ಪುತ್ತೂರು: ಏಳ್ಮುಡಿ ದಿ. ಕೆ.ಪಿ ದಾಮೋದರನ್ ರವರ ಪತ್ನಿ ಯು.ಪಿ ಸತ್ಯವತಿಯವರ ಶ್ರದ್ಧಾಂಜಲಿ ಸಭೆಯು ಅ.16ರಂದು ಇಲ್ಲಿನ ವೆಂಕಟ್ರಮಣ ದೇವಸ್ಥಾನದ ಬಳಿಯ ಸುಕೃತೀಂದ್ರ ಹಾಲ್ ನಲ್ಲಿ ಜರುಗಿತು.
ನುಡಿ ನಮನ ಸಲ್ಲಿಸಿದ ಪತ್ರಕರ್ತ ಹರಿಪ್ರಸಾದ್ ರೈ ಮಾತನಾಡಿ, ಉತ್ತಮ ಸಂಘಟಕಿಯಾಗಿದ್ದ ಸತ್ಯವತಿಯವರು ಮಹಿಳಾ ಸಂಘಟನೆಗೆ ಪ್ರಮುಖ ಕೊಡುಗೆ ನೀಡಿದ್ದ ಅವರು ಕೇರಳ ಸಮಾಜದ ಬಲಪಡಿಸಿದವರು. ಅವರು ಉತ್ತಮ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದರು. ರೈಫಲ್ ಶೂಟಿಂಗ್ ತರಬೇತಿ ಪಡೆದಿದ್ದ ಅವರು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಕಲೆಯ ಬಗ್ಗೆ ಬಹಳಷ್ಟು ಆಸಕ್ತಿ ಹೊಂದಿದ್ದರು. ನೋವು, ನಲಿವು ಗಳ ಜೊತೆಗೆ ಮನೆಯಲ್ಲಿ ಸಂಸ್ಕಾರವನ್ನು ನೀಡಿದ ಸತ್ಯವತಿಯವರು 90ವರ್ಷಗಳ ಆರೋಗ್ಯ ಪೂರ್ಣ ಬದುಕು ಸಾಧಿಸಿದರಾಗಿದ್ದಾರೆ ಎಂದರು.
ತಿಯಾ ಸಮಾಜದ ಉಪಾಧ್ಯಕ್ಷ ಪುರುಷೋತ್ತಮ ಕೇಪುಳು(ಮೈರಾ) ಮಾತನಾಡಿ, ಆದರ್ಶ ಮಾತೆಯಾಗಿದ್ದ ಸತ್ಯವತಿಯವರು, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಿದವರು. ತಿಯಾ ಸಮಾಜದ ವತಿಯಿಂದ ಅವರನ್ನು ಸನ್ಮಾನಿಸಿ, ಗೌರವಿಸಲಾಗಿದೆ ಎಂದರು.
ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಉಲ್ಲಾಸ್ ಪೈ, ಮಾಜಿ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಸಿಡ್ಕೋದ ಅಧ್ಯಕ್ಷ ಟಿ.ವಿ ರವೀಂದ್ರನ್, ಪ್ರಗತಿ ಸ್ಟಡಿ ಸೆಂಟರ್ ನ ಗೋಕುಲ್ ನಾಥ್, ಅರಿಯಡ್ಕ ಚಿಕ್ಕಪ್ಪ ನಾಕ್, ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ, ನ್ಯಾಯವಾದಿ ಪಿ.ಕೆ ಸತೀಶನ್, ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್,
ಸತ್ಯವತಿಯವರ ಪುತ್ರರಾದ ರಾಜೇಶ್ ಯು.ಪಿ., ಹರೀಶ್ ಯು.ಪಿ. ಪುತ್ರಿ ಪುಷ್ಪ ಶಿವಾಜಿ, ಸೊಸೆಯಂದಿರಾದ ದುರ್ಗಾ ಸುರೇಶ್, ಸಂಧ್ಯಾ ರಾಜೇಶ್, ವಿಂದು ಹರೀಶ್, ಅಳಿಯ ಕೆ.ಶಿವಾಜಿ, ಸಂತೋಷ್ ಮುರ ಸಹಿತ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.