ಶಾಲಾ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ , ಶಬ್ದ ಕೋಶ ಪುಸ್ತಕ ವಿತರಣೆ
ಪುತ್ತೂರು: ಸ್ವಾಮಿ ವಿವೇಕಾನಂದ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ (ರಿ) ಬೆಂಗಳೂರು ಇದರ ವತಿಯಿಂದ ದಿ. ನೀಲಮ್ಮ ದುಗ್ಗಪ್ಪಗೌಡ ದಂಡಿಮನೆ ಇವರ 50 ನೇ ವರ್ಷದ ಪುಣ್ಯ ಸ್ಮರಣಾ ದಿನ ಕಾರ್ಯಕ್ರಮವು ಅ. 17 ರಂದು ದಿ. ಕೆಮ್ಮಾರ ಬಾಲಕೃಷ್ಣ ಗೌಡ ವೇದಿಕೆ ಸ ಹಿ ಪ್ರಾ ಶಾಲೆ ಪೆರ್ಲಂಪಾಡಿ ಯಲ್ಲಿ ನಡೆಯಲಿದೆ ಎಂದು ಅವರ ಪುತ್ರ ಬೆಂಗಳೂರಿನ ಉದ್ಯಮಿ, ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಪುತ್ತೂರಿನ ಮುತ್ತು ದಂಡಿನ ಮನೆ ಮಹೇಶ್ ಗೌಡರವರು ತಿಳಿಸಿದ್ದಾರೆ.
ಪುಣ್ಯ ಸ್ಮರಣಾ ದಿನದ ಅಂಗವಾಗಿ ಸರಕಾರಿ ಹಿಪ್ರಾಶಾಲೆ ಪೆರ್ಲಂಪಾಡಿ ಮತ್ತು ಷಣ್ಮುಖ ದೇವ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ಮತ್ತು ಶಬ್ದಕೋಶ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವು ಕೊಂರ್ಬಡ್ಕ ತರವಾಡು ಮನೆಯ ಬಾಬು ರಾಜೇಂದ್ರ ಗೌಡ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಸಭಾ ಕಾರ್ಯಕ್ರಮವನ್ನು ಪುತ್ತೂರಿನ ಶಾಸಕರಾದ ಸಂಜೀವ ಮಠಂದೂರು ಉದ್ಘಾಟಿಸಲಿದ್ದು, ಷಣ್ಮುಖದೇವ ಪ್ರೌಢ ಶಾಲೆ ಪೆರ್ಲಂಪಾಡಿ ಇದರ ಅಧ್ಯಕ್ಷರಾದ ಕೆ ಆರ್ ಲಕ್ಮಣ ಗೌಡ ಕುಂಟಿಕಾನರವರು ಶುಭಾಶಂಸನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಳ್ತಿಗೆ ಗ್ರಾಪಂ ಅಧ್ಯಕ್ಷರಾದ ಶ್ಯಾಮ ಸುಂದರ ರೈ ಕೆರೆಮೂಲೆ ಭಾಗವಹಿಸಲಿದ್ದು, ವಿಶೇಷ ಅತಿಥಿಗಳಾಗಿ ಪುತ್ತೂರು ಶ್ರೀರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ಉಪಸ್ಥಿತರಿರುವರು. ಅತಿಥಿಗಳಾಗಿ ಪೆರ್ಲಂಪಾಡಿ ಷಣ್ಮುಖ ದೇವ ಪ್ರೌಢ ಶಾಲೆಯ ಸಂಚಾಲಕರಾದ ಗಣೇಶ್ ಭಟ್ ಮಾಪಲಮಜಲು, ಪೆರ್ಲಂಪಾಡಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ, ಪೆರ್ಲಂಪಾಡಿ ಸಹಿಪ್ರಾಶಾಲೆಯ ಮುಖ್ಯಗುರುಗಳಾದ ಲೀಲಾವತಿ, ಪೆರ್ಲಂಪಾಡಿ ಷಣ್ಮುಖ ದೇವ ಪ್ರೌಢ ಶಾಲೆಯ ಮುಖ್ಯಗುರಗಳಾದ ಕೃಷ್ಣವೇಣಿ, ಪೆರ್ಲಂಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀಧರ ಪೂಜಾರಿ ಭಾಗವಹಿಸಲಿದ್ದಾರೆ ಎಂದು ಮಹೇಶ್ ಗೌಡರವರು ತಿಲಿಸಿದ್ದಾರೆ.ಮಧ್ಯಾಹ್ನ ಗಂಟೆ 12.30 ರಿಂದ ಸಹಭೋಜನ ಕಾರ್ಯಕ್ರಮವೂ ನಡೆಯಲಿದೆ.