ಸಿರಿಕಡಮಜಲು ಕೃಷಿ ಕ್ಷೇತ್ರಕ್ಕೆ‌ ದಿವ್ಯಜ್ಯೋತಿ ಜಾಗೃತಿ ಸಂಸ್ಥಾನದ  ಸಾದ್ವಿ ಉನ್‌ವೇಶ ಭಾರತೀ ಮಾತಾಜಿ ಸಂದರ್ಶನ

0
ಪುತ್ತೂರು: ಸಿರಿಕಡಮಜಲು ಕೃಷಿ ಕ್ಷೇತ್ರಕ್ಕೆ ಬೆಂಗಳೂರಿನ ದಾಸರಹಳ್ಳಿ ದಿವ್ಯಜ್ಯೋತಿ ಜಾಗೃತಿ ಸಂಸ್ಥಾನದ ಸಾದ್ವಿ ಉನ್‌ವೇಶ ಭಾರತೀ ಮಾತಾಜಿಯವರು ಅವರ ಅನುಯಾಯಿಗಳೊಂದಿಗೆ ಅ. 18 ರಂದು ಭೇಟಿ ನೀಡಿ ಸಮಗ್ರ ಕೃಷಿ ವೀಕ್ಷಣೆ ಮಾಡಿದರು‌.
ಕರಾವಳಿಯ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಕೃಷಿ ಸಂಸ್ಕೃತಿಯ ಅಧ್ಯಯನ ಮತ್ತು ಪ್ರಚಾರದ ನಿಮಿತ್ತವಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ, ಧರ್ಮಸ್ಥಳ ಮಂಜುನಾಥೇಶ್ವರ ಕ್ಷೇತ್ರ, ಪುತ್ತೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರ, ಮಂಗಳೂರಿನ ಕದ್ರಿ, ಕುದ್ರೋಳಿ,  ಮಂಗಳಾದೇವಿ ಇನ್ನಿತರ ಧಾರ್ಮಿಕ ಮತ್ತು ಪ್ರೇಕ್ಷಣೀಯ ಸ್ಥಳಗಳ ಅಧ್ಯಯನಕ್ಕಾಗಿ ಕರಾವಳಿಗೆ ಬಂದಿರುತ್ತಾರೆ. ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ಸಾದ್ವಿಯವರನ್ನು ಕಡಮಜಲು ಸುಭಾಸ್ ರೈ ಮತ್ತು ಪ್ರೀತಿ ಎಸ್. ರೈ ದಂಪತಿ ಗೌರವಿಸಿದರು. ಕೃಷಿ ಸಂಸ್ಕೃತಿ ಮತ್ತು ಋಷಿ ಸಂಸ್ಕೃತಿ ಭಾರತದ ಸಂಸ್ಕೃತಿಯಾಗಿದೆ. ಇದನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರಲ್ಲಿದೆ ಎಂದು ಹೇಳಿದ ಸಾದ್ವಿಯವರು ಆಶೀರ್ವದಿಸಿದರು. ಅವರ ಅನುಯಾಯಿಗಳಾದ ರಜನಿ ಬೆಂಗಳೂರು, ಶ್ರೀನಿವಾಸ, ಅನಿಲ್ ಕಳಸಾಪುರ, ಶ್ರಮಣಿ ಪುತ್ತೂರು ಜೊತೆಗಿದ್ದರು. ಸಂಜೀವ ಪೂಜಾರಿ ಗುಂಡಿಬಳ್ಳ, ಗೋಪಾಲ ಗೌಡ ಪಟ್ಟೆ,  ವಿನೋದ್ ಪೂಜಾರಿ ಕೋಡಿಯಡ್ಕ, ಪುಷ್ಪ ಕೋಡಿಯಡ್ಕ, ಶಾರದ ಕೋಡಿಯಡ್ಕ, ಸುಲೋಚನಾ ಆಚಾರ್ಯ ಮಾರುತಿಪುರ, ಸರಸ್ವತಿ ಹೆಗ್ಗಡ್ತಿ ಮಾರುತಿಪುರ, ಸುಮಿತ್ರಾ ಕಡಮಜಲು ಉಪಸ್ಥಿತರಿದ್ದರು. ‌ಕರಾವಳಿಯ ಆತಿಥ್ಯವನ್ನು ಸಾದ್ವಿಯವರು ಇದೇ ವೇಳೆ ಶ್ಲಾಘಿಸಿದರು.

LEAVE A REPLY

Please enter your comment!
Please enter your name here