ಪುತ್ತೂರು: ಡಾ.ನಝೀರ್ ಅಹಮದ್ ಡಯಾಬಿಟಿಸ್ ಸೆಂಟರ್, ರೋಟರಿ ಕ್ಲಬ್ ಪುತ್ತೂರು ಮತ್ತು ರೋಟರ‍್ಯಾಕ್ಟ್ ಕ್ಲಬ್ ಪುತ್ತೂರು ಇವುಗಳ ಸಹಯೋಗದಲ್ಲಿ ಕಲ್ಲಾರೆ ಕೃಷ್ಣಾ ಆರ್ಕೇಡ್‌ನಲ್ಲಿನ ಡಾ.ನಝೀರ್ ಅಹಮದ್ ಡಯಾಬಿಟಿಸ್ ಸೆಂಟರ್‌ನಲ್ಲಿ ಸೆ.29 ರಂದು ಆಚರಿಸಲ್ಪಡುವ ವಿಶ್ವ ಹೃದಯ ದಿನಾಚರಣೆಯ ಪ್ರಯುಕ್ತ ‘ಹೃದಯದ ಆರೋಗ್ಯದಲ್ಲಿ ಆಹಾರದ ಪಾತ್ರ’ ಈ ಕುರಿತು ಮಾಹಿತಿ ಮತ್ತು ತಪಾಸಣಾ ಶಿಬಿರವು ಜರಗಲಿದೆ.
ಈ ಸಂದರ್ಭದಲ್ಲಿ ಆಗಮಿಸುವ ಫಲಾನುಭವಿಗಳಿಗೆ ಉಚಿತ ಬ್ಲಡ್ ಶುಗರ್(GRBS) ಮತ್ತು HBA1C ಟೆಸ್ಟ್, ಕೊಲೆಸ್ಟರಾಲ್ ಮತ್ತು ಇಸಿಜಿ ಟೆಸ್ಟ್ ಮೇಲೆ ಶೇ.5 ರಿಯಾಯಿತಿ ನೀಡಲಾಗುವುದು. ಆಗಮಿಸುವ ಫಲಾನುಭವಿಗಳು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಬೇಕು ಅಥವಾ 9481451929 ನಂಬರಿಗೆ ವಾಟ್ಸಫ್ ಮಾಡಬಹುದಾಗಿದೆ. ಶಿಬಿರವು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಲಿರುವುದು ಎಂದು ಡಾ.ನಝೀರ್ ಅಹಮದ್ ಡಯಾಬಿಟಿಸ್ ಸೆಂಟರ್‌ನ ವೈದ್ಯ ಡಾ.ನಝೀರ್ ಅಹಮದ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.