‘ಲಂಚ, ಭ್ರಷ್ಟಾಚಾರ ಮುಕ್ತ’ ದೇಶಕ್ಕೆ ಮಾದರಿ ಒಳಮೊಗ್ರು ಪಂ. ನಿರ್ಣಯ, ಪುತ್ತೂರು ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯಾಧ್ಯಕ್ಷರಿಂದ ಆಂದೋಲನಕ್ಕೆ ಬೆಂಬಲ- ಪ್ರತೀ ಸಭೆ ಸಮಾರಂಭದಲ್ಲಿ ಅದು ಮೊಳಗಿದರೆ ಶಾಶ್ವತ ಪರಿಣಾಮ

0

ಡಾ. ಯು.ಪಿ. ಶಿವಾನಂದ
ಸಂಪಾದಕರು

ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮ ಪಂಚಾಯತ್ ದೇಶಕ್ಕೆ ಮಾದರಿ ಎನಿಸುವಂತೆ ತಮ್ಮ ಪಂಚಾಯತ್‌ನಲ್ಲಿ ಲಂಚ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿ ಘೋಷಿಸಿದಲ್ಲದೆ ಅದನ್ನು ತಮ್ಮ ಗ್ರಾಮ ಪಂಚಾಯತ್‌ನ ನಿರ್ಣಯ ಕ ಪುಸ್ತಕದಲ್ಲಿ ಮುದ್ರಿಸಿ ಗ್ರಾಮದ ಜನರಿಗೆ ಹಂಚಿದ್ದಾರೆ. ಈ ರೀತಿಯ ಕೆಲಸ ಎಲ್ಲಾ ಪಂಚಾಯತ್‌ಗಳಲ್ಲಿ ಆದರೆ ಗ್ರಾಮ ಸ್ವರಾಜ್ಯವಾಗುವುದು ಖಂಡಿತ. ಅದಕ್ಕೆ ‘ಸುದ್ದಿ ಜನಾಂದೋಲನ’ ಬೆಂಬಲ ನೀಡಲಿದೆ. ಪುತ್ತೂರು ಸಾಹಿತ್ಯ ಸಮ್ಮೇಳನದ ಉದ್ಘಾಟನೆಗೆ ಆಗಮಿಸಿದ್ದ ರಾಜ್ಯ ಕ.ಸಾ.ಪ ಅಧ್ಯಕ್ಷ ಮಹೇಶ್ ಜೋಶಿಯವರು, ಸಮ್ಮೇಳನಾಧ್ಯಕ್ಷ ಡಾ. ಶ್ರೀಧರ್ ಎಚ್.ಜಿ, ತಾಲೂಕು ಅಧ್ಯಕ್ಷ ಉಮೇಶ್ ನಾಯಕ್ ಅವರುಗಳು ಲಂಚ, ಭ್ರಷ್ಟಾಚಾರದ ವಿರುದ್ಧದ ಸುದ್ದಿ ಜನಾಂದೋಲನ ಫಲಕವನ್ನು ಅನಾವರಣ ಗೊಳಿಸಿ, ಬೆಂಬಲ ಸೂಚಿಸಿದ್ದಾರೆ. ಮೈಸೂರು ರೋಟರಿ ಡಿಸ್ಟ್ರಿಕ್ಟ್ ಸೆಕ್ರೆಟೇರಿಯಟ್, ಅಸಿಸ್ಟೆಂಟ್ ಗವರ್ನರ‍್ಸ್ ಸಭೆಯಲ್ಲಿ ಲಂಚ, ಭ್ರಷ್ಟಾಚಾರ ವಿರುದ್ಧದ ‘ಸುದ್ದಿ’ ಅಭಿಯಾನದ ಮಾಹಿತಿ ನೀಡಲಾಗಿದೆ. ಅದಕ್ಕೆ ಅಲ್ಲಿ ಮೆಚ್ಚುಗೆ ದೊರಕಿ ಅದನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ. ರಾಜ್ಯದಲ್ಲೆಲ್ಲಾ ಲಂಚ, ಭ್ರಷ್ಟಾಚಾರದ ವಿರುದ್ಧದ ಕಹಳೆ ಮೊಳಗುತ್ತಿದೆ. ಅದು ರಾಜಕೀಯವಾಗಿ ಎಲ್ಲಾ ಪಕ್ಷಗಳ ಚರ್ಚೆಯ ವಿಷಯವಾಗಿ ಪರಿಣಮಿಸಿದೆ. ಇದು ಪ್ರತೀ ಸಭೆಯಲ್ಲಿ ನಡೆದರೆ ಚುನಾವಣೆ ವಿಷಯವಾಗಿ ಜನಾಂದೋಲನವಾಗಿ ಮಾರ್ಪಟ್ಟು ಲಂಚ, ಭ್ರಷ್ಟಾಚಾರಕ್ಕೆ ಶಾಶ್ವತ ಮುಕ್ತಿ ದೊರಕಬಹುದಲ್ಲವೇ? ಈ ವಿಚಾರವನ್ನು ಗ್ರಾಮಾಂತರ ಪ್ರದೇಶದಲ್ಲಿ ಪರಿಣಾಮಕಾರಿಯಾಗಿಸಲು ಕೃಷಿಕರಿಗೆ ಸ್ವಾತಂತ್ರ್ಯ ಎಂಬ ಜನಾಂದೋಲನವನ್ನು ಸುದ್ದಿ ಪ್ರಾರಂಭಿಸಿದೆ. ಕೃಷಿಕರಿಗೆ ಮನೆ ಬಾಗಿಲಿಗೆ ಮಾಹಿತಿ ಮತ್ತು ಸೇವೆ, ಇಲಾಖೆಗಳ ಸೌಲಭ್ಯಗಳ ಒದಗಿಸುವಿಕೆಯ ಪ್ರಯತ್ನ, ತಜ್ಞರಿಂದ ಮಾಹಿತಿ ಮಾತ್ರವಲ್ಲ ಕೃಷಿಕರ ಎಲ್ಲಾ ವಸ್ತುಗಳಿಗೆ ಉತ್ತಮ ಮಾರಾಟ ಮತ್ತು ಖರೀದಿ ಬಗ್ಗೆ ಕಾರ್ಯಕ್ರಮಗಳನ್ನು ಎಲ್ಲಾ ಸಂಘ ಸಂಸ್ಥೆಗಳ ನೆರವಿನಿಂದ ಹಮ್ಮಿಕೊಳ್ಳಲಿದ್ದೇವೆ. ಮನೆಗೊಂದು ಜೇನು ಪೆಟ್ಟಿಗೆ, ಮನೆಗೆರಡು ಹಣ್ಣಿನ ಗಿಡ, ಮನೆ ಮನೆಯಲ್ಲಿ ಸಾವಯವ ತರಕಾರಿ ಬಗ್ಗೆ ಪ್ರಾರಂಭ ಹಂತದಲ್ಲಿ ಪ್ರಚಾರ ಮತ್ತು ತರಬೇತಿ ನೀಡಲಾಗುವುದು. ಜನರು ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿ.

 

LEAVE A REPLY

Please enter your comment!
Please enter your name here