ಬಾಲವನದಲ್ಲಿ ಡಾ| ಶಿವರಾಮ ಕಾರಂತರ ಜನ್ಮದಿನೋತ್ಸವ – ಮೂರು ದಿನ ಉಚಿತ ಪ್ರವೇಶ – ಎ.ಸಿ ಗಿರೀಶ್‌ನಂದನ್

0

ಪುತ್ತೂರು: ಕಡಲತಡಿಯ ಭಾರ್ಗವ ಜ್ಞಾನಪೀಠ ಡಾ| ಶಿವರಾಮ ಕಾರಂತರ 121ನೇ ಜನ್ಮದಿನಾಚರಣೆ ಮತ್ತು ಬಾಲವನ ಪ್ರಶಸ್ತಿ 2022ರ ಪ್ರದಾನ ಸಮಾರಂಭವು ಅ.10ರಂದು ಜರುಗಲಿದ್ದು, ಈ ಸಂದರ್ಭದಲ್ಲಿ ಕಾರಂತರ ಕುರಿತ ಬರಹದ ಪುಸ್ತಕಗಳು ಸಹಿತ ಸುಮಾರು 35ಕ್ಕೂ ಅಧಿಕ ಕರಕುಶಲ, ಗೃಹಪಯೋಗಿ ಮಳಿಗೆಗಳು ಪ್ರದರ್ಶಗಳು ನಡೆಯಲಿರುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಬಾಲನವಕ್ಕೆ ಮೂರು ದಿನ ಉಚಿತ ಪ್ರವೇಶ ನೀಡಲಾಗುವುದು ಎಂದು ಸಹಾಯಕ ಕಮೀಷನರ್ ಗಿರೀಶ್‌ನಂದನ್ ಅವರು ತಿಳಿಸಿದ್ದಾರೆ.
ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಹಾಯಕ ಆಯುಕ್ತರ ಕಚೇರಿ ಪುತ್ತೂರು, ಡಾ| ಶಿವರಾಮ ಕಾರಂತರ ಬಾಲವನ ಸಮಿತಿ ಪುತ್ತೂರು ಇದರ ವತಿಯಿಂದ ಈ ಕಾರ್ಯಕ್ರಮ ನಡೆಯಲಿದ್ದು ಬೆಳಿಗ್ಗೆ ಕಾರಂತರ ಜನ್ಮದಿನೋತ್ಸವ, ಸಂಜೆ ಹಿರಿಯ ರಂಗ ನಿರ್ದೇಶಕ ಅಕ್ಷರ ಕೆ ವಿ ಇವರಿಗೆ ಬಾಲವನ ಪ್ರಶಸ್ತಿ 2022ರ ಪ್ರದಾನ ಸಮಾರಂಭವು ನಡೆಯಲಿದೆ. ಕಾರಂತರ ಜನ್ಮದಿನೋತ್ಸವದ ಅಂಗವಾಗಿ ಅವರಿಗೆ ಪುರಸ್ಕೃತಗೊಂಡ ಜ್ಞಾನಪೀಠ ಪ್ರಶಸ್ತಿಯನ್ನು ಮತ್ತು ಕಾರಂತರು ಬರೆದ ಪುಸ್ತಕಗಳನ್ನು ಅಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. ಇದರ ಜೊತೆಗೆ ವರ್ಷಂಪ್ರತಿ ನಡೆಯುವ ಬಾಲವನ ಪ್ರಶಸ್ತಿ ಕಾರ್ಯಕ್ರಮ, ವಿಚಾರಗೋಷ್ಟಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ವಿವಿಧ ಪುಸ್ತಕ ಮೇಳ, ಕರಕುಶಲ ಮೇಳ ಹಾಗೂ ಕಲಾವಿದ ಕೇಶವ ಮೊಟ್ಟೆತ್ತಡ್ಕ ರವರ ಚಿತ್ರಕಲಾ ಪದರ್ಶನ ಸೇರಿದಂತೆ ೩೫ಕ್ಕೂ ಹೆಚ್ಚು ಗೃಹಪಯೋಗಿ ವಸ್ತುಗಳ ಪ್ರದರ್ಶನಗಳು ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here