ಫರ್ನಿಚರ್‍ಸ್‌ಗೆ ಹೊಸ ಲುಕ್ ಆಶೀರ್ವಾದ್ ಫರ್ನಿಚರ್

0

ಪುತ್ತೂರು: ಮನೆಯೇ ಆಗಲಿ, ಕಚೇರಿಯೇ ಆಗಲಿ ಫರ್ನಿಚರ್ ಇಲ್ಲದೇ ಪೂರ್ಣವಾಗದು. ಕಾಲಕ್ಕೆ ತಕ್ಕಂತೆ ಬದಲಾಗುವ ವೈವಿಧ್ಯಮಯ ಸೌಂದರ್ಯ ಕ್ಷೇತ್ರದಲ್ಲಿ ಫರ್ನಿಚರ್‌ಗಳನ್ನು ಕಚೇರಿ, ಮನೆಯ ಅಭಿರುಚಿಗೆ ತಕ್ಕಂತೆ ಹೊಂದಿಸಿಕೊಳ್ಳುವುದೇ ಸೊಬಗು.

ಕಳೆದ 30 ವರ್ಷಗಳಿಂದ ಪುತ್ತೂರಿನ ಜನತೆಗೆ ಗುಣಮಟ್ಟದ ಫನಿರ್ಚರ್ ಒದಗಿಸಿ ಗ್ರಾಹಕರ ಮನಗೆದ್ದ ಆಶೀರ್ವಾದ್ ಫರ್ನಿಚರ್ ಪುತ್ತೂರಿನ ಫರ್ನಿಚರ್‍ಸ್ ಮಳಿಗೆಗಳ ಪೈಕಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಪುತ್ತೂರು – ದರ್ಬೆ ಮುಖ್ಯರಸ್ತೆಯಲ್ಲಿದ್ದ ಶ್ರೀ ರಾಮನಾಥ್ ಫರ್ನಿಚರ್ ಇದರ ಸಹಸಂಸ್ಥೆ. ಇದೀಗ ಹೋಟೆಲ್ ಸಂತೃಪ್ತಿಯ ಹಿಂಭಾಗದಲ್ಲಿ ಹೊಸ ಹಾಗೂ ವಿಶಾಲವಾದ ಮಳಿಗೆಯನ್ನು ತೆರೆಯಲಾಗಿದೆ. ಮಳಿಗೆ ಆರಂಭವಾಗಿ ಕೆಲವೇ ಸಮಯದಲ್ಲಿ ಗ್ರಾಹಕರ ಮೆಚ್ಚುಗೆ ಗಳಿಸಿರುವುದು ಸಂಸ್ಥೆಯ ಹೆಚ್ಚುಗಾರಿಕೆ.
ಮರ, ಸ್ಟೀಲ್, ಪ್ಲಾಸ್ಟಿಕ್‌ಗಳಲ್ಲಿ ವಿವಿಧ ರೀತಿಯ ಫರ್ನಿಚರ್‌ಗಳು ಇಲ್ಲಿ ಲಭ್ಯವಿದ್ದು, ದೇವರ ಮಂಟಪ, ಕುಶನ್ ಸೋಫಾ, ಕಬೋರ್ಡ್ ಸೇರಿದಂತೆ ಎಲ್ಲಾ ರೀತಿಯ ಪೀಠೋಪಕರಣಗಳು ಗ್ರಾಹಕರನ್ನು ಸೆಳೆಯುತ್ತಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಆಧುನಿಕ ವಿನ್ಯಾಸದ ಪೀಠೋಪಕರಣಗಳು ವಿಶಾಲವಾದ ಆಶೀರ್ವಾದ್ ಫರ್ನಿಚರ್ ಮಳಿಗೆಯಲ್ಲಿ ಶೋಭಿಸುತ್ತಿದೆ.


ಖಚಿತ ಉಡುಗೊರೆ:

ಆಶೀರ್ವಾದ್ ಫರ್ನಿಚರ್ ಈಗಾಗಲೇ ಕಾರ್ಯಾರಂಭ ಮಾಡಿದೆ. ಹೊಸ ಮಳಿಗೆಯನ್ನು ಗ್ರಾಹಕರು ಮೆಚ್ಚಿಕೊಂಡಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದ್ದರಿಂದ ಗ್ರಾಹಕರಿಗೆ ಉಡುಗೊರೆಗಳನ್ನು ನೀಡಲು ತೀರ್ಮಾನಿಸಲಾಗಿದೆ. ಶುಭಾರಂಭ ಹಾಗೂ ಹಬ್ಬಗಳ ಕೊಡುಗೆಯಾಗಿ ಗ್ರಾಹಕರ ಖರೀದಿಯ ಮೇಲೆ ಶೇ. 10ರಿಂದ 30ರವರೆಗೆ ರಿಯಾಯಿತಿ ನೀಡಲಾಗಿದೆ.


ವಿಶಾಲವಾದ ಪಾರ್ಕಿಂಗ್:
ಪುತ್ತೂರಿನಲ್ಲಿ ವಾಹನ ಪಾರ್ಕಿಂಗ್ ದೊಡ್ಡ ಸಮಸ್ಯೆ. ಆದರೆ ಆಶೀರ್ವಾದ್ ಫರ್ನಿಚರ್‌ನಲ್ಲಿ ಈ ಸಮಸ್ಯೆ ಇಲ್ಲ. ಸಂಸ್ಥೆಯ ಮುಂಭಾಗ ವಿಶಾಲವಾದ ಜಾಗವಿದ್ದು, ವಾಹನ ಪಾರ್ಕಿಂಗ್‌ಗೆ ಸಾಕಷ್ಟು ಸ್ಥಳಾವಕಾಶವಿದೆ. ವಿಶಾಲವಾದ ವಾಹನ ಪಾರ್ಕಿಂಗ್ ಮಾಡಿರುವುದೇ ಆಶೀರ್ವಾದ್ ಫರ್ನಿಚರ್‌ನ ವಿಶೇಷತೆ.

 

ಸ್ಲೀಪ್ ವೆಲ್ ಬೆಡ್ ಖರೀದಿಗೆ ಗಿಫ್ಟ್

ಆಶೀವಾರ್ದ್ ಫರ್ನಿಚರ್ ನಲ್ಲಿ ಸ್ಲೀಪ್ ವೆಲ್ ಕಂಪೆನಿಯ ಬೆಡ್ ಲಭ್ಯವಿದ್ದು, ಇದರ ಖರೀದಿಯ ಮೇಲೆ ವಿಶೇಷ ಕೊಡುಗೆಯನ್ನು ನೀಡಲಾಗಿದೆ. ಸುಮಾರು ೨೧೦೦೦ ರೂ.ವರೆಗಿನ ಗಿಫ್ಟ್ ಗಳನ್ನು ಗ್ರಾಹಕರು ಗೆಲ್ಲುವ ಸದವಕಾಶ ಇಲ್ಲಿದೆ.

 

   

LEAVE A REPLY

Please enter your comment!
Please enter your name here