ಪುತ್ತೂರು: ಕೊಂಬೆಟ್ಟು ಸರಕಾರಿ ಪ್ರೌಢಶಾಲೆಗೆ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್‌ನಿಂದ ಬಯೋ ಮೆಟ್ರಿಕ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಅ.8ರಂದು ಕೊಡುಗೆಯಾಗಿ ನೀಡಲಾಯಿತು.
ರೋಟರಿ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಮೊಹಮ್ಮದ್ ರಫೀಕ್ ದರ್ಬೆ, ಕಾರ್ಯದರ್ಶಿ ಚಂದ್ರಹಾಸ ರೈ, ಸ್ಥಾಪಕ ಅಧ್ಯಕ್ಷ ಸಂತೋಷ್ ಶೆಟ್ಟಿ, ಉಪಾಧ್ಯಕ್ಷ ಅಶೋಕ್ ನಾಯ್ಕ್ ಕೆದಿಲ, ಸಾರ್ಜೆಂಟ್ ಜಯಪ್ರಕಾಶ್ ಅಮೈ, ಕ್ಲಬ್ ಸರ್ವಿಸ್ ಡೈರೆಕ್ಟರ್ ಅಶ್ರಫ್ ಮುಕ್ವೆ, ಸದಸ್ಯರಾದ ಜಯಪ್ರಕಾಶ್ ಎ. ಎಲ್., ಪ್ರದೀಪ್ ಬೊಳ್ವಾರ್, ಪ್ರದೀಪ್ ಪೂಜಾರಿ, ಸೆನೆಟ್ ಭುವನ್, ಪ್ರೌಢಶಾಲಾ ಉಪಪ್ರಾಂಶುಪಾಲರಾದ ವಸಂತ ಮೂಲ್ಯ, ಶಾಲಾ ಅಧ್ಯಾಪಕ ವೃಂದ, ಎಸ್. ಡಿ. ಎಂ. ಸಿ. ಸದಸ್ಯರು ಭಾಗವಹಿಸಿದ್ದರು.