ಭಾರತೀಯ ವೈದ್ಯಕೀಯ ಸಂಘದ ಹಾಸನ ಜಿಲ್ಲಾಧ್ಯಕ್ಷರಾಗಿ ಕಂಬಳಬೆಟ್ಟು ವಿನ ಡಾ. ಅಬ್ದುಲ್ ಬಶೀರ್ ವಿ.ಕೆ. ಆಯ್ಕೆ

0

ವಿಟ್ಲ: 2022-23ನೇ ಸಾಲಿನ ಭಾರತೀಯ ವೈದ್ಯಕೀಯ ಸಂಘದ ಹಾಸನ ಜಿಲ್ಲಾಧ್ಯಕ್ಷರಾಗಿ ಜನಪ್ರಿಯ ಗ್ರೂಪ್ಸ್ ನ ಚೇರ್‌ಮ್ಯಾನ್ ಬಂಟ್ವಾಳ ತಾಲೂಕಿನ ಕಂಬಳಬೆಟ್ಟು ನಿವಾಸಿ ಡಾ.ಅಬ್ದುಲ್ ಬಶೀರ್ ವಿ ಕೆ ರವರು ಆಯ್ಕೆಯಾಗಿದ್ದಾರೆ.


ಹಾಸನ ಜಿಲ್ಲಾ ಖಾಸಗಿ ನರ್ಸಿಂಗ್ ಹೋಂಗಳ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ಸರ್ಕಾರದ ಸುವರ್ಣ ಅರೋಗ್ಯ ಟ್ರಸ್ಟ್ ನ ಸಲಹಾ ಸಮಿತಿಯ ಸದಸ್ಯರಾಗಿ, ಜನಪ್ರಿಯ ಫೌಂಡೇಶನ್ ಹಾಸನ ಅಧ್ಯಕ್ಷರಾಗಿ, ಜನಪ್ರಿಯ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾಗಿ, ಹಾಜಿ ಕೆ ಅಂಧುಞ (ಬದ್ರಿಯಾ) ಚಾರಿಟೇಬಲ್ ಟ್ರಸ್ಟ್ ಕಂಬಳಬೆಟ್ಟು ಇದರ ಅಧ್ಯಕ್ಷರಾಗಿ, ಹಲ್ಡಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ ಹಾಸನ ಇದರ ಉಪಾಧ್ಯಕ್ಷರಾಗಿ, ಹಸಿರು ಭೂಮಿ ಪ್ರತಿಷ್ಠಾನ ಹಾಸನ ಇದರ ಸಕ್ರಿಯ ಕಾರ್ಯಕರ್ತ ಸದಸ್ಯರಾಗಿ ಸೇವೆ ಸಲ್ಲಿಸಿರುವುದು ಮಾತ್ರವಲ್ಲದೆ ಇನ್ನೂ ಹಲವಾರು ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಇವರ ಸಾಮಾಜಿಕ ಸೇವೆಗಾಗಿ ಹಾಸನ ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಸ್ವಾತಂತ್ರ್ಯೋತ್ಸವ ಪ್ರಶಸ್ತಿ, ಹಾಸನ ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ. ವೈದ್ಯಕೀಯ ಸೇವೆಗಾಗಿ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸರ್ವೋತ್ತಮ ವೈದ್ಯ ರತ್ನ ಪ್ರಶಸ್ತಿ ಸಹಿತ ಊರು ಹಾಗೂ ಪರವೂರಿನಲ್ಲಿ ಹಲವಾರು ಪ್ರಶಸ್ತಿ, ಸನ್ಮಾನಗಳು ನಡೆದಿವೆ.
ವಿಶೇಷ ಸಾಧನೆ: ಹಾಸನದಲ್ಲಿ ಕೀಲು ಹಾಗೂ ಮೂಳೆ ತಜ್ಞರಾಗಿ ಜನಪ್ರಿಯರಾಗಿರುವ ಡಾ.ಅಬ್ದುಲ್ ಬಶೀರ್ ವಿ ಕೆ ರವರು, ಯಂತ್ರಕ್ಕೆ ಸಿಲುಕಿ ತೋಳಿನಿಂದ ಸಂಪೂರ್ಣವಾಗಿ ಬೇರ್ಪಟ್ಟ ಕೈಯನ್ನು ಒಂದು ಗಂಟೆಯ ಬಳಿಕ ತರಲಾಗಿತ್ತಾದರೂ ಅದನ್ನು ಜೋಡಿಸಿ ಸರಿಪಡಿಸಿದ ಹಾಗೂ ಹಾಸನ ಜಿಲ್ಲೆಯಲ್ಲೇ ಪ್ರಪ್ರಥಮವಾಗಿ ಮಂಡಿಯ ಸಂಪೂರ್ಣ ಬದಲಾವಣೆ ಶಸ್ತ್ರ ಚಿಕಿತ್ಸೆಯನ್ನು ಮಾಡಿದ ಕೀರ್ತಿ ಹೊಂದಿದ್ದಾರೆ.
