ಪಾಲ್ತಾಡಿ, ಪುಣ್ಚಪ್ಪಾಡಿ ಗ್ರಾಮವನ್ನು ಪುತ್ತೂರು ತಾಲೂಕಿನಲ್ಲೇ ಉಳಿಸುವಂತೆ ಒತ್ತಾಯಿಸಿ ಮನವಿ

0

ಪುತ್ತೂರು: ಪಾಲ್ತಾಡಿ ಮತ್ತು ಪುಣ್ಚಪ್ಪಾಡಿ ಗ್ರಾಮವನ್ನು ಪುತ್ತೂರು ತಾಲೂಕಿನಲ್ಲಿಯೇ ಉಳಿಸಿಕೊಳ್ಳುವಂತೆ ಆಗ್ರಹಿಸಿ ಸಹಾಯಕ ಆಯುಕ್ತರಿಗೆ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಗಿದೆ.

ಪುತ್ತೂರು ತಾಲೂಕು ವಿಭಾಗವಾಗಿ ಕಡಬ ತಾಲೂಕು ಪ್ರತ್ಯೇಕ ರಚನೆ ಆದಾಗ ಕಡಬಕ್ಕೆ ದೂರದಲ್ಲಿರುವ ಮತ್ತು ಪುತ್ತೂರಿಗೆ ಹತ್ತಿರ ಇರುವ ಪಾಲ್ತಾಡಿ ಮತ್ತು ಪುಣ್ಚಪ್ಪಾಡಿ ಗ್ರಾಮಗಳನ್ನು ಕಡಬಕ್ಕೆ ಸೇರ್ಪಡೆ ಮಾಡಲಾಗಿದ್ದು ಇದನ್ನು ಕೈಬಿಟ್ಟು ಪುತ್ತೂರು ತಾಲೂಕಿನಲ್ಲೇ ಈ ಗ್ರಾಮಗಳನ್ನು ಉಳಿಸಬೇಕು ಎಂದು ಒತ್ತಾಯಿಸಿ ಪಾಲ್ತಾಡಿ ಗ್ರಾಮ ಪುತ್ತೂರು ತಾಲೂಕು ಸೇರ್ಪಡೆ ಹೋರಾಟ ಸಮಿತಿಯಿಂದ ಸಹಾಯಕ ಕಮೀಷನರ್‌ಗೆ ಮನವಿ ಮಾಡಲಾಗಿದ್ದು ಪುತ್ತೂರಿಗೆ 18 ಕಿ.ಮೀ. ಕಡಬಕ್ಕೆ 60 ಕಿ.ಮೀ. ದೂರ ಇರುವ ಅಂತರವನ್ನು ಗಮನಿಸಿ ಬಡವರಿಗೆ ದುಂದು ವೆಚ್ಚ ಮತ್ತು ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಲು ಪಾಲ್ತಾಡಿ ಮತ್ತು ಪುಣ್ಚಪ್ಪಾಡಿ ಗ್ರಾಮವನ್ನು ಪುತ್ತೂರು ತಾಲೂಕಿನಲ್ಲೇ ಉಳಿಸುವಂತೆ ಒತ್ತಾಯಿಸಲಾಗಿದೆ. ಪಾಲ್ತಾಡಿ ಗ್ರಾಮ ಪುತ್ತೂರು ತಾಲೂಕು ಸೇರ್ಪಡೆ ಹೋರಾಟ ಸಮಿತಿ ಅಧ್ಯಕ್ಷ ವೆಂಕಪ್ಪ ಗೌಡ, ಕರ್ನಾಟಕ ಋಣಮುಕ್ತ ಹೋರಾಟ ಸಮಿತಿ ಅಧ್ಯಕ್ಷರಾದ ನ್ಯಾಯವಾದಿ ಬಿ.ಎಂ.ಭಟ್, ಹೋರಾಟ ಸಮಿತಿ ಕಾರ್ಯದರ್ಶಿ ಯಶೋದಾ ಹಾಗು ಸಮಿತಿ ಮುಖಂಡರುಗಳಾದ ಪುಷ್ಪ, ರೇಖಲತಾ, ಬಾಬು, ಉದಯ, ದಲಿತ ಹಕ್ಕು ಹೋರಾಟ ಸಮಿತಿ ಮುಖಂಡೆ ಈಶ್ವರಿ ಮನವಿ ನೀಡುವ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here