ನೆಲ್ಯಾಡಿ: ಶಾರ್ಟ್ ಸರ್ಕ್ಯೂಟ್ನಿಂದ ಸ್ವಿಫ್ಟ್ ಕಾರೊಂದು ಬೆಂಕಿಗಾಹುತಿಯಾಗಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗೋಳಿತ್ತೊಟ್ಟು ಎಂಬಲ್ಲಿ ಅ.1ರಂದು ರಾತ್ರಿ ನಡೆದಿದೆ.
ಬೆಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಸ್ವಿಫ್ಟ್ ಕಾರಿನಲ್ಲಿ ಗೋಳಿತ್ತೊಟ್ಟು ಶಾಲೆಯ ಮುಂಭಾಗ ಹೊಗೆ ಕಾಣಿಸಿಕೊಂಡಿದ್ದು ಅಪಾಯದ ಮುನ್ಸೂಚನೆ ಅರಿತ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪುತ್ತೂರಿನ ಗೋಕುಲದಾಸ್ ಹಾಗೂ ಮೆಲ್ವಿನ್ ಎಂಬವರು ಕಾರು ನಿಲ್ಲಿಸಿ ಹೊರಬಂದು ಅಪಾಯದಿಂದ ಪಾರಾಗಿದ್ದಾರೆ. ಕಾರು ಸಂಪೂರ್ಣ ಹೊತ್ತಿ ಉರಿದಿರುವುದಾಗಿ ವರದಿಯಾಗಿದೆ.