ಪುತ್ತೂರು: ನವರಾತ್ರಿ ಉತ್ಸವದ ಅಂಗವಾಗಿ ರೈಲು ನಿಲ್ದಾಣದ ಬಳಿಯಿರುವ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷವಾಗಿ ಅ.1ರಂದು ದೇವರಿಗೆ ಹೊಸ ಅಕ್ಕಿ ನೈವೇದ್ಯ ಸಮರ್ಪಣೆ ನಡೆಯಿತು.
ಬೆಳಿಗ್ಗೆ ತೆನೆ ತೆಗೆಯುವುದರ ಮೂಲಕ ತೆನೆ ಹಬ್ಬ(ಕುರಲ್ ಪರ್ಬ) ಹಾಲೆರೆದು, ಪೂಜೆಗೈದು, ಹೊಸ ಅಕ್ಕಿ ನೈವೇದ್ಯವನ್ನು ಅಮ್ಮನವರಿಗೆ ಸಮರ್ಪಿಸಲಾಯಿತು. ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಸೆ.29ರಂದು ಒಡಿಯೂರು ಶ್ರೀ ವಜ್ರಮಾತ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ, ನಂತರ ಮಹಾಲಕ್ಷ್ಮೀ ದೇವರಿಗೆ ವಿಶೇಷ ಮಹಾ ಪೂಜೆ ಹಾಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.