ಪಾಲಿಂಜೆ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀಶನೈಶ್ಚರ ಪೂಜೆ, ದುರ್ಗಾಪೂಜೆ, ಕಾರ್ತಿಕ ಪೂಜೆ

0

ಪುತ್ತೂರು : ಕುರಿಯ ಪಾಲಿಂಜೆ ಸಾರ್ವಜನಿಕ ಶ್ರೀಶನೈಶ್ವರ ಪೂಜಾ ಸಮಿತಿ ವತಿಯಿಂದ ೭ನೇ ವರ್ಷದ ಸಾರ್ವಜನಿಕ ಶ್ರೀಶನೈಶ್ವರ ಪೂಜೆ, ದುರ್ಗಾಪೂಜೆ, ಕಾರ್ತಿಕ ಪೂಜೆ ಅ.೨೨ರಂದು ಸಂಜೆ ಪಾಲಿಂಜೆ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.

ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಶ್ರೀ ಶನೈಶ್ಚರ ಪೂಜೆ, ದುರ್ಗಾ ಪೂಜೆ, ಮಹಾವಿಷ್ಣುಮೂರ್ತಿ ದೇವರಿಗೆ ಕಾರ್ತಿಕ ಪೂಜೆ , ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು.

ಬಳಿಕ ನಡೆದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿರವರು ಮಾತನಾಡಿ, ಸಂಪತ್ತು, ಐಶ್ವರ್ಯ, ಬೋಗದ ಜೀವನವೇ ಮಾತ್ರ ಜೀವನವಲ್ಲ. ಆದ್ಯಾತ್ಮಕತೆ, ದೇವತಾ ಕಾರ್ಯ ಸಂಪತ್ತು. ಇವುಗಳ ಕೊರತೆಯಿಂದ ಇಂದು ಸಮಾಜದಲ್ಲಿ ಸಂಘರ್ಷಗಳಿ ನಡೆಯುತ್ತದೆ. ಇವುಗಳನ್ನು ಭಕ್ತಿ ಮಾರ್ಗ ದಿಂದ ಮಾತ್ರ ಪರಿಹಾರ ದೊರೆಯಲಿದೆ ಎಂದರು. ಹಿಂದೂ ಸಮಾಜದ ಸದೃಡವಾಗದಿದ್ದರೆ ಕಾಶ್ಮೀರ ಸ್ಥಿತಿಇಲ್ಲಿ ನಡೆಯಲಿದೆ. ಪ್ರತಿಯೊಬ್ಬರು ನಮ್ಮ ಭವಿಷ್ಯದ ಬಗ್ಗೆ ಚಿಂತಿಸಬೇಕು. ದುಶ್ಚಟಮುಕ್ತ ಸಮಾಜಕ್ಮೆ ಪ್ರಯತ್ನ ಮಾಡಬೆಕು. ದುಶ್ಚಟಕ್ಕೆ ಒಳಗಾದವರನ್ನು ದೂರಮಾಡಬಾರದು ಸಮಾಜದವ್ಯಕ್ತಿ ಎಂದು ಪರಿವರ್ತನೆ ಮಾಡಿ ಮುಖ್ಯ ವಾಹಿನಿಗೆ ತರಬೇಕು. ನಾವು ಪ್ರತಿನಿತ್ಯ ವ್ಯರ್ಥ ಮಾಡುವ ಹಣವನ್ನು ಉಳಿಸಿ ಊರಿನ ದೇವಸ್ಥಾನ ಅಭಿವೃದ್ಧಿ ಬಳಸಬೇಕು. ಪುರಾತನ ಸಂಸ್ಕೃತಿ, ಆಚರಣೆಗಳು ನಮ್ಮಶಕ್ತಿ. ಅದು ಜೀವನದ ಪ್ರಮುಖ ಅಂಶ. ಅದನ್ನು ಅಳವಡಿಸಿಕೊಳ್ಳಬೇಕು. ಇಂತಹ ಪವಿತ್ರ ಆಚರಣೆಗಳು ನಿಂತಿರುವುದರಿಂದ ದಾರಿದ್ರ್ಯ ಬಂದಿದೆ. ಆಧುನಿಕ ಶೈಲಿಯ ಆಹಾರ ಸೇವನೆಯ ವೈಪರೀತ್ಯಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದ ಸ್ವಾಮೀಜಿಯವರು ಹಡೀಲು ಗೆದ್ದಯಲ್ಲಿಬೇಸಾಯ, ಕೃಷಿ, ತರಕಾರಿ ಮಾಡಬೇಕು. ಗದ್ದೆಯಲ್ಲಿ ನಿರಂತ ಕೃಷಿಯಿಂದ ಭೂಮಿಯಲ್ಲಿ ನೀರಿಂಗಿಸಿ ತಾಪಮಾಣ ಕಡಿಮೆ ಮಾಡಲು ನಾವೆಲ್ಲ ಪ್ರಯತ್ನಿಸಬೇಕು ಎಂದು ಹೇಳಿದರು.


ರೇಖನಾಥ ರೈ ಸ್ವಾಗತಿಸಿ, ವಂದಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು, ಪೂಜಾ ಸಮಿತಿ ಪದಾಧಿಕಾರಿಗಳು ಸೇರಿದಂತೆ ನೂರಾರು ಮಂದಿ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಭಾಕಾರ್ಯಕ್ರಮದ ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here