು ದೇವಸ್ಥಾನದಲ್ಲೂ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ. ಈಗಾಗಲೇ ಅಷ್ಟಾಂಗ ಯೋಗ ಯಾವ ರೀತಿ ಎಂಬ ಸಣ್ಣಪರಿಚಯವನ್ನು ಮಾಡಲಾಗಿದೆ. ಮುಂದೆ ಸಮಾಜ ಪರಿವರ್ತನೆಯಾಗಲು ಬೇಕಾದ ಎಲ್ಲಾ ವಿಚಾರವನ್ನು ಸೇರಿಸಿಕೊಂಡು ಧಾರ್ಮಿಕ ಕೆಲಸದ ಜೊತೆಗೆ ದೇವಳದ ಪೂರ್ಣ ಅಭಿವೃದ್ಧಿಗೆ ಎಲ್ಲರ ಸಹಕಾರ ಬೇಕೆಂದರು. ದಸರಾ ನಾಡಹಬ್ಬ ಸಮಿತಿ ಕೋಶಾಽಕಾರಿ ರಮೇಶ್ ಬಾಬು ಲೆಕ್ಕಪತ್ರ ಮಂಡಿಸಿದರು. ದಸರಾ ನಾಡಹಬ್ಬ ಸಮಿತಿ ಗೌರವಾಧ್ಯಕ್ಷ ಎನ್.ಕೆ.ಜಗನ್ನಿವಾಸ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಪರಿಚಯಿಸಿದರು. ದಸರಾ ನಾಡಹಬ್ಬ ಸಮಿತಿ ಅಧ್ಯಕ್ಷ ವಾಟೆಡ್ಕ ಕೃಷ್ಣ ಭಟ್ ಸ್ವಾಗತಿಸಿದರು. ನಿವೃತ್ತ ಉಪನ್ಯಾಸಕ ಪ್ರೊ| ದತ್ತಾತ್ರೇಯ ರಾವ್ ಪ್ರಾರ್ಥಿಸಿದರು.ಕಾರ್ಯದರ್ಶಿ ಎಮ್.ಟಿ.ಜಯರಾಮ ಭಟ್ ವಂದಿಸಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಿ.ಐತ್ತಪ್ಪ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ರಾಗಸಂಗಮ ಸಂಗೀತ ಸಭಾ ಸಹಯೋಗದೊಂದಿಗೆ ರಾಽಕಾ ನಾಯಕ್ ಅವರಿಂದ ಹಿಂದೂಸ್ತಾನಿ ಶೈಲಿಯ ಭಕ್ತಿಗೀತೆಗಳು ಮತ್ತು ಪವಿತ್ರಾ ರೂಪೇಶ್ ಅವರಿಂದ ಕರ್ನಾಟಕ ಶೈಲಿಯ ಭಕ್ತಿಗೀತೆಗಳ ಕಾರ್ಯಕ್ರಮ ನಡೆಯಿತು.