ವಿಟ್ಲ: ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಗ್ರಾಮದ ಮಾಣಿ ಮೈಸೂರು ಹೆದ್ದಾರಿಯ ಕೊಡಾಜೆ ಗಣೇಶ ನಗರದ ನಿಧಾ ಆರ್ಕೆಡ್ ನಲ್ಲಿ ಎಲೆಕ್ಟ್ರಾನಿಕ್ಸ್, ಫರ್ನೀಚರ್ಸ್ ಮತ್ತು ಕಿಚನ್ ವೇರ್ ಗಳ ಮಳಿಗೆ ಸಾರ ಅ.2ರಂದು ಬೆಳಗ್ಗೆ ಶುಭಾರಂಭಗೊಂಡಿತು.
ಸಂಸ್ಥೆಯನ್ನು ಇರ್ಷಾದ್ ದಾರಿಮಿ ಮಿತ್ತಬೈಲು ಉದ್ಘಾಟಿಸಿ ದುವಾ ನೆರವೇರಿಸಿದರು.
ಮಾಣಿ ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆರವರು ಮಾತನಾಡಿ ನವರಾತ್ರಿಯ ಶುಭದಿನದಲ್ಲಿ ಸಂಸ್ಥೆ ಶುಭಾರಂಭಗೊಂಡಿರುವುದು ಸಂತಸದ ವಿಚಾರ. ಬೆಳೆಯುತ್ತಿರುವ ಕೊಡಾಜೆಗೆ ಇಂತಹ ಸಂಸ್ಥೆಯ ಅಗತ್ಯವಿದೆ. ದೊಡ್ಡ ದೊಡ್ಡ ಪೇಟೆ ಪಟ್ಟಣದಲ್ಲಿ ದೊರೆಯುವ ಬೆಲೆಗೆ ಈ ಸಂಸ್ಥೆಯಲ್ಲಿ ಸಾಮಾಗ್ರಿಗಳು ದೊರೆಯುತ್ತಿರುವುದು ಅಭಿನಂದನೀಯ ಎಂದು ಹೇಳಿ ಸಂಸ್ಥೆಗೆ ಶುಭಹಾರೈಸಿದರು.
ಕೊಡಾಜೆ ಮಸೀದಿಯ ಖತೀಬರಾದ ಅಬ್ದುಲ್ ಅಝೀಜ್ ದಾರಿಮಿರವರು ಮಾತನಾಡಿ ನಾವು ಕತ್ತಲೆಯಿಂದ ಬೆಳಕಿನಡೆಗೆ ಬಂದರೆ ಯಾವುದೇ ಕೆಲಸ ಯಶಸ್ಸಾಗಲು ಸಾಧ್ಯ. ಎಲ್ಲರೂ ಒಂದೇ ಎನ್ನುವ ಭಾವದಲ್ಲಿ ನಾವು ಮುಂದುವರೆದರೆ ಯಾವುದೇ ಸಂಸ್ಥೆ ಅಭಿವೃದ್ಧಿಹೊಂದಲು ಸಾಧ್ಯ ಎಂದು ಹೇಳಿ ಶುಭಹಾರೈಸಿದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ,ಪ್ರಪುಲ್ಲ ರೈ ಮಾಣಿ, ಅಬ್ದುಲ್ ರಝಾಕ್ ಹಾಜಿ ಮಲೇಶಿಯಾ, ಪಾಟ್ರಕೋಡಿ ಮಸೀದಿಯ ಮಾಜಿ ಖತೀಬರಾದ ಶರೀಫ್ ಅಝಹರಿ, ಎಪಿಯಂಸಿಯ ರೋಯಲ್ ಸುಪಾರಿಯ ಮಾಲಕ ಅಬ್ದುಲ್ ರಹಿಮಾನ್ ಪುತ್ತೂರು, ನ್ಯೂ ಸುಲ್ತಾನ್ ಬೀಡಿ ಮಾಲಕ ಉಮ್ಮಾರ್ ಫಾರುಕ್ ಕೊಡಾಜೆ, ನಿವೃತ್ತ ಶಿಕ್ಷಕ ವಿಶ್ವನಾಥ, ವಿನ್ಸೆಂಟ್ ಲಸ್ರಾದೊ, ಕೊಡಾಜೆ ನೌಫಲ ಟಿಂಬರ್ ಮಾಲಕರಾದ ಯೂಸುಫ್ ಹಾಜಿ, ಅಶ್ರಫ್ ಹಾಜಿ, ನೆಟ್ಲ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸಚ್ಚಿದಾನಂದ, ಕೊಡಾಜೆ ಜುಮಾ ಮಸೀದಿಯ ಅಧ್ಯಕ್ಷರಾದ ಇಬ್ರಾಹಿಂ ಇಂಜಿನಿಯರ್, ರಾಜ್ ಕಮಾಲ್ ಕನ್ಸಸ್ಟ್ರೆಕ್ಷನ್ ಮಾಲಕ ಉಮ್ಮಾರ್ ಹಾಜಿ ಉಪಸ್ಥಿತರಿದ್ದರು.