ಬಡಗನ್ನೂರು: ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ಪಡುಮಲೆ, ಪಡುವನ್ನೂರು ಇದರ ವತಿಯಿಂದ ಶ್ರೀಕೋಟಿ-ಚೆನ್ನಯರ ಜನ್ಮಸ್ಥಾನ ಮತ್ತು ಮೂಲಸ್ಥಾನದಲ್ಲಿ ನವರಾತ್ರಿಯ ಪುಣ್ಯದಿನ ಲಲಿತಾಪಂಚಮಿಯ ಪ್ರಯುಕ್ತ ಅವಳಿವೀರರಾದ ಕೋಟಿಚೆನ್ನಯರ ಆರಾಧ್ಯ ದೇವರು ನಾಗ ಬೆರ್ಮರಿಗೆ ವಿಶೇಷ ಪೂಜೆ ಹಾಗೂ ದೇವಿ ಸ್ವರೂಪಿಣಿ ತಾಯಿ ದೇಯಿ ಬೈದೆದಿಯವರಿಗೆ ದೀಪೋತ್ಸವ ಕಾರ್ಯಕ್ರಮ ಸೆ.30ರಂದು ಜರುಗಿತು.
ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ನವರಾತ್ರಿ ಉತ್ಸವದ ಈ ಸಂದರ್ಭದಲ್ಲಿ ದೇವಿ ಸ್ವರೂಪಿಣಿ ತಾಯಿ ದೇಯಿ ಬೈದೆದಿ ಹಾಗೂ ಅವಳಿ ಅವಳಿವೀರರಾದ ಕೋಟಿಚೆನ್ನಯರ ಆರಾಧ್ಯ ದೇವರು ನಾಗ ಬೆರ್ಮರು ಮತ್ತು ನಾಗದೇವರು ಭಕ್ತರ ಸಕಾಲ ದೋಷ ಪರಿಹರಿಸಿ ಇಷ್ಟಾರ್ಥ ಪೂರೈಸುವಂತಾಗಲಿ ಎಂದು ಹೇಳಿ ನವರಾತ್ರಿ ಹಬ್ಬದ ಶುಭಾಶಯ ವ್ಯಕ್ತಪಡಿಸಿದರು. ಬಳಿಕ ಶ್ರೀನಾಗ ದೇವರಿಗೆ ತಂಬಿಲ ಸೇವೆ, ನಾಗ ಬೆರ್ಮೆರಿಗೆ ವಿಶೇಷ ಪೂಜೆ ನಡೆಯಿತು. ಬಳಿಕ ದೇವಿ ಸ್ವರೂಪಿಣಿ ತಾಯಿ ದೇಯಿ ಬೈದೆದಿಗೆ ದೀಪೋತ್ಸವ ನಡೆದು ಬಳಿಕ ಮಹಾ ಮಗಳಾರತಿ, ಪ್ರಸಾದ ವಿತರಣೆ ನಡೆಯಿತು. ಸಮಿತಿ ಸದಸ್ಯರು, ಊರ ಪರವೂರ ಗಣ್ಯರು, ಹಾಗೂ ಊರ ಭಕ್ತಾಧಿಗಳು ಭಾಗವಹಿಸಿದರು.