ಪುತ್ತೂರು: ಡೊನ್ ಬೊಸ್ಕೊ ಕ್ಲಬ್ ಪುತ್ತೂರು ಮತ್ತು ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹಾಗೂ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇವುಗಳ ಸಹಯೋಗದಲ್ಲಿ ಫಾದರ್ ಪತ್ರಾವೋ ಆಸ್ಪತ್ರೆಯಲ್ಲಿ ಮಲ್ಟಿ ಸ್ಪೆಶಾಲಿಟಿ ಆರೋಗ್ಯ ತಪಾಸಣಾ ಶಿಬಿರವು ಅ.2 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜರಗಲಿದೆ.
ಈ ಶಿಬಿರದಲ್ಲಿ ಮಂಗಳೂರು ಮತ್ತು ಪುತ್ತೂರಿನ ಪ್ರಖ್ಯಾತ ವೈದ್ಯರುಗಳಾದ ಡಾ.ಸುದೀಪ್(ಎಂಡೋಕ್ರೈನೋಲಜಿಸ್ಟ್), ಡಾ.ಪ್ರದೀಪ್(ಹೃದ್ರೋಗ ತಜ್ಞರು), ಡಾ.ನಝೀರ್ ಅಹಮದ್(ವೈದ್ಯಕೀಯ ಹಾಗೂ ಮಧುಮೇಹ ತಜ್ಞರು), ಡಾ.ಅಮಿತ್(ಮೂತ್ರಪಿಂಡ ತಜ್ಞರು), ಡಾ.ಪ್ರೀತಂ(ಮಕ್ಕಳ ತಜ್ಞರು), ಡಾ.ಡೋನ್ ಗ್ರೆಗೊರಿ ಮಸ್ಕರೇನ್ಹಸ್(ಶಾಸಕೋಶ ತಜ್ಞರು), ಡಾ.ಜ್ಯೋಸ್ನಾ(ಪ್ರಸೂತಿ ತಜ್ಞರು), ಡಾ.ಫ್ಲೋರಿನ್(ಪ್ರಸೂತಿ ತಜ್ಞರು), ಡಾ. ಜ್ವಾನ (ಶಸ್ತ್ರ ಚಿಕಿತ್ಸಾ ತಜ್ಞರು )ರವರುಗಳು ಆರೋಗ್ಯ ತಪಾಸಣೆ ಶಿಬಿರವನ್ನು ನಡೆಸಿಕೊಡಲಿದ್ದಾರೆ.
ನೋಂದಾಣಿಕೆ, ಸಮಾಲೋಚನೆ, ಇಸಿಜಿ, ಎಕ್ಸ್-ರೇ, ಲಂಗ್ ಫಂಕ್ಷನ್ ಟೆಸ್ಟ್(PFT) ಉಚಿತ ಮತ್ತು CBC, ESR, CRP, PPBS, FBS, RFT, ಯೂರಿನ್ ರುಟೀನ್ ರಕ್ತ ಪರೀಕ್ಷೆಯನ್ನು ಮಾಡಬಹುದು.IGE, HBA1c, TFT, FT4, LFT, ಎಲೆಕ್ಟ್ರೋಲೈಟ್ಸ್, LPT, TRPO, ಕ್ಯಾಲ್ಸಿಯಂ ರಕ್ತಪರೀಕ್ಷೆ ಮೇಲೆ ಶೇ.50 ರಿಯಾಯಿತಿ ಲಭ್ಯವಿದೆ ಹಾಗೂ ಮೆಡಿಸಿನ್ ಮೇಲೆ ಶೇ.10 ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.