ಖಾಯಿಲೆ ಬರದ ಹಾಗೇ ಜಾಗೃತವಹಿಸುವುದೇ ಉತ್ತಮ – ಡಾ| ವಿದ್ಯಾ
ಕಾಣಿಯೂರು: ಖಾಯಿಲೆಗಳು ಇಲ್ಲ ಎಂದ ಮಾತ್ರಕ್ಕೆ ಆರೋಗ್ಯವಂತ ವ್ಯಕ್ತಿ ಎನ್ನಲುಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಆರೋಗ್ಯವಂತವಾಗಿ ಇರಬೇಕಾದರೆ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕವಾಗಿಯೂ ಚೆನ್ನಾಗಿರಬೇಕು. ಖಾಯಿಲೆಗಳು ಬಂದು ಗುಣ ಪಡಿಸುವುದಕ್ಕಿಂತ ಖಾಯಿಲೆ ಬರದ ಹಾಗೇ ಜಾಗೃತವಹಿಸುವುದೇ ಇಂತಹ ಶಿಬಿರದ ಮೂಲ ಉದ್ದೇಶ. ಈ ನಿಟ್ಟಿನಲ್ಲಿ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸವಣೂರು ಬಿಎಎಂಎಸ್ ಡಾ| ವಿದ್ಯಾ ಹೇಳಿದರು.
ಅವರು ಕುದ್ಮಾರು ಬರೆಪ್ಪಾಡಿ ಪಂಚಲಿಂಗೇಶ್ವರ ಮಹಿಳಾ ಮಂಡಲದ ವತಿಯಿಂದ ಕೆ.ಎಂ.ಸಿ ಆಸ್ಪತ್ರೆ ಆತ್ತಾವರ ಮಂಗಳೂರು ಇವರಿಂದ ಕುದ್ಮಾರು ಸ.ಉ.ಹಿ.ಪ್ರಾ.ಶಾಲೆಯಲ್ಲಿ ಅ 6 ರಂದು ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಬೆಳಂದೂರು ಗ್ರಾ.ಪಂ.ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ಮಾತನಾಡಿ, ಆರೋಗ್ಯಯುತ ಸಮಾಜದ ನಿರ್ಮಾಣಕ್ಕೆ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಯುವ ವೈದ್ಯಕೀಯ ಶಿಬಿರಗಳು ಸಹಕಾರಿಯಾಗಿದೆ. ಗ್ರಾಮೀಣ ಭಾಗದ ಜನರ ಆರೋಗ್ಯಕ್ಕೆ ಆಧ್ಯತೆ ನೀಡಿ ಶಿಬಿರ ಆಯೋಜಿಸಿರುವುದಕ್ಕೆ ಮಹಿಳಾ ಮಂಡಲಕ್ಕೆ ಕೃತಜ್ಞತೆ ಸಲ್ಲಿಸಿದರು. ಬೆಳಂದೂರು ಗ್ರಾ.ಪಂ. ಪ್ರಭಾರ ಅಭಿವೃದ್ಧಿ ಅಧಿಕಾರಿ ನಾರಾಯಣ್, ಕುದ್ಮಾರು ಸ.ಉ.ಹಿ.ಪ್ರಾ.ಶಾಲಾ ಮುಖ್ಯಗುರು ಕುಶಾಲಪ್ಪ ಗೌಡ, ಮಂಗಳೂರು ಆತ್ತಾವರ ಕೆ.ಎಂ.ಸಿ ಆಸ್ಪತ್ರೆಯ ವೈದ್ಯರಾದ ಡಾ ವೈಭವ್, ಡಾ ಮ್ಯಾಥ್ಯೂ, ಡಾ ಆದರ್ಶ್, ಡಾ ಕೃತಿಕಾ ಕಾಮತ್ ಉಪಸ್ಥಿತರಿದ್ದರು. ಬರೆಪ್ಪಾಡಿ ಪಂಚಲಿಂಗೇಶ್ವರ ಮಹಿಳಾ ಮಂಡಲದ ಅಧ್ಯಕ್ಷ್ಯೆ ಶುಭ. ಆರ್. ನೋಂಡ ಪ್ರಾಸ್ತಾವಿಕ ಮಾತನಾಡಿದರು. ಮಹಿಳಾ ಮಂಡಲದ ಕಾರ್ಯದರ್ಶಿ ಜ್ಞಾನೇಶ್ವರಿ ಬರೆಪ್ಪಾಡಿ, ಸದಸ್ಯರಾದ ಸರಸ್ವತಿ, ಯಶೋದ, ಸಹನಾ, ತಾರಾ ಅನ್ಯಾಡಿ, ಭವಾನಿ, ಉಮ್ಮಕ್ಕ, ಉಮೇಶ್ವರಿ ಅಗಳಿ ಅತಿಥಿಗಳಿಗೆ ತಾಂಬೂಲ ನೀಡಿ ಗೌರವಿಸಿದರು.ನವ್ಯ ಅನ್ಯಾಡಿ, ಹರ್ಷಿತಾ ಹೊಸವೊಕ್ಲು ಅತಿಥಿಗಳಾಗಿ ಭಾಗವಹಿಸಿದರು. ಪವಿತ್ರಾ ನೂಜಿ, ಗೌರಿ ಕಾರ್ಲಾಡಿ, ಉಮೇಶ್ವರಿ ಅಗಳಿ ಪ್ರಾರ್ಥಿಸಿದರು. ಮಹಿಳಾ ಮಂಡಲದ ಗೌರವಾಧ್ಯಕ್ಷರು, ಕಾಣಿಯೂರು ಶಾಲಾ ದೈಹಿಕ ಶಿಕ್ಷಕಿ ರೇವತಿ ವಾಲ್ತಾಜೆ ಕುದ್ಮಾರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಮಂಡಲ ಸದಸ್ಯೆ, ತಾ.ಪಂ. ಮಾಜಿ ಉಪಾಧ್ಯಕ್ಷೆ ಲಲಿತಾ ಈಶ್ವರ ವಂದಿಸಿದರು.
ಕುದ್ಮಾರು ಬರೆಪ್ಪಾಡಿ ಪಂಚಲಿಂಗೇಶ್ವರ ಮಹಿಳಾ ಮಂಡಲದ ವತಿಯಿಂದ ಕೆ.ಎಂ.ಸಿ ಆಸ್ಪತ್ರೆ ಆತ್ತಾವರ ಮಂಗಳೂರು ಇವರಿಂದ ಕುದ್ಮಾರು ಸ.ಉ.ಹಿ.ಪ್ರಾ.ಶಾಲೆಯಲ್ಲಿ ನಡೆದ ಉಚಿತ ವೈದ್ಯಕೀಯ ಶಿಬಿರದಲ್ಲಿ ಕಣ್ಣು, ಎಲುಬು,ಕೀಲು,ಕಿವಿ, ಮೂಗು ಮತ್ತು ಗಂಟಲು ಸಾಮಾನ್ಯ ರೋಗಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಹಲವಾರು ಮಂದಿ ಶಿಬಿರದ ಮೂಲಕ ಪ್ರಯೋಜನ ಪಡೆದುಕೊಂಡರು.