ಜನಪ್ರಿಯ ಪೌಂಡೇಶನ್ ನ ಚೇರ್‌ಮೆನ್ ವೈದ್ಯಶ್ರೇಷ್ಠ ಡಾ. ಅಬ್ದುಲ್ ಬಷೀರ್ ವಿ.ಕೆ. ಜನಪ್ರಿಯ ಪೌಂಡೇಶನ್‌ನ ಚೇರ್‌ಮೆನ್ ಡಾ. ಅಬ್ದುಲ್ ಬಷೀರ್ ವಿ.ಕೆ. ರವರು ಹಾಸನದಲ್ಲಿ ತನ್ನದೇ ಆದ ಜನಪ್ರಿಯ ಪ್ಯಾರಾಮೆಡಿಕಲ್ ಮತ್ತು ನರ್ಸಿಂಗ್ ಕಾಲೇಜು ಕಟ್ಟಿ ವೈದ್ಯ ವೃತ್ತಿ ನಡೆಸಿಕೊಂಡು ಕರ್ನಾಟಕ ರಾಜ್ಯ ವೈದ್ಯಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡವರು. ಕೊರೋನಾ ಸಂಕಷ್ಟ ಕಾಲದಲ್ಲಿ ಇವರು ಆರೋಗ್ಯ ಸೇವೆ, ಆಶಾಕಾರ್ಯಕರ್ತೆಯರಿಗೆ ೨೫ ಲಕ್ಷ ರೂ. ನ ವಿಮೆ ಇತ್ಯಾದಿ ಕಾರ್ಯಗಳ ಮೂಲಕ ಜನಮೆಚ್ಚುಗೆಗೆ ಪಾತ್ರರಾದವರು.
ಬಳಿಕದ ದಿನಗಳಲ್ಲಿ ನಮ್ಮ ಊರಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎನ್ನುವ ದೃಷ್ಟಿಯಿಂದ ಕಂಬಳಬೆಟ್ಟುವಿನಲ್ಲಿ ಜನಪ್ರಿಯ ಸೆಂಟ್ರಲ್ ಸ್ಕೂಲ್ ಹಾಗೂ ಊರಿನಲ್ಲೊಂದು ಸಕಲ ಸೌಲಭ್ಯವನ್ನು ಹೊಂದಿರುವ ಸಭಾ ಭವನ ಬೇಕೆನ್ನುವ ನಿಟ್ಟಿನಲ್ಲಿ ನೇರಳಕಟ್ಟೆಯಲ್ಲಿ ಜನಪ್ರಿಯ ಗಾರ್ಡನ್ ಎನ್ನುವ ಸುಸಜ್ಜಿತ ಹಾಲ್ ಅನ್ನು ಹುಟ್ಟುಹಾಕಿದರು. ತಮ್ಮ ಊರಿನ ಜನರಿಗೆ ಸಹಕಾರಿಯಾಗಲೆನ್ನುವ ನಿಟ್ಟಿನಲ್ಲಿ ಮಂಗಳೂರಿನ ಪಡೀಲ್‌ನಲ್ಲಿ ಪ್ರಾರಂಭಿಸಲು ನಿರ್ಧರಿಸಿರುವ ಜನಪ್ರಿಯ ಆಸ್ಪತ್ರೆಯ ಕಟ್ಟಡದ ಕೆಲಸಗಳು ಭರದಿಂದ ಸಾಗುತ್ತಿದ್ದು, ಕೆಲವೇ ತಿಂಗಳಲ್ಲಿ ಲೊಕಾರ್ಪಣೆಗೊಳ್ಳಲಿದೆ.
ಡಾ.ಅಬ್ದುಲ್ ಬಶೀರ್ ವಿ.ಕೆ.ರವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಂಬಳಬೆಟ್ಟುವಿನ ದಿ| ಹಾಜಿ ಅಂದುಞ (ಬದ್ರಿಯಾ)ರವರ ಪುತ್ರರಾಗಿದ್ದು, ಪತ್ನಿ ಫಾತಿಮಾ ನಸ್ರಿನ್ ಬಶೀರ್ ಪುತ್ರರಾದ ಡಾ. ಶಾರುಖ್, ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಶಫಾಕ್ ಹಾಗೂ ಕಾಲೇಜಿನಲ್ಲಿ ಕಲಿಯುತ್ತಿರುವ ಶಾಮಿಕ್ ರವರೊಂದಿಗೆ ಹಾಸನದಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here